ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ರಾಕೇಶ್ ಜುಂಜುನ್ವಾಲಾ ಹೃದಯಾಘಾತದಿಂದ ತಮ್ಮ ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಸದ್ಯ ರಾಕೇಶ್ ಜುಂಜುನ್ವಾಲಾರ ಸಾವಿಗೆ ಹಲವು ವಿಚಾರಗಳು ಕಾರಣವೆನ್ನಲಾಗುತ್ತಿದೆ.

ಷೇರು ಮಾರುಕಟ್ಟೆಯ ದಿಗ್ಗಜ ರಾಕೇಶ್ ಜುಂಜುನ್ವಾಲಾ
ಖ್ಯಾತ ಉದ್ಯಮಿ ಮತ್ತು ಷೇರು ಮಾರುಕಟ್ಟೆಯ ದಿಗ್ಗಜ ರಾಕೇಶ್ ಜುಂಜುನ್ವಾಲಾ (Rakesh Jhunjhunwala) ಭಾನುವಾರ (14-08) ಬೆಳಗ್ಗೆ ಮುಂಬೈನಲ್ಲಿ ಇಹಲೋಕ ತ್ಯಜಿಸಿದ್ದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ರಾಕೇಶ್ ಜುಂಜುನ್ವಾಲಾ ಹೃದಯಾಘಾತದಿಂದ ತಮ್ಮ ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಸದ್ಯ ರಾಕೇಶ್ ಜುಂಜುನ್ವಾಲಾರ ಸಾವಿಗೆ ಹಲವು ವಿಚಾರಗಳು ಕಾರಣವೆನ್ನಲಾಗುತ್ತಿದೆ. ರಾಕೇಶ್ ಜುಂಜುನ್ವಾಲಾರನ್ನು ಬಹಳ ಹತ್ತಿರದಿಂದ ಬಲ್ಲವರು ಹೇಳುವುದು ಏನೆಂದರೆ, ಅವರು ತಮ್ಮ ಬೆಳಗಿನ ಉಪಾಹಾರವನ್ನು ಸೇವಿಸಿ, ಕಚೇರಿಗೆ ಬಂದು ವ್ಯಾಪಾರ ಮಾಡಿದ್ದಾರೆ. ರಾತ್ರಿಯ ಊಟಕ್ಕೆ ಮನೆಗೆ ಹಿಂತಿರುಗಿ, ಮದ್ಯ (ಡ್ರಿಂಕ್ಸ್) ಸೇವಿಸಿ ಮಲಗಿದ ಅವರು ಮರುದಿನ ಎದ್ದೇಳಲಿಲ್ಲ. ಆಗಸ್ಟ್ 14 ರ ಭಾನುವಾರ ಬೆಳಿಗ್ಗೆ 7 ಗಂಟೆಗೆ ಅವರ ನಿಧನದ ಸುದ್ದಿ ತಿಳಿಯಿತು. ಅವರ ಅಂತ್ಯವು ಅವರು ಬಯಸಿದ ರೀತಿಯಲ್ಲಿಯೇ ಕೊನೆಗೊಂಡಿದೆ ಎಂದು ಹೇಳಿದರು.