Rajya Sabha Election: ಪಿ. ಚಿದಂಬರಂ, ಕಪಿಲ್ ಸಿಬಲ್ ಸೇರಿ 41 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧ ಆಯ್ಕೆ | Rajya Sabha Election: P Chidambaram, Kapil Sibal Among 41 Elected Unopposed To Rajya Sabha


Rajya Sabha Election: ಪಿ. ಚಿದಂಬರಂ, ಕಪಿಲ್ ಸಿಬಲ್ ಸೇರಿ 41 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧ ಆಯ್ಕೆ

ಪಿ ಚಿದಂಬರಂ- ಕಪಿಲ್ ಸಿಬಲ್

Image Credit source: Indian Express

11 ರಾಜ್ಯಗಳ 41 ಅಭ್ಯರ್ಥಿಗಳು ಶುಕ್ರವಾರ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೂನ್ 10ರಂದು ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ ಮತ್ತು ಹರಿಯಾಣದಲ್ಲಿ ರಾಜ್ಯಸಭಾ ಚುನಾವಣೆಗಳು ನಡೆಯಲಿವೆ.

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ (P Chidambaram), ಮಾಜಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ (Kapil Sibal), ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ, ಆರ್‌ಜೆಡಿಯ ಮಿಸಾ ಭಾರತಿ, ಬಿಜೆಡಿಯ ಸಸ್ಮಿತ್ ಪಾತ್ರ ಮತ್ತು ವೈಎಸ್‌ಆರ್‌ಸಿಪಿಯ ವಿ ವಿಜಯಸಾಯಿ ರೆಡ್ಡಿ ಸೇರಿದಂತೆ 11 ರಾಜ್ಯಗಳ 41 ಅಭ್ಯರ್ಥಿಗಳು ಶುಕ್ರವಾರ ರಾಜ್ಯಸಭೆಗೆ (Rajya Sabha Election)  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೂನ್ 10ರಂದು ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ ಮತ್ತು ಹರಿಯಾಣದಲ್ಲಿ ರಾಜ್ಯಸಭಾ ಚುನಾವಣೆಗಳು ನಡೆಯಲಿವೆ.

ಉತ್ತರ ಪ್ರದೇಶದಲ್ಲಿ 11 ಅಭ್ಯರ್ಥಿಗಳು, ತಮಿಳುನಾಡಿನ 6, ಬಿಹಾರದಲ್ಲಿ 5, ಆಂಧ್ರಪ್ರದೇಶದಲ್ಲಿ 4, ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ತಲಾ ಮೂವರು, ಛತ್ತೀಸ್‌ಗಢ, ಪಂಜಾಬ್, ತೆಲಂಗಾಣ ಮತ್ತು ಜಾರ್ಖಂಡ್‌ನಲ್ಲಿ ತಲಾ ಇಬ್ಬರು ಮತ್ತು ಉತ್ತರಾಖಂಡದಲ್ಲಿ ಒಬ್ಬ ಅಭ್ಯರ್ಥಿ ಸ್ಪರ್ಧೆಯಿಲ್ಲದೆ ಅವಿರೋಧವಾಗಿ ಗೆದ್ದಿದ್ದಾರೆ.

15 ರಾಜ್ಯಗಳ ರಾಜ್ಯಸಭೆಯ 57 ಸ್ಥಾನಗಳನ್ನು ತುಂಬಲು ಚುನಾವಣೆಗಳು ನಡೆಯುತ್ತಿವೆ. ಹರಿಯಾಣದ ಎರಡು ಸ್ಥಾನಗಳಿಗೆ ಮಾಧ್ಯಮ ದೊರೆ ಕಾರ್ತಿಕೇಯ ಶರ್ಮಾ ಮೂರನೇ ಅಭ್ಯರ್ಥಿಯಾಗಿ ಮತ್ತು ಜೀ ಮೀಡಿಯಾ ಸಂಸ್ಥಾಪಕ ಸುಭಾಷ್ ಚಂದ್ರ ಅವರು ರಾಜಸ್ಥಾನದ ನಾಲ್ಕು ಸ್ಥಾನಗಳಿಗೆ ಐದನೇ ಅಭ್ಯರ್ಥಿಯಾಗಿ ಬಿಜೆಪಿ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಪ್ರವೇಶಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *