ಯಾತ್ರೆಯು ಜನವರಿ 20 ರಂದು ಸಂಜೆ ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಲಿದ್ದು, ಜನವರಿ 30 ರಂದು ಶ್ರೀನಗರದಲ್ಲಿ ಧ್ವಜಾರೋಹಣದೊಂದಿಗೆ ಕೊನೆಗೊಳ್ಳಲಿದೆ ಎಂದು ವೇಣುಗೋಪಾಲ್ ಹೇಳಿದರು. “ಭಾರತ್ ಜೋಡೋ”ಯಾತ್ರೆಯ ಸಂದೇಶವು ಯಾತ್ರೆ ಹಾದುಹೋಗುವ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ

ರಾಹುಲ್ ಗಾಂಧಿ
ದೆಹಲಿ: ರಾಹುಲ್ ಗಾಂಧಿ (Bharat Jodo Yatra) ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ಜನವರಿ ಮೂರರಂದು ದೆಹಲಿ (Delhi) ಪ್ರವೇಶಿಸಲಿದೆ. 9 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶವನ್ನು ಕ್ರಮಿಸಿದ ನಂತರ ಶ್ರೀನಗರದಲ್ಲಿ ಇಂದು ಮುಕ್ತಾಯವಾಗಲಿದೆ. ಜನವರಿ 30ರಂದು ಶ್ರೀನಗರದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ರಾಹುಲ್ ಈ ಯಾತ್ರೆಯನ್ನು ಮುಕ್ತಾಯಗೊಳಿಸಲಿದ್ದಾರೆ. ದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ಜೈ ರಾಮ್ ರಮೇಶ್, ಭಾರತ ಜೋಡೋ ಯಾತ್ರೆ ಕನ್ಯಾಕುಮಾರಿಯ ಗಾಂಧಿ ಮಂಡಪುಂನಿಂದ ದೆಹಲಿಯ ಕೆಂಪುಕೋಟೆವರೆಗೆ 3,122 ಕಿಮೀ ಕ್ರಮಿಸಿದೆ. 108 ದಿನಗಳಲ್ಲಿ, ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣ ಮತ್ತು ದೆಹಲಿ ಒಂಬತ್ತು ರಾಜ್ಯಗಳ 49 ಜಿಲ್ಲೆಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವನ್ನು ಒಳಗೊಂಡಿದೆ. ಯಾತ್ರೆಯು ಜನವರಿ 3 ರಂದು ದೆಹಲಿಯಿಂದ ಹೊರಡಿ ಅದೇ ದಿನದಿಂದ ಜನವರಿ 5 ರವರೆಗೆ ಉತ್ತರ ಪ್ರದೇಶ, ಜನವರಿ 6 ರಿಂದ 10 ರವರೆಗೆ ಹರ್ಯಾಣ, ಜನವರಿ 11 ರಿಂದ 20 ರವರೆಗೆ ಪಂಜಾಬ್ ಮತ್ತು ಜನವರಿ 19 ರಂದು ಹಿಮಾಚಲ ಪ್ರದೇಶದಲ್ಲಿ ಒಂದು ದಿನವನ್ನು ಕಳೆಯುತ್ತದೆ.
ಯಾತ್ರೆಯು ಜನವರಿ 20 ರಂದು ಸಂಜೆ ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಲಿದ್ದು, ಜನವರಿ 30 ರಂದು ಶ್ರೀನಗರದಲ್ಲಿ ಧ್ವಜಾರೋಹಣದೊಂದಿಗೆ ಕೊನೆಗೊಳ್ಳಲಿದೆ ಎಂದು ವೇಣುಗೋಪಾಲ್ ಹೇಳಿದರು. “ಭಾರತ್ ಜೋಡೋ”ಯಾತ್ರೆಯ ಸಂದೇಶವು ಯಾತ್ರೆ ಹಾದುಹೋಗುವ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಅವರು ಹೇಳಿದರು.
ಹಲವಾರು ರಾಜ್ಯ ಮಟ್ಟದ ಯಾತ್ರೆಗಳನ್ನು ಈಗಾಗಲೇ ಘೋಷಿಸಲಾಗಿದೆ. ಮುಂಬರುವ ‘ಹಾಥ್ ಸೆ ಹಾಥ್ ಜೋಡೋ ಅಭಿಯಾನ’ ಭಾರತ್ ಜೋಡೋದ ಸಂದೇಶವನ್ನು ಪ್ರತಿಯೊಬ್ಬ ಭಾರತೀಯನ ಮನೆ ಬಾಗಿಲಿಗೆ ಕೊಂಡೊಯ್ಯಲಿದೆ ಎಂದು ಅವರು ಹೇಳಿದರು.
ಈ ಎಲ್ಲಾ ಚಟುವಟಿಕೆಗಳ ಮೂಲಕ ನಾವು ಭಾರತ್ ಜೋಡೋ ಯಾತ್ರೆಯ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯುವುದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು. ಪ್ರಮುಖವಾಗಿ, ರಾಹುಲ್ ಮತ್ತು ಭಾರತ್ ಯಾತ್ರಿಗಳು ಭೇಟಿಯಾಗುತ್ತಿದ್ದಾರೆ, ಸಂವಾದ ನಡೆಸುತ್ತಿದ್ದಾರೆ ಮತ್ತು ಪ್ರತಿದಿನ ಹತ್ತಾರು ಜನರಿಗೆ ಭಾರತ್ ಜೋಡೋದ ಸಂದೇಶವನ್ನು ರವಾನಿಸುತ್ತಿದ್ದಾರೆ ಎಂದು ರಮೇಶ್ ಹೇಳಿದರು.
ಈ ಯಾತ್ರೆಯು ನಿಜವಾಗಿಯೂ ಭಾರತದ ಜನರನ್ನು ಆಲಿಸುವ ಯಾತ್ರೆಯಾಗಿದೆ. ಯಾತ್ರೆಯು ಹೆಚ್ಚಿನ ಸಂಖ್ಯೆಯ ಸಭೆಗಳ ಮೂಲಕ ಜನರನ್ನು ಆಲಿಸುತ್ತದೆ” ಎಂದು ಅವರು ಹೇಳಿದರು.