Rakesh Jhunjhunwala: ದೀಪಾವಳಿ ಮುಹೂರ್ತ ಟ್ರೇಡಿಂಗ್​ನಲ್ಲಿ ರಾಕೇಶ್​ ಜುಂಜುನ್​ವಾಲಾ 5 ಸ್ಟಾಕ್​ನಿಂದ 101 ಕೋಟಿ ರೂ. ಗಳಿಕೆ | Big Bull Rakesh JhunJhunwala Made Rs 101 Crore By His Portfolio 5 Stocks During Diwali Muhurat Trading


Rakesh Jhunjhunwala: ದೀಪಾವಳಿ ಮುಹೂರ್ತ ಟ್ರೇಡಿಂಗ್​ನಲ್ಲಿ ರಾಕೇಶ್​ ಜುಂಜುನ್​ವಾಲಾ 5 ಸ್ಟಾಕ್​ನಿಂದ 101 ಕೋಟಿ ರೂ. ಗಳಿಕೆ

ರಾಕೇಶ್ ಜುಂಜುನ್​ವಾಲಾ (ಸಂಗ್ರಹ ಚಿತ್ರ)

ಷೇರು ಮಾರ್ಕೆಟ್​ನಲ್ಲಿ “ಬಿಗ್ ಬುಲ್” ಅಂತಲೇ ಕರೆಸಿಕೊಳ್ಳುವ ರಾಕೇಶ್ ಜುಂಜುನ್‌ವಾಲಾ ಈ ವರ್ಷದ ದೀಪಾವಳಿಯ ಮುಹೂರ್ತ ವಹಿವಾಟಿನಲ್ಲಿ ತಮ್ಮ ಪೋರ್ಟ್‌ಫೋಲಿಯೋದ ಐದು ಸ್ಟಾಕ್​ಗಳಿಂದ 101 ಕೋಟಿ ರೂಪಾಯಿ ಹಣ ಮಾಡಿದ್ದಾರೆ. ವರ್ಷಕ್ಕೊಮ್ಮೆ ನಡೆಯುವ ಈ ಸೆಷನ್​ನಲ್ಲಿ ಮಾರುಕಟ್ಟೆಯು ಏರಿಕೆ ಕಾಣಿತ್ತಿದ್ದಂತೆ, ರಾಕೇಶ್​ ಜುಂಜುನ್​ವಾಲಾ ಹಲವಾರು ಷೇರುಗಳಿಂದ ಬಲವಾದ ಆದಾಯ ಗಳಿಸಿದರು. ರಾಕೇಶ್ ಜುಂಜುನ್‌ವಾಲಾ ಅವರ ಪೋರ್ಟ್‌ಫೋಲಿಯೋದ ಟಾಪ್ ಗೇಯ್ನರ್‌ಗಳಲ್ಲಿ ಇಂಡಿಯನ್ ಹೋಟೆಲ್ಸ್ ಒಂದಾಗಿದ್ದು, ಒಂದು ಗಂಟೆಯ ವಹಿವಾಟಿನಲ್ಲಿ ಶೇ 6ರಷ್ಟು ಏರಿಕೆ ದಾಖಲಿಸಿತು. ಇದರ ಜತೆಗೆ, ಟಾಟಾ ಸಮೂಹದ ಟಾಟಾ ಮೋಟಾರ್ಸ್ ಈ ದೀಪಾವಳಿಯಲ್ಲಿ ಜುಂಜುನ್​ವಾಲಾ ಪೋರ್ಟ್‌ಫೋಲಿಯೋದಲ್ಲಿ ಭರ್ಜರಿಯಾಗಿ ಮಿಂಚಿದೆ.

ಮುಹೂರ್ತದ ವಹಿವಾಟಿನ ಅವಧಿಯಲ್ಲಿ ಟಾಟಾ ಮೋಟಾರ್ಸ್ ಷೇರಿನ ಬೆಲೆಯು ಶೇ 1ರಷ್ಟು ಲಾಭವನ್ನು ಸೇರಿಸಿತು. ದಿನವನ್ನು ರೂ. 490.05ಕ್ಕೆ ಕೊನೆಗೊಳಿಸಿತು. ರಾಕೇಶ್ ಜುಂಜುನ್​ವಾಲಾ 3.67 ಕೋಟಿ ಷೇರನ್ನು ಹೊಂದಿದ್ದಾರೆ. ಈ ಪೋರ್ಟ್​ಫೋಲಿಯೋದಲ್ಲಿ ಟಾಟಾ ಮೋಟಾರ್ಸ್​ನ ಷೇರುಗಳ ಮೌಲ್ಯವು ಮುಹೂರ್ತ ವ್ಯಾಪಾರದ ಮುನ್ನ 1,783 ಕೋಟಿ ರೂಪಾಯಿ ಇತ್ತು. ವಿಶೇಷ ಸೆಷನ್​ನಲ್ಲಿ ಇದು 17.82 ಕೋಟಿ ರೂಪಾಯಿ ಏರಿಕೆಯಾಗಿ, 1,800 ಕೋಟಿ ರೂಪಾಯಿ ಆಯಿತು. ಈ ವರ್ಷದಲ್ಲಿ ಇಲ್ಲಿಯವರೆಗೆ ಟಾಟಾ ಮೋಟಾರ್ಸ್ ಷೇರಿನ ಬೆಲೆ ಶೇ 162ರಷ್ಟು ಹೆಚ್ಚಳ ಆಗಿದೆ.

ರಾಕೇಶ್ ಜುಂಜುನ್​ವಾಲಾ ಅವರು ವ್ಯಾಪಾರ ಪುನರಾರಂಭದ ಬಗ್ಗೆ ಧ್ವನಿಯಾಗಿದ್ದು, ಆತಿಥ್ಯದ ಕೆಟಗರಿ ಅಡಿಯಲ್ಲಿ ಬರುವ ಇಂಡಿಯಾ ಹೋಟೆಲ್ಸ್ ವ್ಯಾಪಾರದ ಲಾಭವನ್ನು ಪಡೆಯುತ್ತಿದೆ. ಮುಹೂರ್ತದ ವಹಿವಾಟಿನ ಅವಧಿಯಲ್ಲಿ ಇಂಡಿಯನ್ ಹೋಟೆಲ್‌ನ ಷೇರಿನ ಬೆಲೆಯು ಶೇ 5.95ರಷ್ಟು ಹೆಚ್ಚಳವಾಗಿ, ಪ್ರತಿ ಷೇರಿಗೆ ರೂ. 215.45 ಕ್ಕೆ ಮುಕ್ತಾಯವಾಯಿತು. ಇಂಡಿಯನ್ ಹೋಟೆಲ್‌ನ ಮೌಲ್ಯವು ಬುಧವಾರ 507.70 ಕೋಟಿ ರೂಪಾಯಿಗಳಷ್ಟಿತ್ತು. ಆದರೆ ಮುಹೂರ್ತದ ಸೆಷನ್​ನಲ್ಲಿ ಮೌಲ್ಯವು 31.13 ಕೋಟಿ ರೂಪಾಯಿಗಳನ್ನು ಗಳಿಸಿ, 538.84 ಕೋಟಿ ರೂಪಾಯಿಗಳಿಗೆ ತಲುಪಿದೆ.

ಇನ್ನು ಮುಹೂರ್ತದ ವಹಿವಾಟಿನ ಅವಧಿಯಲ್ಲಿ ರೇಟಿಂಗ್ ಮತ್ತು ಸಂಶೋಧನಾ ಸಂಸ್ಥೆ ಕ್ರಿಸಿಲ್‌ನ ಷೇರಿನ ಬೆಲೆಯು ಶೇ 2ರಷ್ಟು ಜಾಸ್ತಿ ಆಯಿತು. ರಾಕೇಶ್ ಜುಂಜುನ್‌ವಾಲಾ ಅವರು ಕಂಪೆನಿಯ 39.75ರಷ್ಟು ಈಕ್ವಿಟಿ ಷೇರುಗಳನ್ನು ಹೊಂದಿದ್ದಾರೆ. ಅವರ ಪೋರ್ಟ್‌ಫೋಲಿಯೋದಲ್ಲಿನ ಷೇರುಗಳ ಮೌಲ್ಯವು ಸೆಷನ್​ ಅಂತ್ಯಕ್ಕೆ 1,144 ಕೋಟಿ ರೂಪಾಯಿಗಳಷ್ಟಿತ್ತು. ಬುಧವಾರದಂದು 1,123 ಕೋಟಿ ರೂಪಾಯಿ ಇದ್ದದ್ದು ರೂ. 21.72 ಕೋಟಿ ಲಾಭವಾಗಿದೆ. ಅಲ್ಲದೆ, ಎಸ್ಕಾರ್ಟ್ಸ್ ಷೇರುಗಳು ಹೂಡಿಕೆದಾರರಿಗೆ 18.11 ಕೋಟಿ ರೂಪಾಯಿಯನ್ನು ಮುಹೂರ್ತದ ವಹಿವಾಟಿನಲ್ಲಿ ಗಳಿಸಿಕೊಟ್ಟಿತು. ಸ್ಟಾಕ್ ಶೇ 2ರಷ್ಟು ಗಳಿಸಿತು. ಸ್ಟಾಕ್‌ನ ಮೌಲ್ಯವು ಈ ವಾರದ ಆರಂಭದಲ್ಲಿ ರೂ. 960 ಕೋಟಿಗಳಿಂದ ರೂ. 978 ಕೋಟಿಗೆ ಏರಿತು. ಗೇಮಿಂಗ್ ಮತ್ತು ಹಾಸ್ಪಿಟಾಲಿಟಿ ಸ್ಟಾಕ್ ಡೆಲ್ಟಾ ಕಾರ್ಪೊರೇಷನ್‌ನಿಂದ ರೂ. 12.6 ಕೋಟಿ ಗಳಿಸಿದ್ದಾರೆ. ಮುಹೂರ್ತದ ವಹಿವಾಟಿನ ಅವಧಿಯಲ್ಲಿ ಷೇರುಗಳು ಶೇ 3.3ರಷ್ಟು ಜಿಗಿದವು, ಷೇರುಗಳ ಮೌಲ್ಯವು ರೂ. 550.80 ಕೋಟಿಯಿಂದ ರೂ. 563.40 ಕೋಟಿಗೆ ಏರಿತು.

ಇದನ್ನೂ ಓದಿ: Akasa Airlines: ರಾಕೇಶ್​ ಜುಂಜುನ್​ವಾಲಾ ಬೆಂಬಲಿತ ಆಕಾಶ ಏರ್​ಲೈನ್ಸ್​ಗೆ ಸರ್ಕಾರದ ನೋ ಅಬ್ಜೆಕ್ಷನ್

TV9 Kannada


Leave a Reply

Your email address will not be published. Required fields are marked *