Bigg Boss Kannada Season 9 | BBK 9 Runner Up: ಹಲವು ಕಾರಣಗಳಿಂದಾಗಿ ವೀಕ್ಷಕರಿಗೆ ರಾಕೇಶ್ ಅಡಿಗ ಅವರು ಫೇವರಿಟ್ ಆಗಿದ್ದರು. ಅವರೇ ವಿನ್ನರ್ ಆಗುತ್ತಾರೆ ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ ಹಾಗಾಗಲಿಲ್ಲ.

ರಾಕೇಶ್ ಅಡಿಗ
ಸಖತ್ ಕಲರ್ಫುಲ್ ಆಗಿ ನಡೆದ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಶೋಗೆ ತೆರೆ ಬಿದ್ದಿದೆ. 100 ದಿನಗಳ ಏಳು-ಬೀಳಿನ ಪಯಣ ಮುಕ್ತಾಯ ಆಗಿದೆ. ಫಿನಾಲೆಯ ಅಂತಿಮ ಘಟ್ಟದಲ್ಲಿ ರಾಕೇಶ್ ಅಡಿಗ (Rakesh Adiga) ಮತ್ತು ರೂಪೇಶ್ ಶೆಟ್ಟಿ ನಡುವೆ ಹಣಾಹಣಿ ನಡೆಯಿತು. ಅಂತಿಮವಾಗಿ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ವಿನ್ನರ್ (Bigg Boss Kannada Winner) ಆಗಿ ಹೊರಹೊಮ್ಮಿದರು. ರನ್ನರ್ ಅಪ್ ಸ್ಥಾನಕ್ಕೆ ರಾಕೇಶ್ ಅಡಿಗ ತೃಪ್ತಿಪಟ್ಟುಕೊಂಡರು. ಕಿಚ್ಚ ಸುದೀಪ್ ಅವರು ಸಖತ್ ಎನರ್ಜಿಟಿಕ್ ಆಗಿ ಫಿನಾಲೆ (Bigg Boss Finale) ಎಪಿಸೋಡ್ ನಡೆಸಿಕೊಟ್ಟರು. ಪ್ರತಿ ಬಾರಿಯೂ ವಿನ್ನರ್ ಆಯ್ಕೆಯ ವಿಚಾರದಲ್ಲಿ ಒಂದು ವರ್ಗದ ಪ್ರೇಕ್ಷಕರಿಗೆ ಬೇಸರ ಆಗುವುದು ಖಂಡಿತ. ಅದು ಈ ಬಾರಿ ಕೂಡ ಮುಂದುವರಿದಿದೆ. ರಾಕೇಶ್ ಗೆಲ್ಲಬೇಕು ಎಂಬುದು ಅನೇಕರ ಬಯಕೆ ಆಗಿತ್ತು. ಅಂಥವರಿಗೆ ನಿರಾಸೆ ಆಗಿದೆ.
ರಾಕೇಶ್ ಅಡಿಗ ಅವರು ಬಿಗ್ ಬಾಸ್ ಒಟಿಟಿ ಮೊದಲ ಸೀಸನ್ನಲ್ಲಿ ಸ್ಪರ್ಧಿಸಿದರು. ಅಲ್ಲಿ ಉತ್ತಮ ಪರ್ಫಾರ್ಮೆನ್ಸ್ ನೀಡಿ ಟಿವಿ ಸೀಸನ್ಗೆ ಎಂಟ್ರಿ ಪಡೆದರು. ಎಲ್ಲರ ಜೊತೆಗೂ ಅವರು ಸ್ನೇಹ ಬೆಳೆಸಿದರು. ಯಾರೋ ಒಬ್ಬರ ಜೊತೆ ಮಾತ್ರ ಆಪ್ತವಾಗುವ ತಪ್ಪನ್ನು ಅವರು ಮಾಡಲಿಲ್ಲ. ಹಾಡುಗಳ ಮೂಲಕವೂ ಅವರು ಮನರಂಜನೆ ನೀಡಿದರು. ಎಲ್ಲ ಸಂದರ್ಭವನ್ನೂ ಕೂಲ್ ಆಗಿ ನಿಭಾಯಿಸಿದರು. ಜಗಳಗಳು ನಡೆದರೂ ಕೂಡ ಅದನ್ನು ದ್ವೇಷದ ಹಂತಕ್ಕೆ ತೆಗೆದುಕೊಂಡು ಹೋಗಲಿಲ್ಲ.