ರಾಮನಗರ ಜಿಲ್ಲೆಯಲ್ಲಿ ಮತ್ತಷ್ಟು ಚಿರತೆ ದಾಳಿ ಭೀತಿ ಹೆಚ್ಚಿದ್ದು, ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಕುರಿ ಕಾಯುತ್ತಿದ್ದ ಯುವತಿ ಮರವೇರಿರುವಂತಹ ಘಟನೆ ನಡೆದಿದೆ.

Image Credit source: newindianexpress.com
ರಾಮನಗರ: ಜಿಲ್ಲೆಯಲ್ಲಿ ಮತ್ತಷ್ಟು ಚಿರತೆ ದಾಳಿ ಭೀತಿ ಹೆಚ್ಚಿದ್ದು, ಚಿರತೆ ದಾಳಿ (Leopard Attacks) ಯಿಂದ ತಪ್ಪಿಸಿಕೊಳ್ಳಲು ಕುರಿ ಕಾಯುತ್ತಿದ್ದ ಯುವತಿ ಮರವೇರಿರುವಂತಹ ಘಟನೆ ನಡೆದಿದೆ. ಗಡಿಬಿಡಿಯಲ್ಲಿ ಮರ ಏರುವಾಗ ಕೆಳಗೆಬಿದ್ದು ಯುವತಿಗೆ ಗಾಯವಾಗಿದ್ದು ಸ್ಥಿತಿ ಗಂಭೀರವಾಗಿದೆ. ಮರಳುದೇವನಪುರ ಗ್ರಾಮದ ವಿಜಯಲಕ್ಷ್ಮೀ ಚಿರತೆಯಿಂದ ಪಾರಾದ ಯುವತಿ. ಗಾಯಾಳು ವಿಜಯಲಕ್ಷ್ಮೀಯನ್ನು ಮಾಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿರತೆ ಸೆರೆ ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಕರು ಬಲಿ
ಚಾಮರಾಜನಗರ: ಚಿರತೆ ದಾಳಿಗೆ ಕರು ಬಲಿಯಾದ ಘಟನೆ ತಾಲೂಕಿನ ಬಂಡೀಪುರ ಪ್ರಾದೇಶಿಕ ಅರಣ್ಯ ವ್ಯಾಪ್ತಿಯ ಕಿಲಗೆರೆ ಗ್ರಾಮದ ಬಳಿ ನಡೆದಿದೆ. ಗ್ರಾಮದ ಪ್ರಜ್ವಲ್ ಎಂಬವರಿಗೆ ಸೇರಿದ ಕರುವಿನ ಮೇಲೆ ಹುತ್ತೂರು ಕಿಲಗೆರೆ ಗೇಟ್ ಹಾಗೂ ಮಾದಲವಾಡಿ ಗ್ರಾಮದ ಮಾರ್ಗಮಧ್ಯೆ ಇರುವ ಜಮೀನಿನಲ್ಲಿ ತಡರಾತ್ರಿ ದಾಳಿ ನಡೆಸಿ ಕೊಂದು ಹಾಕಿದೆ.