Raksha Bandhan 2022: ಈ ಬಾರಿಯ ರಕ್ಷಾ ಬಂಧನಕ್ಕೆ ಭದ್ರನ ನೆರಳು, ರಕ್ಷಾ ಬಂಧನದ ದಿನಾಂಕ, ಇತಿಹಾಸ, ಪ್ರಾಮುಖ್ಯತೆ ಇಲ್ಲಿದೆ | Raksha Bandhan 2022 Raksha Bandhan Date History Significance


ಸಹೋದರ ಸಹೋದರಿಯರ ಪ್ರೀತಿಯ ಹಬ್ಬ ರಕ್ಷಾ ಬಂಧನದ ದಿನಾಂಕದ ಬಗ್ಗೆ ಈ ಬಾರಿ ಹೆಚ್ಚಿನವರಲ್ಲಿ ಗೊಂದಲ ಮೂಡಿಸಿದೆ. ಈ ಬಾರಿ ರಕ್ಷಾ ಬಂಧನ ಆಗಸ್ಟ್ 11 ಮತ್ತು 12ರ ನಡುವೆ ಇರಲಿದ್ದು, ರಾಖಿ ಕಟ್ಟಲು ಪ್ರದೋಷ ಕಾಲದ ಶುಭ ಮುಹೂರ್ತವು ರಾತ್ರಿ 8.51 ರಿಂದ ಬೆಳಿಗ್ಗೆ 9.13 ರವರೆಗೆ ಇರುತ್ತದೆ.

Raksha Bandhan 2022: ಈ ಬಾರಿಯ ರಕ್ಷಾ ಬಂಧನಕ್ಕೆ ಭದ್ರನ ನೆರಳು, ರಕ್ಷಾ ಬಂಧನದ ದಿನಾಂಕ, ಇತಿಹಾಸ, ಪ್ರಾಮುಖ್ಯತೆ ಇಲ್ಲಿದೆ

ಸಾಂಕೇತಿಕ ಚಿತ್ರ

ರಕ್ಷಾ ಬಂಧನ ಹಬ್ಬವನ್ನು ಹಿಂದೂ ಧರ್ಮದ ದೊಡ್ಡ ಹಬ್ಬಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಸಹೋದರ ಸಹೋದರಿಯರ ಪ್ರೀತಿಯ ಹಬ್ಬವೇ ಈ ರಕ್ಷಾ ಬಂಧನ (Raksha Bandhan). ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ರಕ್ಷಾ ಬಂಧನವನ್ನು ಆಚರಿಸುವ ಸಂಪ್ರದಾಯವಿದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿನ ಮೇಲೆ ರಾಖಿ ಕಟ್ಟಿ ದೀರ್ಘಾಯುಷ್ಯವನ್ನು ಹಾರೈಸಿ ಆಶೀರ್ವಾದ ಪಡೆಯುತ್ತಾರೆ. ಪ್ರತಿಯಾಗಿ ಸಹೋದರರು ಸಹೋದರಿಯರನ್ನು ರಕ್ಷಿಸುವ ಭರವಸೆ ನೀಡುತ್ತಾರೆ. ಇಂತಹ ಅರ್ಥಪೂರ್ಣ ಹಬ್ಬದ ದಿನಾಂಕವು ಈ ಬಾರಿ ಗೊಂದಲ ಮೂಡಿಸಿದೆ. ಕೆಲವರು ಆಗಸ್ಟ್ 11 ರಂದು ರಾಖಿ ಹಬ್ಬ ಎಂದು ಹೇಳುತ್ತಿದ್ದರೆ, ಕೆಲವರು ಆಗಸ್ಟ್ 12ಕ್ಕೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅದಲ್ಲದೆ ಈ ಬಾರಿ ರಕ್ಷಾ ಬಂಧನಕ್ಕೆ ಭದ್ರನ ನೆರಳು ಕೂಡ ಬಿದ್ದಿದೆ. ಹೀಗಾಗಿ ಭದ್ರಾ ಕಾಲ ಮುಗಿಯುತ್ತಿದ್ದಂತೆ ರಾಖಿ ಕಟ್ಟಬೇಕು. ಹಾಗಿದ್ದರೆ ರಕ್ಷಾಬಂಧನದ ಇತಿಹಾಸ, ಪ್ರಾಮುಖ್ಯತೆ, ನಿಖರವಾದ ದಿನಾಂಕ, ಭದ್ರ ಕಾಲ ಮತ್ತು ರಾಖಿ ಕಟ್ಟುವ ಶುಭ ಸಮಯದ ಬಗ್ಗೆ ವಿವರವಾಗಿ ತಿಳಿಯೋಣ.

ಇತಿಹಾಸ ಮತ್ತು ಪ್ರಾಮುಖ್ಯತೆಗಳು

ದಂತಕಥೆಯ ಪ್ರಕಾರ ರಕ್ಷಾ ಬಂಧನವನ್ನು  ಶ್ರೀಕೃಷ್ಣ ಪರಮಾತ್ಮನು ಆಕಸ್ಮಿಕವಾಗಿ ತನ್ನ ಬೆರಳನ್ನು ಸುದರ್ಶನ ಚಕ್ರದಿಂದ ಕತ್ತರಿಸಿದ ದಿನವನ್ನು ಗುರುತಿಸಬಹುದು. ಬೆರಳು ಕತ್ತರಿಸಿದ ನಂತರ ಪಾಂಡವರ ಪತ್ನಿ ದ್ರೌಪದಿ ಶ್ರೀಕೃಷ್ಣ ನೋವು ತಿನ್ನುತ್ತಿರುವುದನ್ನು ನೋಡಿ ಕೂಡಲೇ ತನ್ನ ವಸ್ತ್ರದ ತುಂಡನ್ನು ಹರಿದು ಶ್ರೀಕೃಷ್ಣನ ರಕ್ತ ಹರಿಯುತ್ತಿದ್ದ ಬೆರಳಿಗೆ ಕಟ್ಟುತ್ತಾಳೆ. ಇದನ್ನು ರಕ್ಷಾ ಸೂತ್ರ ಎಂದು ಪರಿಗಣಿಸಿದ ಶ್ರೀಕೃಷ್ಣನು ಪ್ರಪಂಚದ ಎಲ್ಲಾ ದುಷ್ಟರಿಂದ ರಕ್ಷಣೆ ನೀಡುವುದಾಗಿ ಭರವಸೆ ನೀಡಿದನು. ಕೌರವರು ವಿರುದ್ಧ ಪಗಡೆ ಆಟದಲ್ಲಿ ಪಾಂಡವರು ಸೋತಾಗ ಕೌರವರು ದ್ರೌಪದಿಯ ವಸ್ತ್ರಾಪಹರಣಕ್ಕೆ ಮುಂದಾಗುತ್ತಾರೆ. ಈ ವೇಳೆ ದ್ರೌಪತಿಗೆ ಆಶೀರ್ವದಿಸಿದ ಕೃಷ್ಣ ಆಕೆ ಧರಿಸಿದ್ದ ಸೀರೆಯನ್ನು ಕೌರವರು ಎಳೆದಷ್ಟು ಉದ್ದವಾಗುವಂತೆ ನೋಡಿಕೊಳ್ಳುತ್ತಾನೆ. ಆ ಮೂಲಕ ನೀಡಿದ ಭರವಸೆಯಂತೆ ಕೃಷ್ಣನು ದ್ರೌಪದಿಯನ್ನು ದುಷ್ಟರಿಂದ ರಕ್ಷಣೆ ಮಾಡುತ್ತಾನೆ.

ರಕ್ಷಾ ಬಂಧನದ ದಿನಾಂಕ ಮತ್ತು ಮುಹೂರ್ತ

ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಸಹೋದರ ಸಹೋದರಿಯರ ರಾಖಿ ಹಬ್ಬ ಈ ಬಾರಿ ಆಗಸ್ಟ್ 11 ಮತ್ತು 12ರ ನಡುವೆ ಬರುತ್ತದೆ. ಜ್ಯೋತಿಷ್ಯರು ಹೇಳುವಂತೆ, ಆಗಸ್ಟ್ 11ರ ಗುರುವಾರ ಸಂಜೆಯಿಂದ ಪ್ರಾರಂಭವಾಗುವ ರಕ್ಷಾ ಬಂಧನ ಆಗಸ್ಟ್ 12ರ ಬೆಳಗ್ಗೆ ತನಕ ಇರಲಿದೆ. ಗುರುವಾರದಂದು ಹುಣ್ಣಿಮೆಯು 09:35 ಕ್ಕೆ ಪ್ರಾರಂಭವಾಗುತ್ತಿದೆ, ಆದರೆ ಇದರೊಂದಿಗೆ ಭದ್ರಾ ಕಾಲವೂ ಇರಲಿದೆ. ‘ಶುಭಕರಂ ಪುಚ್ಛಂ ಮತ್ತು ವಾಸರೇ ಶುಭಕಾರಿ ರಾತ್ರೌ’ ಎಂಬ ಜ್ಯೋತಿಷ್ಯದ ತತ್ವದ ಪ್ರಕಾರ ಗುರುವಾರ ಸಂಜೆ 5:40ರ ನಂತರ ಶುಭ ಯೋಗವುಂಟಾಗುತ್ತದೆ. ಆಗಸ್ಟ್ 12 ರಂದು ಭದ್ರಾ ಕಾಲ ಇರುವುದಿಲ್ಲ, ಆದರೆ ಹುಣ್ಣಿಮೆಯ ದಿನಾಂಕವು ಬೆಳಗ್ಗೆ 07:16 ರವರೆಗೆ ಮಾತ್ರ ಇರುತ್ತದೆ. ಆದ್ದರಿಂದ ಈ ದಿನವೂ ರಕ್ಷಾಬನವನ್ನು ಆಚರಿಸಲಾಗುತ್ತದೆ. ಆದರೆ ರಾತ್ರಿ 8.51ಕ್ಕೆ ರುದ್ರಾ ಕಾಲ ಮುಕ್ತಾಯಗೊಳ್ಳಲಿದ್ದು, ರಾಖಿ ಕಟ್ಟಲು ಪ್ರದೋಷ ಕಾಲದ ಶುಭ ಮುಹೂರ್ತವು ರಾತ್ರಿ 8.51ರಿಂದ ಬೆಳಿಗ್ಗೆ 9.13 ರವರೆಗೆ ಇರಲಿದೆ.

ಭದ್ರ ಕಾಲದಂದು ರಾಖಿಯನ್ನು ಯಾಕೆ ಕಟ್ಟಬಾರದು?

ಭದ್ರಾ ಕಾಲದಲ್ಲಿ ರಾಖಿ ಕಟ್ಟುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದಲ್ಲದೇ ಭದ್ರಾದಲ್ಲಿ ಬೇರೆ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಏಕೆಂದರೆ ಇದು ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಪುರಾಣಗಳ ಪ್ರಕಾರ, ಶನಿಯ ಸ್ವಭಾವವು ಹೇಗೆ ಕ್ರೂರ ಮತ್ತು ಕೋಪದಿಂದ ಕೂಡಿರುತ್ತದೆಯೋ ಹಾಗೆಯೇ ಭದ್ರನ ಸ್ವಭಾವವೂ ಇರುತ್ತದೆ. ಈ ಕಾರಣಕ್ಕಾಗಿಯೇ ಶುಭ ಕಾರ್ಯವನ್ನು ನಿಷೇಧಿಸಲಾಗಿದೆ. ಶಾಸ್ತ್ರಗಳಲ್ಲಿ ಭದ್ರ ರಹಿತ ಕಾಲದಲ್ಲಿ ಮಾತ್ರ ರಾಖಿ ಕಟ್ಟುವ ಪದ್ಧತಿ ಇದೆ. ಭದ್ರ ರಹಿತ ಕಾಲದಲ್ಲಿ ರಾಖಿ ಕಟ್ಟುವುದರಿಂದ ಸೌಭಾಗ್ಯ ವೃದ್ಧಿಯಾಗುತ್ತದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *