Rajinikanth: ಬಾಕ್ಸಾಫೀಸ್​ನಲ್ಲಿ ದಾಖಲೆ ಬರೆದ ಅಣ್ಣಾಥೆ; ರಜಿನಿ ನಟನೆಯ ಚಿತ್ರ ಇದುವರೆಗೆ ಗಳಿಸಿದ್ದೆಷ್ಟು? | Rajinikanth starring Annatthe collects Rs 206 Crores worldwide in box office till second week first day


Rajinikanth: ಬಾಕ್ಸಾಫೀಸ್​ನಲ್ಲಿ ದಾಖಲೆ ಬರೆದ ಅಣ್ಣಾಥೆ; ರಜಿನಿ ನಟನೆಯ ಚಿತ್ರ ಇದುವರೆಗೆ ಗಳಿಸಿದ್ದೆಷ್ಟು?

ರಜಿನಿಕಾಂತ್

ರಜಿನಿಕಾಂತ್ ಅಭಿನಯದ ‘ಅಣ್ಣಾಥೆ’ ಚಿತ್ರ ಬಾಕ್ಸಾಫೀಸ್​ನಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ಕೊವಿಡ್, ಚೆನ್ನೈನಲ್ಲಿ ಮಳೆ ಮೊದಲಾದ ಕಾರಣದಿಂದ ಒಟ್ಟಾರೆ ಗಳಿಕೆಗೆ ಹೊಡೆತ ಬಿದ್ದಿದ್ದರೂ ಕೂಡ, ಚಿತ್ರ ₹ 200 ಕೋಟಿ ಕ್ಲಬ್​ಅನ್ನು ಈಗಾಗಲೇ ದಾಟಿದೆ. ಈ ಮೂಲಕ ರಜಿನಿಕಾಂತ್ ಬಾಕ್ಸಾಫೀಸ್ ಕಿಂಗ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. 2021ರಲ್ಲಿ ಅತ್ಯಂತ ವೇಗವಾಗಿ ₹ 200 ಕೋಟಿ ಕ್ಲಬ್​ಗೆ ಸೇರಿದ ಚಿತ್ರ ಎಂಬ ದಾಖಲೆ ‘ಅಣ್ಣಾಥೆ’ ಪಾಲಾಗಿದೆ. ಇದಲ್ಲದೇ ₹ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ರಜಿನಿಯ ಚಿತ್ರಗಳೇ ಹೆಚ್ಚಿವೆ ಎಂಬುದು ರಜಿನಿಕಾಂತ್ ಹೊಂದಿರುವ ಹೊಸ ದಾಖಲೆ. ಚಿತ್ರ ಅಂದಾಜು ₹ 210 ಕೋಟಿಗೂ ಅಧಿಕ ಹಣವನ್ನು ಬಾಕ್ಸಾಫೀಸ್​ನಲ್ಲಿ ಗಳಿಸಿದ್ದು, ಚಿತ್ರ ₹ 250 ಕೋಟಿ ಕ್ಲಬ್​ಗೆ ಸೇರುವ ಸಾಧ್ಯತೆ ಇದೆ ಎಂದು ಬಾಕ್ಸಾಫೀಸ್ ಪರಿಣತರು ವಿಶ್ಲೇಷಿಸಿದ್ದಾರೆ.

‘ಅಣ್ಣಾಥೆ’ ಚಿತ್ರ ವಿಶ್ವಾದ್ಯಂತ ಸುಮಾರು 2200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ತಮಿಳುನಾಡು ಒಂದರಲ್ಲೇ 800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಜನಿ ಚಿತ್ರ ತೆರೆಗೆ ಬಂದಿದೆ. ವಿಶ್ವ ಮಟ್ಟದಲ್ಲಿ ಈ ಸಿನಿಮಾ ಮೊದಲ ದಿನ 70 ಕೋಟಿ ಗಳಿಕೆ ಮಾಡಿತ್ತು. ನವೆಂಬರ್​​ 5ರಂದು ಸಿನಿಮಾ 42.6 ಕೋಟಿ ರೂಪಾಯಿ, ನವೆಂಬರ್​ 6ರಂದು ಚಿತ್ರ 33.71 ಕೋಟಿ ಗಳಿಸಿತ್ತು. ಇದೀಗ ಮೊದಲ ವಾರಾಂತ್ಯಕ್ಕೆ ಚಿತ್ರ ಒಟ್ಟಾರೆ ₹ 202.47 ಕೋಟಿ ಗಳಿಕೆ ಮಾಡಿದೆ.

ಎರಡನೇ ವಾರದ ಮೊದಲ ದಿನದಲ್ಲಿ ಚಿತ್ರವು ಜಗತ್ತಿನಾದ್ಯಂತ ₹ 4.05 ಕೋಟಿ ಗಳಿಸಿದ್ದು, ಇದುವರೆಗೆ ಒಟ್ಟು ₹ 206.52 ಕೋಟಿ ಬಾಚಿಕೊಂಡಿದೆ. ತಮಿಳುನಾಡಿನ ಲೆಕ್ಕಾಚಾರವನ್ನು ಮಾತ್ರ ಪರಿಗಣಿಸಿದರೆ, ಅಲ್ಲಿ ಚಿತ್ರವು, ಒಟ್ಟು ₹ 122.80 ಕೋಟಿ ಗಳಿಸಿದೆ. ಈ ಮೂಲಕ ರಜಿನಿ ಚಿತ್ರ ದಾಖಲೆ ಬರೆದಿದೆ.

‘ಅಣ್ಣಾಥೆ’ ಚಿತ್ರದ ಬಾಕ್ಸಾಫೀಸ್ ಲೆಕ್ಕಾಚಾರ ಇಲ್ಲಿದೆ:

‘ಅಣ್ಣಾಥೆ’ ಸಿನಿಮಾವನ್ನು ಸನ್​ ಪಿಕ್ಚರ್ಸ್​ ನಿರ್ಮಾಣ ಮಾಡಿದೆ. ರಜನಿಕಾಂತ್​, ಕೀರ್ತಿ ಸುರೇಶ್​, ನಯನತಾರಾ, ಮೀನಾ, ಖುಷ್ಬು, ಪ್ರಕಾಶ್ ರಾಜ್, ಜಗಪತಿ ಬಾಬು ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ. ದೀಪಾವಳಿ ನಿಮಿತ್ತ ಈ ಸಿನಿಮಾ ನವೆಂಬರ್​ 4ರಂದು ತೆರೆಗೆ ಬಂದಿತ್ತು. ಚಿತ್ರಕ್ಕೆ ಎಲ್ಲ ಕಡೆಗಳಿಂದ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ.

ಇದನ್ನೂ ಓದಿ:

ಮಂಕಾಗಿದ್ದ ಚಿತ್ರಮಂದಿರಗಳ ವಹಿವಾಟಿಗೆ ಮರುಜೀವ ನೀಡಿದ ಅಣ್ಣಾಥೆ, ಸೂರ್ಯವಂಶಿ, ಎಟರ್ನಲ್ಸ್​

1947ರಲ್ಲಿ ಭಾರತಕ್ಕೆ ಲಭಿಸಿದ್ದು ಸ್ವಾತಂತ್ರ್ಯವಲ್ಲ, ಭಿಕ್ಷೆ ಎಂದ ಕಂಗನಾ ವಿರುದ್ಧ ತಿರುಗಿಬಿದ್ದ ಬಿಜೆಪಿ; ಪದ್ಮ ಪ್ರಶಸ್ತಿ ಹಿಂಪಡೆಯಲು ಆಗ್ರಹಿಸಿದ ಕಾಂಗ್ರೆಸ್

TV9 Kannada


Leave a Reply

Your email address will not be published. Required fields are marked *