Ram Gopal Varma suggests RRR director SS Rajamouli to increase his security | RGV Twitter: ‘ರಾಜಮೌಳಿ ಹತ್ಯೆಗೆ ಸಂಚು ನಡೆದಿದೆ, ತಂಡ ಸಿದ್ಧವಾಗಿದೆ’; ರಾಮ್​ ಗೋಪಾಲ್​ ವರ್ಮಾ ಹೇಳಿಕೆ


Rajamouli | Ram Gopal Varma: ‘ರಾಜಮೌಳಿ ಅವರೇ.. ದಯವಿಟ್ಟು ಭದ್ರತೆ ಹೆಚ್ಚಿಸಿಕೊಳ್ಳಿ. ನಿಮ್ಮನ್ನು ಹತ್ಯೆ ಮಾಡಲು ತಂಡ ರಚಿಸಿಕೊಳ್ಳಲಾಗಿದೆ’ ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್​ ಮಾಡಿದ್ದಾರೆ.

RGV Twitter: ‘ರಾಜಮೌಳಿ ಹತ್ಯೆಗೆ ಸಂಚು ನಡೆದಿದೆ, ತಂಡ ಸಿದ್ಧವಾಗಿದೆ’; ರಾಮ್​ ಗೋಪಾಲ್​ ವರ್ಮಾ ಹೇಳಿಕೆ

ಎಸ್ಎಸ್ ರಾಜಮೌಳಿ, ರಾಮ್ ಗೋಪಾಲ್ ವರ್ಮಾ

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (Ram Gopal Varma) ಇದ್ದಲ್ಲಿ ಕಾಂಟ್ರವರ್ಸಿ ಸಹಜ. ಒಂದಿಲ್ಲೊಂದು ವಿಚಾರದಲ್ಲಿ ಅವರು ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಅವರು ರಾಜಮೌಳಿ (SS Rajamouli) ಬಗ್ಗೆ ಸರಣಿ ಟ್ವೀಟ್​ ಮಾಡಿದ್ದಾರೆ. ಒಮ್ಮೆಲೆ ನೋಡಿದರೆ ಶಾಕ್​ ಆಗುವಂತಹ ವಿಚಾರವನ್ನು ಅವರು ಪೋಸ್ಟ್​ ಮಾಡಿದ್ದಾರೆ. ಆದರೆ ಇದು ತಮಾಷೆಗಾಗಿ! ‘ರಾಜಮೌಳಿ ಅವರ ಹತ್ಯೆ ನಡೆಸಲು ತಂಡ ಸಿದ್ಧವಾಗಿದೆ’ ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್​ (Ram Gopal Varma Tweet) ಮಾಡಿದ್ದಾರೆ. ಆ ತಂಡದಲ್ಲಿ ತಾವೂ ಇರುವುದಾಗಿ ಅವರು ತಿಳಿಸಿದ್ದಾರೆ. ಇದೆಲ್ಲವನ್ನೂ ಅವರು ತಮಾಷೆಗಾಗಿ ಹೇಳಿದ್ದು ಅಂತ ಗೊತ್ತಾದ ತಕ್ಷಣ ರಾಜಮೌಳಿ ಅಭಿಮಾನಿಗಳು ಸಮಾಧಾನಗೊಂಡಿದ್ದಾರೆ. ರಾಮ್​ ಗೋಪಾಲ್​ ವರ್ಮಾ ಮಾಡಿದ ಈ ಟ್ವೀಟ್​ ವೈರಲ್​ ಆಗಿದೆ.

ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ‘ಬಾಹುಬಲಿ’, ‘ಆರ್​ಆರ್​ಆರ್​’ ಮುಂತಾದ ಸಿನಿಮಾಗಳಿಂದಾಗಿ ಅವರ ಜನಪ್ರಿಯತೆ ಹೆಚ್ಚಾಗಿದೆ. ಇತ್ತೀಚೆಗೆ ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ‘ಗೋಲ್ಡನ್​ ಗ್ಲೋಬ್​ 2023’ ಅವಾರ್ಡ್​ ಪಡೆದುಕೊಂಡ ನಂತರ ಬೇರೆ ಬೇರೆ ದೇಶಗಳ ಜನರು ತೆಲುಗು ಚಿತ್ರರಂಗದತ್ತ ತಿರುಗಿ ನೋಡುವಂತಾಗಿದೆ. ಇಷ್ಟೆಲ್ಲ ಜನಪ್ರಿಯತೆ ಸಿಕ್ಕಿರುವುದರಿಂದ ಕೆಲವು ನಿರ್ದೇಶಕರಿಗೆ ಹೊಟ್ಟೆಕಿಚ್ಚು ಆಗಿದೆಯಂತೆ. ಆದ್ದರಿಂದಲೇ ರಾಜಮೌಳಿ ಅವರನ್ನು ಹತ್ಯೆ ಮಾಡುವ ಸಂಚು ನಡೆದಿದೆ ಎಂದು ರಾಮ್​ ಗೋಪಾಲ್​ ವರ್ಮಾ ಅವರು ಟ್ವೀಟ್​ ಮಾಡಿದ್ದಾರೆ.

ತಾಜಾ ಸುದ್ದಿ

‘ರಾಜಮೌಳಿ ಅವರೇ ದಯವಿಟ್ಟು ಭದ್ರತೆ ಹೆಚ್ಚಿಸಿಕೊಳ್ಳಿ. ಭಾರತದ ಕೆಲವು ನಿರ್ದೇಶಕರು ಹೊಟ್ಟೆಕಿಚ್ಚಿನಿಂದಾಗಿ ನಿಮ್ಮನ್ನು ಹತ್ಯೆ ಮಾಡಲು ತಂಡ ರಚಿಸಿಕೊಂಡಿದ್ದಾರೆ. ಅದರಲ್ಲಿ ನಾನೂ ಕೂಡ ಇದ್ದೇನೆ. ನಾನು ಈಗ ಕುಡಿದಿರುವುದರಿಂದ ಈ ರಹಸ್ಯವನ್ನು ಬಾಯಿಬಿಡುತ್ತಿದ್ದೇನೆ’ ಎಂದು ರಾಮ್​ ಗೋಪಾಲ್​​ ವರ್ಮಾ ಟ್ವೀಟ್​ ಮಾಡಿದ್ದಾರೆ. ಅವರು ಈ ಪೋಸ್ಟ್​ಗೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಆಸ್ಕರ್​ ನಿರೀಕ್ಷೆಯಲ್ಲಿ ‘ಆರ್​ಆರ್​ಆರ್’ ಚಿತ್ರದ ‘ನಾಟು ನಾಟು..’ ಸಾಂಗ್​:

ಜಾಗತಿಕ ಮಟ್ಟದಲ್ಲಿ ‘ಆರ್​ಆರ್​ಆರ್​’ ಸಿನಿಮಾ ಶೈನ್​ ಆಗುತ್ತಿದೆ. ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ಈ ಚಿತ್ರ ಈಗ ಆಸ್ಕರ್​ ಪ್ರಶಸ್ತಿ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಮಂಗಳವಾರ (ಜ.24) ಆಸ್ಕರ್​ ಪ್ರಶಸ್ತಿಯ ನಾಮಿನೇಷನ್​ ಲಿಸ್ಟ್​ ಪ್ರಕಟ ಆಗಿದೆ. ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಅತ್ಯುತ್ತಮ ಒರಿಜಿನಲ್​ ಸಾಂಗ್​ ವಿಭಾಗಕ್ಕೆ ನಾಮಿನೇಟ್​ ಆಗಿದೆ.

TV9 Kannada


Leave a Reply

Your email address will not be published. Required fields are marked *