R. Ashwin: ಆರ್. ಅಶ್ವಿನ್​ಗೆ ಕೋವಿಡ್-19 ಪಾಸಿಟಿವ್: ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಶಾಕ್ | Ravichandran Ashwin testing COVID 19 positive He has not travelled to the United Kingdom for ENG vs IND 5th Test


Ravichandran Ashwin Test COVID-19 Positive: ಜುಲೈ 1 ರಿಂದ ಭಾರತ- ಇಂಗ್ಲೆಂಡ್ ನಡುವೆ ಐದನೇ ಟೆಸ್ಟ್ ಪಂದ್ಯ ಶುರುವಾಗಲಿದೆ. ಆದರೆ, ಇದಕ್ಕೂ ಮುನ್ನವೇ ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ ಉಂಟಾಗಿದೆ. ಪ್ರಮುಖ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ.

ಭಾರತ ಕ್ರಿಕೆಟ್ ತಂಡ (Indian Cricket Team) ಸದ್ಯ ಆಂಗ್ಲರ ನಾಡಿಗೆ ತೆರಳಿದ್ದು ಬಾಕಿ ಇರುವ ಒಂದು ಟೆಸ್ಟ್ ಪಂದ್ಯವನ್ನು ಆಡಲು ತಯಾರಿ ನಡೆಸುತ್ತಿದೆ. ಕಳೆದ ವರ್ಷ ಇಂಗ್ಲೆಂಡ್ (ENG vs IND) ಪ್ರವಾಸ ಬೆಳೆಸಿದ್ದಾಗ 5 ಪಂದ್ಯಗಳ ಟೆಸ್ಟ್​​ ಸರಣಿಯ ಪೈಕಿ ನಾಲ್ಕನ್ನು ಮಾತ್ರ ಆಡಿತ್ತು. ಇದೀಗ ಉಳಿದಿರುವ ಒಂದು ಪಂದ್ಯವನ್ನು ಈ ಪ್ರವಾಸದಲ್ಲಿ ಆಡಲಿದೆ. ಭಾರತ ಈ ಟೆಸ್ಟ್ ಸರಣಿಯಲ್ಲಿ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ. ಜುಲೈ 1 ರಿಂದ ಬರ್ಮಿಂಗ್​ಹ್ಯಾಮ್​ನಲ್ಲಿ ಐದನೇ ಟೆಸ್ಟ್ ಕದನ ಶುರುವಾಗಲಿದೆ. ಆದರೆ, ಇದಕ್ಕೂ ಮುನ್ನವೇ ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಪ್ರಮುಖ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಹೀಗಾಗಿ ಇವರು ಇಂಗ್ಲೆಂಡ್ ಪ್ರವಾಸಕ್ಕೆ ಕೂಡ ತೆರಳದೆ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.

ಈ ಬಗ್ಗೆ ಬಿಸಿಸಿಐ ಮೂಲಗಳು ಪಿಟಿಐಗೆ ಮಾಹಿತಿ ನೀಡಿದ್ದು, “ಕೋವಿಡ್-19 ಪಾಸಿಟಿವ್ ಬಂದ ಕಾರಣ ಭಾರತ ತಂಡದ ಆಟಗಾರರ ಜೊತೆ ಆರ್. ಅಶ್ವಿನ್ ಇಂಗ್ಲೆಂಡ್​ಗೆ ತೆರಳಿಲ್ಲ. ಅವರು ಸದ್ಯ ಕಠಿಣ ಕ್ವಾರಂಟೈನ್​ನಲ್ಲಿದ್ದಾರೆ. ವರದಿ ನೆಗೆಟಿವ್ ಬಂದ ಬಳಿಕ ಎಲ್ಲ ನಿಯಮವನ್ನು ಪಾಲಿಸಿ ತಂಡ ಸೇರಿಕೊಳ್ಳಲಿದ್ದಾರೆ. ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಅವರು ಗುಣಮುಖರಾಗುವ ನಂಬಿಕೆ ಇದೆ,” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೂನ್ 24 ರಿಂದ 27 ರವರೆಗೆ ಭಾರತ ತಂಡ ಲೀಸೆಸ್ಟರ್‌ಶೈರ್ ಕೌಂಟಿ ತಂಡದ ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದರಿಂದ ಅಶ್ವಿನ್ ಹೊರಗುಳಿಯಲಿದ್ದಾರೆ.

IND vs IRE: ಐರ್ಲೆಂಡ್‌ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಸಿಹಿ ಸುದ್ದಿ ನೀಡಿದ ಬಿಸಿಸಿಐ

ಇಂಗ್ಲೆಂಡ್ ತಲುಪಿದ ಪಂತ್-ಅಯ್ಯರ್:

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಗಿದ ಬೆನ್ನಲ್ಲೇ ಭಾರತದ ಟೆಸ್ಟ್‌ ತಂಡದ ಸದಸ್ಯರಾದ ರಿಷಭ್‌ ಪಂತ್‌ ಮತ್ತು ಶ್ರೇಯಸ್‌ ಅಯ್ಯರ್‌ ಇಂಗ್ಲೆಂಡ್‌ನ‌ತ್ತ ಪ್ರಯಾಣ ಬೆಳೆಸಿದರು. ಇವರಿಬ್ಬರಿಗೂ ಈ ಟೆಸ್ಟ್ ಮಖ್ಯವಾಗಿದೆ. ಕಳಪೆ ಫಾರ್ಮ್​ನಿಂದ ತತ್ತರಿಸಿರುವ ಇವರು ದೊಡ್ಡ ರನ್ ಕಲೆಹಾಕಬೇಕಾದ ಒತ್ತಡದಲ್ಲಿದ್ದಾರೆ. ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಅಯ್ಯರ್- ಪಂತ್ ಇಬ್ಬರೂ ಸಂಪೂರ್ಣ ವೈಫಲ್ಯ ಅನುಭವಿಸಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು.

ನೆಟ್​​ನಲ್ಲಿ ಭರ್ಜರಿ ಅಭ್ಯಾಸ:

ಇನ್ನು ಬಹುನಿರೀಕ್ಷಿತ ಟೆಸ್ಟ್ ಪಂದ್ಯವನ್ನು ಮುನ್ನಡೆಸುತ್ತಿರುವ ನಾಯಕ ರೋಹಿತ್ ಶರ್ಮಾ ಮತ್ತು ಸಹ ಓಪನರ್ ಶುಭ್ಮನ್ ಗಿಲ್ ತಮ್ಮ ಮೊದಲ ನೆಟ್ ಸೆಷನ್‌ನಲ್ಲಿ ಭರ್ಜರಿ ಅಭ್ಯಾಸ ಮಾಡುತ್ತಿರುವುದು ಕಂಡುಬಂತು. ರೋಹಿತ್ ಮತ್ತು ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ಬಿಸಿಸಿಐ ಹಂಚಿಕೊಂಡ ಕಿರು ಕ್ಲಿಪ್‌ನ ಮುಂಭಾಗದ ಪಾದದ ರಕ್ಷಣೆಯ ಮೇಲೆ ಕೇಂದ್ರೀಕರಿಸಿದ್ದಾರೆ. ಅದರಲ್ಲೂ ಹಿಟ್​ಮ್ಯಾನ್ ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು. ರೋಹಿತ್ ಅವರೊಂದಿಗೆ ಗಿಲ್ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ. ಏಕೆಂದರೆ ಕೆಎಲ್ ರಾಹುಲ್ ಗಾಯದ ಕಾರಣದಿಂದಾಗಿ ಸರಣಿಯಿಂದ ಹೊರಬಿದ್ದಿದ್ದಾರೆ.

ಭಾರತ ತಂಡ: ರೋಹಿತ್‌ ಶರ್ಮ (ನಾಯಕ), ಶುಭ್ಮನ್ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಹನುಮ ವಿಹಾರಿ, ಚೇತೇಶ್ವರ್‌ ಪೂಜಾರ, ರಿಷಭ್‌ ಪಂತ್‌, ಕೆಎಸ್‌. ಭರತ್‌, ರವೀಂದ್ರ ಜಡೇಜ, ಆರ್‌. ಅಶ್ವಿ‌ನ್‌, ಶಾರ್ದೂಲ್‌ ಠಾಕೂರ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಉಮೇಶ್‌ ಯಾದವ್‌, ಪ್ರಸಿದ್ಧ್ ಕೃಷ್ಣ.

TV9 Kannada


Leave a Reply

Your email address will not be published.