Railway Recruitment 2022: 10ನೇ ತರಗತಿ ಪಾಸಾದವರಿಗೆ ರೈಲ್ವೇಯಲ್ಲಿದೆ ಉದ್ಯೋಗಾವಕಾಶ | Indian Railway recruitment 2022: 3612 vacancies available


Indian Railway recruitment 2022: ಈ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ರೈಲ್ವೇಯ ಅಧಿಕೃತ ವೆಬ್‌ಸೈಟ್ rrc-wr.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

Indian Railway recruitment 2022: ಭಾರತೀಯ ರೈಲ್ವೇಯಲ್ಲಿ ಉದ್ಯೋಗವನ್ನು ಎದುರು ನೋಡುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ. ಪಶ್ಚಿಮ ರೈಲ್ವೆಯ ವಿವಿಧ ವಿಭಾಗಗಳು, ಕಾರ್ಯಾಗಾರಗಳು (Railway Recruitment 2022) ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ರೈಲ್ವೇಯ ಅಧಿಕೃತ ವೆಬ್‌ಸೈಟ್ rrc-wr.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಯ ವಿವರಗಳು:
ಒಟ್ಟು ಹುದ್ದೆಗಳ ಸಂಖ್ಯೆ- 3612

ಅರ್ಹತಾ ಮಾನದಂಡ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ, ಸಂಬಂಧಿತ ವಿಷಯದಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು.

ವಯೋಮಿತಿ:
ಅಭ್ಯರ್ಥಿಯು 15 ವರ್ಷಗಳನ್ನು ಪೂರ್ಣಗೊಳಿಸಿರಬೇಕು. ಹಾಗೆಯೇ 24 ವರ್ಷಗಳನ್ನು ಮೀರಿರಬಾರದು.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜೂನ್ 27, 2022

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

______________________________________________________________________

ಬ್ಯಾಂಕ್ ಆಫ್ ಬರೋಡಾದ ಪ್ರಮುಖ ಹುದ್ದೆಗಳಿಗೆ ಅರ್ಜಿ ಆಹ್ವಾನ

Bank of Baroda Recruitment 2022: ಬ್ಯಾಂಕ್ ಆಫ್ ಬರೋಡಾ ಗುತ್ತಿಗೆ ಆಧಾರದ ಮೇಲೆ ಡೇಟಾ ಸೈಂಟಿಸ್ಟ್ ಮತ್ತು ಡೇಟಾ ಇಂಜಿನಿಯರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನುಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳು ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:

ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ: 14

ಉಪ ಉಪಾಧ್ಯಕ್ಷ-ಡೇಟಾ ಸೈಂಟಿಸ್ಟ್ ಹುದ್ದೆಗಳು: 2 ಸಹಾಯಕ ಉಪಾಧ್ಯಕ್ಷ – ಡೇಟಾ ಸೈಂಟಿಸ್ಟ್ ಹುದ್ದೆಗಳು: 6 ಉಪ ಉಪಾಧ್ಯಕ್ಷ-ಡೇಟಾ ಇಂಜಿನಿಯರ್ ಹುದ್ದೆಗಳು: 2 ಸಹಾಯಕ ಉಪಾಧ್ಯಕ್ಷ – ಡೇಟಾ ಇಂಜಿನಿಯರ್ ಹುದ್ದೆಗಳು: 4

ಹುದ್ದೆಗಳ ಹೆಸರು: ಡೇಟಾ ಸೈಂಟಿಸ್ಟ್, ಡೇಟಾ ಇಂಜಿನಿಯರ್ ಹುದ್ದೆಗಳು

ವಯೋಮಿ ಮಿತಿ: ಅಭ್ಯರ್ಥಿಗಳು 25 ರಿಂದ 35 ವರ್ಷ ವಯಸ್ಸಿನವರಾಗಿರಬೇಕು.

ವಿದ್ಯಾರ್ಹತೆಗಳು: ಹುದ್ದೆಗೆ ಅನುಗುಣವಾಗಿ ಸಂಬಂಧಿತ ವಿಷಯಗಳಲ್ಲಿ ಕನಿಷ್ಠ 60% ಅಂಕಗಳೊಂದಿಗೆ BTech / BE / MTech / ME / IT ಪದವಿ ಉತ್ತೀರ್ಣರಾಗಿರಬೇಕು. ಹಾಗೆಯೇ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಅನುಭವವನ್ನೂ ಹೊಂದಿರಬೇಕು.

ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ / ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಶುಲ್ಕ: ಸಾಮಾನ್ಯ / EWS / OBC ಅಭ್ಯರ್ಥಿಗಳಿಗೆ: ರೂ.600 SC / ST / PWD / ಮಹಿಳಾ ಅಭ್ಯರ್ಥಿಗಳಿಗೆ: ರೂ. 100

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 7, 2022.

ಈ ನೇಮಕಾತಿ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

TV9 Kannada


Leave a Reply

Your email address will not be published.