Rain: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅವಾಂತರ: ಕೆರೆಕೋಡಿ ಬಿದ್ದು ಕೊಚ್ಚಿಹೋದ 15 ಸಾವಿರ ಕೋಳಿಗಳು, ಲಕ್ಷಾಂತರ ರೂಪಾಯಿ ನಷ್ಟ | Disruption due to heavy rain last night: 15 thousand chickens were swept away by the rush of water


ಕೆರೆಕೋಡಿ ಬಿದ್ದು ಕೋಳಿಫಾರಂಗೆ ಕೆರೆ ನೀರು ನುಗ್ಗಿ 15 ಸಾವಿರ ಕೋಳಿಗಳು ನೀರಿನಲ್ಲಿ ಕೊಚ್ಚಿಹೋಗಿರುವಂತಹ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗ್ರಾಮದಲ್ಲಿ ನಡೆದಿದೆ.

Rain: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅವಾಂತರ: ಕೆರೆಕೋಡಿ ಬಿದ್ದು ಕೊಚ್ಚಿಹೋದ 15 ಸಾವಿರ ಕೋಳಿಗಳು, ಲಕ್ಷಾಂತರ ರೂಪಾಯಿ ನಷ್ಟ

ನೀರಿನ ರಭಸಕ್ಕೆ ಕೊಚ್ಚಿಹೋದ 15 ಸಾವಿರ ಕೋಳಿಗಳು

ಚಿಕ್ಕಬಳ್ಳಾಪುರ: ನಿನ್ನೆ ರಾತ್ರಿ ಸುರಿದ ಭಾರಿ ಮಳೆ (Rain)ಯಿಂದಾಗಿ ಕೆರೆಕೋಡಿ ಬಿದ್ದು ಕೋಳಿಫಾರಂಗೆ ಕೆರೆ ನೀರು ನುಗ್ಗಿ 15 ಸಾವಿರ ಕೋಳಿಗಳು ನೀರಿನಲ್ಲಿ ಕೊಚ್ಚಿಹೋಗಿರುವಂತಹ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗ್ರಾಮದಲ್ಲಿ ನಡೆದಿದೆ. ರಾತ್ರಿ ಸುರಿದ ಧಾರಾಕರ ಮಳೆಗೆ ಚೋಳಶೆಟ್ಟಿಹಳ್ಳಿಯ ನಾಯನಕೆರೆ ಕೋಡಿ ಬಿದ್ದಿದೆ. ಎನ್.ಲಕ್ಷ್ಮೀನಾರಾಯಣರೆಡ್ಡಿ ಎಂಬುವವರಿಗೆ ಕೋಳಿಫಾರಂ ಸೇರಿದ್ದು, ನೀರಿನಲ್ಲಿ ಕೋಳಿಗಳು ಕೊಚ್ಚಿಕೊಂಡು ಹೋಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ರಾಜಕಾಲುವೆಗಳು ಒತ್ತುವರಿಯಾಗಿ ರೈತರ ಜಮೀನುಗಳಿಗೂ ನೀರು ನುಗ್ಗಿದೆ.

ಕೋಡಿ ತುಂಬಿ ಹರಿದ ಸಂಪಂಗೆರೆ ಕೆರೆ

ಕೋಲಾರ: ಜಿಲ್ಲೆಯಲ್ಲಿ ಕಳೆದ ರಾತ್ರಿ ಹಲವೆಡೆ ಭರ್ಜರಿ ಮಳೆ ಹಿನ್ನೆಲೆ, ಕೋಡಿ ತುಂಬಿ ಸಂಪಂಗೆರೆ ಕೆರೆ ಹರಿದಿದೆ. ಜಿಲ್ಲೆಯ ಮಾಲೂರು ತಾಲ್ಲೂಕು ಸಂಪಂಗೆರೆ ಕೆರೆ. ಮಳೆಯಿಂದಾಗಿ ರಾಜಕಾಲುವೆ ಹಾಗೂ ಕೆರೆ ತುಂಬಿ ಹರಿಯುತ್ತಿದೆ. ಕೆರೆ ಕೋಡಿ ಹರಿಯುತ್ತಿರುವ ಹಿನ್ನೆಲೆ ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗಿದ್ದು, ಲಕ್ಷಾಂತರ ರೂಪಾಯಿ ರಾಗಿ, ಟೊಮ್ಯಾಟೊ ಸೇರಿದಂತೆ ಹಲವು ಬೆಳೆ ನಾಶವಾಗಿದೆ. ಒಂದೇ ಮಳೆಯಿಂದ ರೈತರು ಕಂಗಾಲಾಗಿದ್ದಾರೆ.

TV9 Kannada


Leave a Reply

Your email address will not be published.