Rahul Dravid: ಕೋಚ್ ಆದ ಚೊಚ್ಚಲ ಟೆಸ್ಟ್​ ಸರಣಿಯಲ್ಲೇ ಗೆಲುವು: ಖುಷಿಯಲ್ಲಿ ರಾಹುಲ್ ದ್ರಾವಿಡ್ ಹೇಳಿದ್ದೇನು ಗೊತ್ತಾ? | India vs New Zealand Coach Rahul Dravid Talking After India register emphatic 372 run win in 2nd Test


Rahul Dravid: ಕೋಚ್ ಆದ ಚೊಚ್ಚಲ ಟೆಸ್ಟ್​ ಸರಣಿಯಲ್ಲೇ ಗೆಲುವು: ಖುಷಿಯಲ್ಲಿ ರಾಹುಲ್ ದ್ರಾವಿಡ್ ಹೇಳಿದ್ದೇನು ಗೊತ್ತಾ?

Rahul Dravid India vs New Zealand 2nd Test

ನ್ಯೂಜಿಲೆಂಡ್ ವಿರುದ್ಧ ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಭಾರತ (India vs New Zealand) ಗೆಲುವಿನ ಅಂಚಿನಲ್ಲಿ ಎಡವಿದ ಪರಿಣಾಮ ಎರಡನೇ ಪಂದ್ಯ (2nd Test) ಸಾಕಷ್ಟು ಕುತೂಹಲ ಕೆರಳಿಸಿತ್ತು. ಭಾರತದ ನೆಲದಲ್ಲಿ ಈವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆಲ್ಲದ ಕಿವೀಸ್ ಪಡೆಗೆ ಇತಿಹಾಸ ರಚಿಸುವ ಅವಕಾಶ ಒಂದುಕಡೆಯಿದ್ದರೆ, ಇತ್ತ ವಿರಾಟ್ ಕೊಹ್ಲಿ (Virat Kohli) ಕಮ್​ಬ್ಯಾಕ್​ ನಿಂದ ಬಲಿಷ್ಠವಾಗಿದ್ದ ಟೀಮ್ ಇಂಡಿಯಾ (Team India) ಸರಣಿ ಗೆಲುವಿನ ಪ್ಲಾನ್ ರೂಪಿಸಿತ್ತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಈ ಎರಡನೇ ಟೆಸ್ಟ್ ಪಂದ್ಯ ಸಂಪೂರ್ಣವಾಗಿ ಭಾರತ (India) ಅಂದುಕೊಂಡಂತೇ ನಡೆಯಿತು. ಕೊಹ್ಲಿ ಪಡೆಯ ಬೆಂಕಿ ಬೌಲಿಂಗ್​ಗೆ ನ್ಯೂಜಿಲೆಂಡ್ ಬ್ಯಾಟರ್​ಗಳು ತರಗೆಲೆಯಂತೆ ಉರುಳಿದರು. ದಾಖಲೆಯ 372 ರನ್​ಗಳಿಂದ ಜಯ ಸಾಧಿಸಿದ್ದು ಕೋಚ್ ಆಗಿ ಟೆಸ್ಟ್ ಸರಣಿಯಲ್ಲಿ ರಾಹುಲ್ ದ್ರಾವಿಡ್​ಗೆ (Rahul Dravid) ಸಿಕ್ಕ ಮೊದಲ ಗೆಲುವು ಇದಾಗಿದೆ. ಈ ಬಗ್ಗೆ ಅವರು ಪಂದ್ಯ ಮುಗಿದ ಬಳಿಕ ಮಾತನಾಡಿದ್ದಾರೆ.

“ಗೆಲುವಿನ ಮೂಲಕ ಟೆಸ್ಟ್ ಸರಣಿಯನ್ನು ಉತ್ತಮವಾಗಿ ಮುಗಿಸಿದ್ದೇವೆ. ಕಾನ್ಪುರದ ಟೆಸ್ಟ್​ನಲ್ಲಿ ಗೆಲುವಿನ ಸನಿಹದಲ್ಲಿದ್ದೆವು. ಆದರೆ, ಕೊನೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಗೆಲುವಿನ ಕ್ರೆಡಿಟ್ ತಂಡಕ್ಕೆ ಸಲ್ಲಬೇಕು. ಸಂಕಷ್ಟದ ಸಂದರ್ಭದಲ್ಲಿ ನೇತೃತ್ವ ವಹಿಸಿ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಕಾನ್ಪುರ ಟೆಸ್ಟ್​ನಲ್ಲಿ ಗೆಲುವು ಸಾಧಿಸಲಾಗಿಲ್ಲ ಎಂಬ ಬೇಸರದ ನಡುವೆ ಇಲ್ಲಿ ಕಮ್​ಬ್ಯಾಕ್ ಮಾಡಿ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡಿದ್ದು ಹೆಮ್ಮೆ ಪಡುವಂತಿದೆ” ಎಂದು ಹೇಳಿದರು.

“ಪ್ರಮುಖ ಹಿರಿಯ ಆಟಗಾರರು ಈ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದರು. ಆದರೆ, ಯುವ ಆಟಗಾರರು ಈ ಅವಕಾಶವನ್ನು ಎರಡೂ ಕೈಯಿಂದ ಬಾಜಿಕೊಂಡರು. ನಿನ್ನೆ ಜಯಂತ್ ಯಾದವ್​​ ಅಂದುಕೊಂಡಂತೆ ಬಾಲ್ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಇಂದು ಬೆಳಗ್ಗೆ ಅವರೇ ಉತ್ತಮ ಪ್ರದರ್ಶನ ನೀಡಿದರು. ಈ ತಂಡದಲ್ಲಿರುವ ಅನೇಕ ಆಟಗಾರರಿಗೆ ಅದರಲ್ಲೂ ಶ್ರೇಯಸ್ ಅಯ್ಯರ್, ಮಯಾಂಕ್, ಅಕ್ಷರ್ ಪಟೇಲ್, ಜಯಂತ್ ಯಾದವ್ ಅವರಿಗೆ ಟೆಸ್ಟ್ ಕ್ರಿಕೆಟ್ ಆಡಲು ಅವಕಾಶ ಸಿಗಲಿಲ್ಲ. ಆದರೆ, ಅವಕಾಶ ಸಿಕ್ಕಾಗ ಅತ್ಯುತ್ತಮ ಪ್ರದರ್ಶನ ನೀಡಿದ್ದು ನೋಡಲು ಖುಷಿಯಾಗುತ್ತದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ನಾನು ಪಂದ್ಯವನ್ನು ಗೆಲ್ಲಿಸಿಕೊಡುತ್ತೇನೆ ಎಂಬ ಭರವಸೆ ಇವರು ನಮಗೆ ಕೊಟ್ಟಿದ್ದಾರೆ.”

ಇದೇವೇಳೆ ಡಿಕ್ಲೇರ್ ಮಾಡಿದ ವಿಚಾರವಾಗಿ ಮಾತನಾಡಿದ ದ್ರಾವಿಡ್, “ನಾವು ಅದರ ಬಗ್ಗೆ ಹೆಚ್ಚಿನ ಯೋಚನೆ ಮಾಡಲಿಲ್ಲ. ಯಾಕಂದ್ರೆ, ಅಲ್ಲಿ ಸಾಕಷ್ಟು ಸಮಯವಿತ್ತು, ಅವರನ್ನು ಔಟ್ ಮಾಡುತ್ತೇವೆ ಎಂಬ ವಿಶ್ವಾಸವಿತ್ತು. ಅಲ್ಲದೆ ಯುವ ಆಟಗಾರರು ಈರೀತಿಯ ಕಷ್ಟದ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡಲು ಕಾದುಕುಳಿತಿದ್ದರು. ಇದು ಅವರಿಗೆ ಮುಂದೆ ಬೇರೆ ಪಿಚ್​ನಲ್ಲಿ ಆಡಲು ಸಹಕಾರಿ ಆಗಲಿದೆ” ಎಂದರು. ಮಾತು ಮುಂದುವರೆಸಿದ ಅವರು, “ಈ ಪಂದ್ಯ ಆರಂಭಕ್ಕೂ ಮುನ್ನ ನಮ್ಮ ಕೆಲ ಆಟಗಾರರು ಇಂಜುರಿಗೆ ತುತ್ತಾದರು. ಇದು ನಮಗೆ ಸವಾಲಾಗಿ ಪರಿಣಮಿಸಿತು. ಆಟಗಾರರು ಈಗಾಗಲೇ ಬೇರೆ ಬೇರೆ ಮಾದರಿಯಲ್ಲಿ ಸಾಕಷ್ಟು ಕ್ರಿಕೆಟ್ ಆಡಿ ಸುಸ್ತಾಗಿದ್ದಾರೆ. ನಾವು ಇದನ್ನೂ ಗಮನದಲ್ಲಿಟ್ಟುಕೊಳ್ಳಬೇಕು” ಎಂದು ಹೇಳಿದ್ದಾರೆ.

Virat Kohli: ಮೈದಾನದಲ್ಲೇ ಅಂಪೈರ್​ನ ಮೈಚಳಿ ಬಿಡಿಸಿದ ಕೊಹ್ಲಿ: ನೀವು ಫೀಲ್ಡ್ ಮಾಡಿ, ನಾನು ಅಂಪೈರ್ ಮಾಡ್ತೇನೆ ಎಂದ ವಿರಾಟ್

IND vs NZ: ತವರಿನಲ್ಲಿ ಸತತ 14ನೇ ಟೆಸ್ಟ್ ಸರಣಿ ಗೆದ್ದ ಭಾರತ! 6 ವರ್ಷಗಳ ಹಿಂದಿನ ಈ ದಾಖಲೆಯೂ ಪುಡಿಪುಡಿ

(India vs New Zealand Coach Rahul Dravid Talking After India register emphatic 372-run win in 2nd Test)

TV9 Kannada


Leave a Reply

Your email address will not be published. Required fields are marked *