Rakesh Jhunjhunwala: ಕುಳಿತಲ್ಲೇ ಕುಣಿದು ಕುಪ್ಪಳಿಸಿದ ಕಿಂಗ್ ಆಫ್ ಬುಲ್ ರಾಕೇಶ್ ಜುಂಜುನ್​ವಾಲಾ: ಇಲ್ಲಿದೆ ವೈರಲ್ ವಿಡಿಯೋ | The king of bull who danced while sitting Rakesh Jhunjhunwala: Here is the viral video


ಇಂಡಿಯಾಸ್ ವಾರೆನ್ ಬಫೆಟ್ ಎಂದು ಕರೆಯಲ್ಪಟ್ಟ ಜುಂಜುನ್‌ವಾಲಾ ಅವರ ಉತ್ಸಾಹ ಮತ್ತು ಅದಮ್ಯ ಮನೋಭಾವಕ್ಕೆ ಹೆಸರುವಾಸಿಯಾಗಿದ್ದರು.

Rakesh Jhunjhunwala: ಕುಳಿತಲ್ಲೇ ಕುಣಿದು ಕುಪ್ಪಳಿಸಿದ ಕಿಂಗ್ ಆಫ್ ಬುಲ್ ರಾಕೇಶ್ ಜುಂಜುನ್​ವಾಲಾ: ಇಲ್ಲಿದೆ ವೈರಲ್ ವಿಡಿಯೋ

ಕಿಂಗ್ ಆಫ್ ಬುಲ್ ರಾಕೇಶ್ ಜುಂಜುನ್​ವಾಲಾ

ಸ್ಟಾಕ್-ಮಾರುಕಟ್ಟೆಯ ಕಿಂಗ್ ಆಫ್ ಬುಲ್ಸ್ ಎಂದೇ ಖ್ಯಾತಿಯನ್ನು ಹೊಂದಿದ್ದ ಮತ್ತು ಭಾರತದ ಹೊಸ ಖಾಸಗಿ ವಿಮಾನಯಾನ ಸಂಸ್ಥೆಯಾದ ಆಕಾಶ ಏರ್‌ನ ಸಂಸ್ಥಾಪಕ ರಾಕೇಶ್ ಜುಂಜುನ್​ವಾಲಾ (Rakesh Jhunjhunwala) ದೀರ್ಘಕಾಲದ ಅನಾರೋಗ್ಯದಿಂದಾಗಿ ಇಂದು (ಆಗಸ್ಟ್​ 14) ಬೆಳಿಗ್ಗೆ ಮುಂಬೈನಲ್ಲಿ ನಿಧನರಾದರು. ಇಂಡಿಯಾಸ್ ವಾರೆನ್ ಬಫೆಟ್ ಎಂದು ಕರೆಯಲ್ಪಟ್ಟ ಜುಂಜುನ್‌ವಾಲಾ ಅವರ ಉತ್ಸಾಹ ಮತ್ತು ಅದಮ್ಯ ಮನೋಭಾವಕ್ಕೆ ಹೆಸರುವಾಸಿಯಾಗಿದ್ದರು. ಸದ್ಯ ಅವರ ಸಕಾರಾತ್ಮಕತೆಯನ್ನು ಬಿಂಬಿಸುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಜುಂಜುನ್‌ವಾಲಾ ಅವರು ಮಧುಮೇಹದಿಂದ ಬಳಲುತ್ತಿದ್ದಾಗ ಗಾಲಿಕುರ್ಚಿಯಲ್ಲಿ ಕುಳಿತಿರುವುದನ್ನು ಕಾಣಬಹುದು.

ಗಾಲಿಕುರ್ಚಿಯಲ್ಲಿ ಕುಳಿತಿದ್ದರು ಸಹ ತಮ್ಮ 62ನೇ ವಯಸ್ಸಿನಲ್ಲಿ ಅವರು ಬಂಟಿ ಔರ್ ಬಬ್ಲಿ ಚಿತ್ರದ ಕಜ್ರಾ ರೇ ಹಾಡಿಗೆ ಕುಳಿತಲ್ಲೇ ಖುಷಿಯಾಗಿ ಖುಷಿಯಾಗಿ ನೃತ್ಯ ಮಾಡಿದ್ದಾರೆ. ಈ ದಿನವನ್ನು ದುಃಖದ ದಿನ ಎಂದು ನೆನಪಿಸಿಕೊಳ್ಳಲು ನಾನು ಬಯಸುವುದಿಲ್ಲ, ಹೌದು, ಆರ್‌ಜೆ ನಿಧನರಾದರು. ಆದರೆ ಅವರು ನನ್ನ ಹೃದಯದಲ್ಲಿ ಯಾವಾಗಲೂ ಇರುತ್ತಾರೆ. ಈ ವಿಡಿಯೋದಲ್ಲಿ ಅವರು ಎಷ್ಟು ಸಂತೋಷವಾಗಿದ್ದರು ಎಂಬುದನ್ನು ಕಾಣಬಹುದು ಎಂದು ವಿಡಿಯೋಕ್ಕೆ ಶೀರ್ಷಿಕೆ ನೀಡಲಾಗಿದೆ.

TV9 Kannada


Leave a Reply

Your email address will not be published. Required fields are marked *