Raghavendra Rajkumar: ‘ಜೇಮ್ಸ್​’ಗೆ ರಾಘಣ್ಣ ಡಬ್ಬಿಂಗ್; ಫೋಟೋಗಳು ವೈರಲ್ | Raghavendra Rajkumar James Movie dubbing Photos goes viral


James | Puneeth Rajkumar: ರಾಘವೇಂದ್ರ ರಾಜ್​ಕುಮಾರ್ ಅವರು ‘ಜೇಮ್ಸ್’ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಈ ಸಂದರ್ಭದ ಚಿತ್ರಗಳು ವೈರಲ್ ಆಗಿವೆ.

[embed]https://www.youtube.com/watch?v=VmULjwvpYQ0[/embed]

ನಟ ರಾಘವೇಂದ್ರ ರಾಜ್​ಕುಮಾರ್ ಅವರು ‘ಜೇಮ್ಸ್’ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಪುನೀತ್ ನಟನೆಯ ಕೊನೆಯ ಚಿತ್ರವಾಗಿರುವ ‘ಜೇಮ್ಸ್’ ಮಾರ್ಚ್ 17ರಂದು ಅಪ್ಪು ಜನ್ಮದಿನದಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಹಾಗೂ ರಾಘಣ್ಣ ವಿಶೇಷ ಪಾತ್ರ ಮಾಡಿದ್ದಾರೆ. ಪುನೀತ್ ಪಾತ್ರಕ್ಕೆ ಶಿವರಾಜ್​ಕುಮಾರ್ ಧ್ವನಿ ನೀಡಿದ್ದಾರೆ. ಇತ್ತೀಚೆಗಷ್ಟೇ ಅವರು ಡಬ್ಬಿಂಗ್ ಮುಗಿಸಿದ್ದರು. ಇದೀಗ ರಾಘವೇಂದ್ರ ರಾಜ್​ಕುಮಾರ್ ಸ್ಟುಡಿಯೋಗೆ ಆಗಮಿಸಿ, ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಈ ಸಂದರ್ಭದ ಚಿತ್ರಗಳು ವೈರಲ್ ಆಗಿವೆ. ಚೇತನ್ ಕುಮಾರ್ ‘ಜೇಮ್ಸ್’ಗೆ ಆಕ್ಷನ್ ಕಟ್ ಹೇಳಿದ್ದು, ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದಾರೆ. ‘ಜೇಮ್ಸ್’ ಚಿತ್ರವನ್ನು ಬರಮಾಡಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


TV9 Kannada


Leave a Reply

Your email address will not be published.