Radhika Pandit: ರಜೆಯ​ ಮೂಡ್​ನಲ್ಲಿ ಯಶ್, ರಾಧಿಕಾ ಪಂಡಿತ್; ಮರಳಿನಲ್ಲಿ ಮಕ್ಕಳ ಜತೆ ಆಟ ಆಡಿದ ದಂಪತಿ | Radhika Pandit And Yash Spending Quality time with Ayra And Yatharv in Beach


Radhika Pandit: ರಜೆಯ​ ಮೂಡ್​ನಲ್ಲಿ ಯಶ್, ರಾಧಿಕಾ ಪಂಡಿತ್; ಮರಳಿನಲ್ಲಿ ಮಕ್ಕಳ ಜತೆ ಆಟ ಆಡಿದ ದಂಪತಿ

ಯಶ್-ರಾಧಿಕಾ ಪಂಡಿತ್

‘ಕೆಜಿಎಫ್ ಚಾಪ್ಟರ್ 2’ ಸಿನಿಮಾ (KGF Chapter 2) ಬಾಕ್ಸ್ ಆಫೀಸ್​ನಲ್ಲಿ ಗೆದ್ದು ಬೀಗಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದೆ. ಸಿನಿಮಾ ತೆರೆಗೆ ಬಂದ ನಂತರದಲ್ಲಿ ಯಶ್ ವೆಕೇಶನ್ ಮೂಡ್​ಗೆ ಹೋಗಿದ್ದಾರೆ. ‘ರಾಕಿಂಗ್ ಸ್ಟಾರ್’ ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕುಟುಂಬಕ್ಕೆ ಸಮಯ ಮೀಸಲಿಡುತ್ತಾರೆ. ಅವರು ಫ್ಯಾಮಿಲಿ ಮ್ಯಾನ್. ಈ ಕಾರಣಕ್ಕೆ ಯಶ್ (Yash) ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಹೀಗಾಗಿ, ಅವರು ಮಕ್ಕಳು ಹಾಗೂ ಪತ್ನಿ ಜತೆ ಸಮಯ ಕಳೆಯುತ್ತಿದ್ದಾರೆ. ಈ ಫೋಟೋವನ್ನು ರಾಧಿಕಾ ಪಂಡಿತ್ (Radhika Pandit) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

‘ಕೆಜಿಎಫ್ 2’ ಸಿನಿಮಾ ಕೆಲಸಗಳಲ್ಲಿ ಯಶ್ ಸಖತ್ ಬ್ಯುಸಿ ಆಗಿದ್ದರು. ಪ್ರಚಾರಕ್ಕಾಗಿ ಅವರು ನಾನಾ ರಾಜ್ಯಗಳಿಗೆ ತೆರಳಿದ್ದರು. ಸುಮಾರು ಒಂದು ತಿಂಗಳ ಕಾಲ ಪ್ರಚಾರ ಕಾರ್ಯದಲ್ಲಿ ಮುಳುಗಿ ಹೋಗಿದ್ದರು. ಈಗ ಅವರು ರಿಲೀಫ್ ಮೂಡ್​ಗೆ ಹೋಗಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಬೀಚ್​ಗೆ ತೆರಳಿದ್ದಾರೆ. ಮಕ್ಕಳಾದ ಆಯ್ರಾ ಹಾಗೂ ಯಥರ್ವ್​ ಕೂಡ ಇವರ ಜತೆ ಇದ್ದಾರೆ. ಬೀಚ್​ನಲ್ಲಿ ಅವರು ಮರಳಿನ ಜತೆ ಆಟ ಆಡುತ್ತಿದ್ದಾರೆ.

ರಾಧಿಕಾ ಪಂಡಿತ್ ನಟನೆಯಿಂದ ದೂರವೇ ಉಳಿದುಕೊಂಡಿದ್ದಾರೆ. ಆದರೆ, ಅವರು ಚಿತ್ರರಂಗದ ಜತೆಗೆ ಇರುವ ನಂಟನ್ನು ಕಡಿದುಕೊಂಡಿಲ್ಲ. ಯಶ್ ಮಾಡುವ ಕೆಲಸಗಳಿಗೆ ರಾಧಿಕಾ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಇನ್ನು, ಕುಟುಂಬದ ಆರೈಕೆಗೆ ಹೆಚ್ಚು ಸಮಯ ಮೀಸಲಿಟ್ಟಿದ್ದಾರೆ. ಮಕ್ಕಳ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಸದ್ಯ, ‘ಕೆಜಿಎಫ್ 3’ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಈ ಸಿನಿಮಾದ ಕೆಲಸಗಳು ಯಾವಾಗ ಆರಂಭಗೊಳ್ಳಲಿದೆ ಎಂಬ ಬಗ್ಗೆ ಇನ್ನೂ ಅಧಿಕೃತವಾಗಿಲ್ಲ. ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ. ಮತ್ತೊಂದು ಸಿನಿಮಾದ ಕೆಲಸಗಳು ಆರಂಭಗೊಳ್ಳುವುದಕ್ಕೂ ಮೊದಲು ಯಶ್ ಅವರು ಒಂದು ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾರೆ.

2016ರಲ್ಲಿ ‘ಸಂತು ಸ್ಟ್ರೇಟ್​ ಫಾರ್ವರ್ಡ್​’ ಚಿತ್ರ ತೆರೆಗೆ ಬಂದ ನಂತರದಲ್ಲಿ ರಾಧಿಕಾ ಪಂಡಿತ್​ ಒಂದು ಬ್ರೇಕ್​ ಪಡೆದುಕೊಂಡರು. ಆ ಬಳಿಕ 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಚಿತ್ರದಲ್ಲಿ ರಾಧಿಕಾ ನಟಿಸಿದ್ದರು. ಇದಾದ ನಂತರದಲ್ಲಿ ಅವರು ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ. ಅವರು ಬೇಗ ನಟನೆಗೆ ಮರಳಲಿ ಎಂಬುದು ಅಭಿಮಾನಿಗಳ ಆಸೆ. ಇದನ್ನು ಅವರು ಯಾವಾಗ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

TV9 Kannada


Leave a Reply

Your email address will not be published.