ರಾಯಚೂರಿನ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆಯಿಂದ ಆರ್ಟಿಪಿಎಸ್ನ 4 ಘಟಕಗಳು ಬಂದ್ ಆಗಿವೆ.

ಪ್ರಾತಿನಿಧಿಕ ಚಿತ್ರ
Image Credit source: vistaranews.com
ರಾಯಚೂರು: ರಾಯಚೂರಿನ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ(Raichur Thermal Power Station) ತಾಂತ್ರಿಕ ಸಮಸ್ಯೆಯಿಂದ ಆರ್ಟಿಪಿಎಸ್ನ 4 ಘಟಕಗಳು ಬಂದ್ ಆಗಿವೆ. ಒಟ್ಟು 8 ವಿದ್ಯುತ್ ಉತ್ಪಾದನಾ ಘಟಕ ಹೊಂದಿರುವ RTPS ಕೇಂದ್ರದಲ್ಲೀಗ 4 ಘಟಕಗಳು ಬಂದ್ ಆಗಿವೆ. ಇದರಿಂದ 1.720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ RTPSನಲ್ಲಿ ಕೇವಲ 560 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾತ್ರ ಆಗುತ್ತಿದೆ.
ವಾರ್ಷಿಕ ನಿರ್ವಹಣೆ ಸಮಯದಲ್ಲಿ ಬಾಯ್ಲರ್ ಟ್ಯೂಬ್ ಸೋರಿಕೆ ಕಂಡು ಬಂದಿದೆ. ಇದರಿಂದ 210 ಮೆಗಾ ವಾಟ್ ಸಾಮರ್ಥ್ಯದ 5ನೇ ವಿದ್ಯುತ್ ಘಟಕ ಮತ್ತು 6ನೇ ಘಟಕದ ವಿದ್ಯುತ್ ಉತ್ಪಾದನೆಯ ಹಾರುಬೂದಿ ಹೊರ ಹಾಕುವ ಪೈಪ್ ಲೈನ್ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಕಾರಣ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಕಳೆದ 6 ತಿಂಗಳಿಂದ 1ನೇ ಘಟಕ ಸ್ಥಗಿತಗೊಳಿಸಲಾಗಿದೆ. ಈ ಘಟಕವನ್ನು ಸಂಪೂರ್ಣವಾಗಿ ಮರು ನಿರ್ಮಾಣಗೊಳಿಸುವ ಸಾಧ್ಯತೆ ಇರುವುದರಿಂದ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ.
ತಾಜಾ ಸುದ್ದಿ