Raj Thackeray ಏಕರೂಪ ನಾಗರಿಕ ಸಂಹಿತೆ ಜಾರಿಗೆ ತನ್ನಿ, ಔರಂಗಾಬಾದ್ ಹೆಸರನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡಿ: ರಾಜ್ ಠಾಕ್ರೆ ಒತ್ತಾಯ | Bring the Uniform Civil Code at the earliest Raj Thackeray urges Narendra Modi


Raj Thackeray ಏಕರೂಪ ನಾಗರಿಕ ಸಂಹಿತೆ ಜಾರಿಗೆ ತನ್ನಿ, ಔರಂಗಾಬಾದ್ ಹೆಸರನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡಿ: ರಾಜ್ ಠಾಕ್ರೆ ಒತ್ತಾಯ

ರಾಜ್ ಠಾಕ್ರೆ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ‘ನಮ್ಮ ಹಿಂದುತ್ವ-ಅವರ ಹಿಂದುತ್ವ’ ಟೀಕೆಗೆ ಪ್ರತಿಕ್ರಿಯಿಸಿದ ರಾಜ್ ಠಾಕ್ರೆ ” ನಿಜವಾದ ಹಿಂದುತ್ವ, ನಕಲಿ ಹಿಂದುತ್ವ ಅಂದರೇನು? ನಾವು ವಾಷಿಂಗ್ ಪೌಡರ್ ಮಾರುತ್ತಿದ್ದೇವೆಯೇ? ಎಂದು ಕೇಳಿದ್ದಾರೆ.

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನಾ (Maharashtra Navnirmal Sena) ಮುಖ್ಯಸ್ಥ ರಾಜ್ ಠಾಕ್ರೆ (Raj Thackeray) ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಏಕರೂಪ ನಾಗರಿಕ ಸಂಹಿತೆ ತರಬೇಕು ಮತ್ತು ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ತರಬೇಕು ಎಂದು ಒತ್ತಾಯಿಸಿದರು. ಎಂಎನ್‌ಎಸ್ ಮುಖ್ಯಸ್ಥರು ಏಕರೂಪ ನಾಗರಿಕ ಸಂಹಿತೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದು ಇದೇ ಮೊದಲಲ್ಲ. ಮಸೀದಿಗಳಲ್ಲಿ ಅಕ್ರಮವಾಗಿ ಇರಿಸಲಾಗಿರುವ ಧ್ವನಿವರ್ಧಕತೆಗೆದು ಹಾಕದಿದ್ದರೆ ಹನುಮಾನ್ ಚಾಲೀಸಾ ನುಡಿಸುವುದಾಗಿ ಬೆದರಿಕೆ ಹಾಕಿರುವ ಹೊತ್ತಲ್ಲೇ ಠಾಕ್ರೆ ಮೋದಿಗೆ ಮನವಿ ಮಾಡಿದ್ದಾರೆ. ಔರಂಗಾಬಾದ್ (Aurangabad) ಅನ್ನು ಮರಾಠ ದೊರೆ ಸಂಭಾಜಿ ಹೆಸರಲ್ಲಿ ಸಂಭಾಜಿನಗರ ಎಂದು ಮರುನಾಮಕರಣ ಮಾಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ .ಠಾಕ್ರೆ ಇತ್ತೀಚೆಗೆ ತಮ್ಮ ಅಯೋಧ್ಯೆ ಭೇಟಿಯನ್ನು ರದ್ದುಗೊಳಿಸಿದ ನಂತರ ನಡೆದ ಪುಣೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದು, ಧ್ವನಿವರ್ಧಕದ ಪ್ರತಿಭಟನೆಯನ್ನು ಇಷ್ಟಪಡದವರು ಬಲೆ ಬೀಸಿದ್ದಾರೆ. ನನ್ನ ಎಂಎನ್‌ಎಸ್ ಕಾರ್ಯಕರ್ತರು ಜೈಲಿಗೆ ಹೋಗುವುದು ನನಗೆ ಇಷ್ಟವಿಲ್ಲದ ಕಾರಣ ನಾನು ಈ ಬಲೆಗೆ ಬೀಳಲಿಲ್ಲ ಎಂದು ಹೇಳಿದ್ದಾರೆ. ಧ್ವನಿವರ್ಧಕದ ಗದ್ದಲದ ನಡುವೆ ರಾಜ್ ಠಾಕ್ರೆ ಅವರ ಅಯೋಧ್ಯೆ ಭೇಟಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರು ಅಯೋಧ್ಯೆಗೆ ಬರುವ ಮೊದಲು ಉತ್ತರ ಭಾರತೀಯರ ವಿರುದ್ಧ ತಮ್ಮ ಹಿಂದಿನ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಠಾಕ್ರೆ ಕೆಲವು ಜನರು 14-15 ವರ್ಷಗಳ ನಂತರ ನಾನು ಕ್ಷಮೆ ಕೇಳಬೇಕೆಂದು ಯಾಕೆ ಬಯಸುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.

ಹನುಮಾನ್ ಚಾಲೀಸಾ ವಿವಾದದ ಕುರಿತು ಮಾತನಾಡಿದ ರಾಜ್ ಠಾಕ್ರೆ, ಮಹಾರಾಷ್ಟ್ರ ಸರ್ಕಾರವು ಮಸೀದಿಗಳಿಂದ ಅಕ್ರಮ ಧ್ವನಿವರ್ಧಕಗಳನ್ನು ತೆಗೆದುಹಾಕಲು ವಿಫಲವಾದರೆ ಹನುಮಾನ್ ಚಾಲೀಸಾವನ್ನು ನುಡಿಸಲು ತನ್ನ ಪಕ್ಷದವರಿಗೆ ಕೇಳಿದ್ದೇನೆ ಎಂದು ಹೇಳಿದರು. “ಆದರೆ ರಾಣಾ ದಂಪತಿಗಳು ಮಾತೋಶ್ರೀಗೆ ಹೋಗಿ ಹನುಮಾನ್ ಚಾಲೀಸಾವನ್ನು ಪಠಿಸಲು ಬಯಸಿದ್ದರು. ಯಾಕೆ? ಮಾತೋಶ್ರೀ ಏನು ಮಸೀದಿಯೇ? ಇದೆಲ್ಲದರ ನಡುವೆ ಅದೇ ದಂಪತಿ ಶಿವಸೇನಾದ ಸಂಜಯ್ ರಾವುತ್ ಅವರೊಂದಿಗೆ ಒಟ್ಟಿಗೆ ಊಟ ಮಾಡುತ್ತಿರುವುದು ಕಂಡುಬಂದಿದೆ” ಎಂದಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ‘ನಮ್ಮ ಹಿಂದುತ್ವ-ಅವರ ಹಿಂದುತ್ವ’ ಟೀಕೆಗೆ ಪ್ರತಿಕ್ರಿಯಿಸಿದ ರಾಜ್ ಠಾಕ್ರೆ ” ನಿಜವಾದ ಹಿಂದುತ್ವ, ನಕಲಿ ಹಿಂದುತ್ವ ಅಂದರೇನು? ನಾವು ವಾಷಿಂಗ್ ಪೌಡರ್ ಮಾರುತ್ತಿದ್ದೇವೆಯೇ? ಎಂದು ಕೇಳಿದ್ದಾರೆ.

ಜೂನ್ 1 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು ಚೇತರಿಸಿಕೊಳ್ಳಲು ಒಂದೂವರೆ ತಿಂಗಳು ಬೇಕಾಗುತ್ತದೆ ಎಂದು ರಾಜ್ ಠಾಕ್ರೆ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ. ಭಾನುವಾರದಂದು ರಾಜ್ ಠಾಕ್ರೆ ಅವರ ರ್ಯಾಲಿಗೆ ಮುಂಚಿತವಾಗಿ, ಪುಣೆ ಪೊಲೀಸರು ಯಾವುದೇ ಭಾಷಣಕಾರರು ಯಾವುದೇ ಪ್ರಚೋದಕ ಭಾಷಣ ಮಾಡಬಾರದು ಎಂದು ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.

TV9 Kannada


Leave a Reply

Your email address will not be published. Required fields are marked *