ಸರ್ಕಾರಿ ಬಸ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಮೂವರು ದುರ್ಮರಣ ಹೊಂದಿರುವಂತಹ ದಾರುಣ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಬಳಿ ನಡೆದಿದೆ.

ಸ್ಥಳಕ್ಕೆ ಕುಡಚಿ ಪೊಲೀಸರ ಭೇಟಿ, ಪರಿಶೀಲನೆ
ಬೆಳಗಾವಿ: ಸರ್ಕಾರಿ ಬಸ್ ಡಿಕ್ಕಿಯಾಗಿ (accident) ಬೈಕ್ನಲ್ಲಿದ್ದ ಮೂವರು ದುರ್ಮರಣ ಹೊಂದಿರುವಂತಹ ದಾರುಣ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಬಳಿ ನಡೆದಿದೆ. ಹಾಳಸಿರಬೂರ ಗ್ರಾಮದ ನಿವಾಸಿ ಭಗವಂತ ಕಾಂಬಳೆ(45), ವಿಶ್ವನಾಥ್ ಕಾಂಬಳೆ(24), ಕುಮಾರ್ ಕಾಂಬಳೆ(35) ಮೃತರು. ಘಟನಾ ಸ್ಥಳಕ್ಕೆ ಕುಡಚಿ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೌದೆ ತುಂಬಿದ ಟ್ರ್ಯಾಕ್ಟರ್, ಬುಲೆರೋ ಜೀಪ್ ಹಾಗೂ ಕಾರ್ ನಡುವೆ ಸರಣಿಯ ಅಪಘಾತ ಸಂಭವಿಸಿದೆ. ಘಟನೆ ಹಿನ್ನೆಲೆ ಕುಣಿಗಲ್ ರಸ್ತೆಯ ಯಂಟಗಾಕನಹಳ್ಳಿ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆಯಲ್ಲಿ ಟ್ರಾಕ್ಟರ್ನಲ್ಲಿ ಇದ್ದ ಸೌದೆ ಚೆಲ್ಲಾಡಿದ್ದರಿಂದ ನಿಂತಲ್ಲೆ ನಿಂತ ವಾಹನಗಳು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು ಮೂರು ಕುರಿಗಳು ಸಾವು
ರಾಯಚೂರು: ಸಿಡಿಲು ಬಡಿದು ಮೂರು ಕುರಿಗಳು ಸಾವನ್ನಪ್ಪರುವಂತಹ ಸನ್ನಿವೇಶ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ. ಮಧ್ಯಾಹ್ನ ಗುಡುಗು ಸಮೇತ ಮಳೆ ಸುರಿದಿತ್ತು. ದೇವದುರ್ಗ, ಲಿಂಗಸುಗೂರು ತಾಲ್ಲೂಕಿನ ಹಲವು ಕಡೆ ಮಳೆರಾಯ ಅಬ್ಬರಿಸಿದ್ದ. ಈ ಹಿನ್ನೆಲೆ ಸಿಡಿಲು ಬಡಿದು ಮೂರು ಕುರಿಗಳು ಮೃತಪಟ್ಟಿವೆ. ಬಸವರಾಜ್ ಅನ್ನೋರಿಗೆ ಸೇರಿದ ಕುರಿಗಳು ಎನ್ನಲಾಗಿದೆ. ಸ್ಥಳಕ್ಕೆ ತಾಲ್ಲೂಕು ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.