Rakesh Tikait: ಅಗ್ನಿಪಥ್ ಹೊಸ ಸೇನಾ ನೇಮಕಾತಿ ರೈತರ ಮಕ್ಕಳ ಪರವಾಗಿಲ್ಲ; ರಾಕೇಶ್ ಟಿಕಾಯತ್ ಟೀಕೆ | Rakesh Tikait: Agnipath scheme not in interest of farmers sons Rakesh Tikait announces nationwide movement


Rakesh Tikait: ಅಗ್ನಿಪಥ್ ಹೊಸ ಸೇನಾ ನೇಮಕಾತಿ ರೈತರ ಮಕ್ಕಳ ಪರವಾಗಿಲ್ಲ; ರಾಕೇಶ್ ಟಿಕಾಯತ್ ಟೀಕೆ

ರಾಕೇಶ್ ಟಿಕಾಯತ್

Image Credit source: times now

Agnipath Scheme Protests: ದೇಶದ ಯುವಕರು ಕೇವಲ 4 ವರ್ಷಗಳ ಕಾಲ ಸೇನೆಯ ಕೆಲಸವನ್ನು ಮಾಡುತ್ತಾರೆ. ಆದರೆ, ಶಾಸಕರು 80 ವರ್ಷ ವಯಸ್ಸಿನವರೆಗೆ ಸೇವೆಯಲ್ಲಿ ಮುಂದುವರಿಯುತ್ತಾರೆ. ಶಾಸಕರಂತೆ ರಾಷ್ಟ್ರದ ಯುವಕರಿಗೂ ಪಿಂಚಣಿ ಸಿಗಬೇಕು ಎಂದು ರಾಕೇಶ್ ಟಿಕಾಯತ್ ಒತ್ತಾಯಿಸಿದ್ದಾರೆ.

ಹರಿದ್ವಾರ: ಕೇಂದ್ರ ಸರ್ಕಾರದಿಂದ ಹೊಸದಾಗಿ ಆರಂಭಿಸಲಾಗಿರುವ ಅಗ್ನಿಪಥ್ (Agnipath) ಸೇನಾ ನೇಮಕಾತಿ ಪ್ರಕ್ರಿಯೆಯನ್ನು ವಿರೋಧಿಸಿ ರೈತ ಮುಖಂಡ ಮತ್ತು ಭಾರತೀಯ ಕಿಸಾನ್ ಯೂನಿಯನ್ (BKU) ವಕ್ತಾರ ರಾಕೇಶ್ ಟಿಕಾಯತ್ (Rakesh Tikait) ದೇಶಾದ್ಯಂತ ಚಳವಳಿ ನಡೆಸುವುದಾಗಿ ಘೋಷಿಸಿದ್ದಾರೆ. ಹೊಸ ನೇಮಕಾತಿ ಯೋಜನೆಯು ರೈತರ ಪುತ್ರರ ಹಿತದೃಷ್ಟಿಯಿಂದಲ್ಲ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯ ವಿರುದ್ಧ ರೈತರು ರಾಷ್ಟ್ರವ್ಯಾಪಿ ಚಳವಳಿ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಾಲ್ಕು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಸೇನೆಯಿಂದ ನಿವೃತ್ತರಾದ ನಂತರ ರೈತನ ಮಗ ಏನು ಮಾಡಬೇಕು? ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಹರಿದ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಕೇಶ್ ಟಿಕಾಯತ್, ಮಧ್ಯಸ್ಥಗಾರರ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು. ಈ ಹಿಂದೆ 15-21 ವರ್ಷ ಸೇವಾವಧಿ ಇತ್ತು, ಈಗ ಅದನ್ನು ನಾಲ್ಕು ವರ್ಷಕ್ಕೆ ಇಳಿಸಲಾಗಿದೆ. ಹೀಗಾದರೆ, 4 ವರ್ಷದ ಬಳಿಕ ಯುವಕರು ಏನು ಮಾಡಬೇಕು? ಸೇನೆಯ ರೀತಿಯಲ್ಲೇ ಶಾಸಕರು ಎರಡನೇ ಬಾರಿ ಚುನಾವಣೆಗೆ ಸ್ಪರ್ಧಿಸಬಾರದು ಎಂಬ ನೀತಿಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

TV9 Kannada


Leave a Reply

Your email address will not be published.