Ranbir Kapoor: ‘ಬ್ರಹ್ಮಾಸ್ತ್ರ ನೋಡಿ ಅಂತ ನಾನು ಎಲ್ಲರ ಮನೆಗೆ ಹೋಗಿ ಬೇಡಿಕೊಳ್ಳಬೇಕಾ?’: ಸಿಟ್ಟಾದ ರಣಬೀರ್​ ಕಪೂರ್​ – Ranbir Kapoor shouts at Brahmastra promotion team ahead of OTT release on Disney Plus Hotstar


Brahmastra OTT Release Date: ‘ಬ್ರಹ್ಮಾಸ್ತ್ರ’ ಚಿತ್ರದ ನಟ ರಣಬೀರ್​ ಕಪೂರ್​ ಅವರು ಕೂಗಾಡುತ್ತಿರುವ ವಿಡಿಯೋ ವೈರಲ್​ ಆಗಿದೆ. ‘ಕಟು ಸತ್ಯಗಳು’ ಎಂದು ಅವರ ಮಡದಿ ಆಲಿಯಾ ಭಟ್​ ಅವರು ಇದಕ್ಕೆ ಕ್ಯಾಪ್ಷನ್​ ನೀಡಿದ್ದಾರೆ.

Ranbir Kapoor: ‘ಬ್ರಹ್ಮಾಸ್ತ್ರ ನೋಡಿ ಅಂತ ನಾನು ಎಲ್ಲರ ಮನೆಗೆ ಹೋಗಿ ಬೇಡಿಕೊಳ್ಳಬೇಕಾ?’: ಸಿಟ್ಟಾದ ರಣಬೀರ್​ ಕಪೂರ್​

ರಣಬೀರ್ ಕಪೂರ್

ನಟ ರಣಬೀರ್​ ಕಪೂರ್​ (Ranbir Kapoor) ಅವರು ಬಾಲಿವುಡ್​ನಲ್ಲಿ ಸ್ಟಾರ್ ಹೀರೋ ಆಗಿ ಮೆರೆಯುತ್ತಿದ್ದಾರೆ. ಅವರು ನಟಿಸಿದ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾ ಸೂಪರ್​ ಹಿಟ್​ ಆಗಿದೆ. ಚಿತ್ರಮಂದಿರದಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದ ಬಳಿಕ ಆ ಸಿನಿಮಾ ಈಗ ಒಟಿಟಿಗೆ ಬರುತ್ತಿದೆ. ಈ ಸಲುವಾಗಿ ಮತ್ತೆ ಪ್ರಚಾರ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿದೆ. ಆದರೆ ಪ್ರಚಾರ ಮಾಡಲು ರಣಬೀರ್​ ಕಪೂರ್​ ಅವರಿಗೆ ಮನಸ್ಸು ಇಲ್ಲ. ಈಗಾಗಲೇ ಹಿಟ್​ ಆಗಿರುವ ಚಿತ್ರಕ್ಕೆ ಮತ್ತೆ ಪ್ರಮೋಷನ್​ ಯಾಕೆ ಬೇಕು ಎಂಬುದು ಅವರ ವಾದ. ಅದೇ ಕಾನ್ಸೆಪ್ಟ್​ ಇಟ್ಟುಕೊಂಡು ಒಂದು ವಿಡಿಯೋ ಮಾಡಲಾಗಿದೆ. ಆ ವಿಡಿಯೋ ವೈರಲ್​ ಆಗಿದ್ದು, ನಟಿ ಆಲಿಯಾ ಭಟ್​ (Alia Bhatt) ಸೇರಿದಂತೆ ಅನೇಕರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ.

ಪ್ರಮೋಷನ್​ ಟೀಮ್​ ಜೊತೆ ರಣಬೀರ್​ ಕಪೂರ್ ಅವರು ಫೋನ್​ನಲ್ಲಿ ಮಾತನಾಡುತ್ತಾರೆ. ‘ಆಗಲ್ಲ ಅಣ್ಣಾ.. ನನಗೆ ಸಾಕಾಗಿದೆ. ಬ್ರಹ್ಮಾಸ್ತ್ರ ಸಿನಿಮಾನೂ ಸಾಕು, ನಿರ್ದೇಶಕ ಅಯಾನ್​ ಮುಖರ್ಜಿ ಸಹವಾಸವೂ ಸಾಕು. ಬ್ರಹ್ಮಾಸ್ತ್ರ ಚಿತ್ರ ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ ಬರುತ್ತಿದೆ ಎಂದ ಮಾತ್ರಕ್ಕೆ ಮತ್ತೆ ನಾವು ಪ್ರಚಾರಕ್ಕೆ ಬರಬೇಕಾ’ ಎಂದು ರಣಬೀರ್​ ಕಪೂರ್​ ಅವರು ಕೂಗಾಡುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ.

‘ಈಗ ನಾನೇನು ಮಾಡಬೇಕು? ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ ಬ್ರಹ್ಮಾಸ್ತ್ರ ಸಿನಿಮಾ ನೋಡಿ ಅಂತ ಪ್ರತಿಯೊಬ್ಬರ ಮನೆಗೆ ಹೋಗಿ ನಾನು ಬೇಡಿಕೊಳ್ಳಬೇಕಾ? ಬೆಳಕು ಬರುತ್ತಿದೆ.. ಹ್ಯಾಪಿ ದೀಪಾವಳಿ ಎನ್ನಬೇಕಾ? ಬೆಳಕು ಬಂದಾಗಿದೆ. ಬ್ರಹ್ಮಾಸ್ತ್ರ ದೊಡ್ಡ ಹಿಟ್​ ಆಗಿದೆ. ಬ್ರಹ್ಮಾಸ್ತ್ರ ಪ್ರಚಾರ ಮಾಡೋದು ಬಿಟ್ಟರೆ ನನ್ನ ಬದುಕಿನಲ್ಲಿ ಬೇರೆ ಏನೂ ಇಲ್ಲ ಅಂತ ಅಯಾನ್​ ಮುಖರ್ಜಿ ಅಂದುಕೊಂಡಿದ್ದಾರಾ? ತಂದೆ ಆಗ್ತಾ ಇದ್ದೀನಿ. ನನ್ನ ಬದುಕಿನ ಅತಿ ದೊಡ್ಡ ಕ್ಷಣ ಇದು’ ಎಂದು ರಣಬೀರ್​ ಕಪೂರ್​ ಕಿರುಚಾಡುತ್ತಾರೆ.

ಇದಾಗ ತಕ್ಷಣ ಅಯಾನ್​ ಮುಖರ್ಜಿಯ ಕಾಲ್​ ಬರುತ್ತದೆ. ತಕ್ಷಣವೇ ಮೆತ್ತಗಾಗುವ ರಣಬೀರ್​ ಕಫೂರ್​, ‘ಹೌದು, ಹೌದು.. ನಾವು ಪ್ರಮೋಷನ್​ ಮಾಡಬೇಕು’ ಅಂತ ಒಪ್ಪಿಕೊಳ್ಳುತ್ತಾರೆ. ಫೋನ್​ ಕರೆ ಕಟ್​ ಮಾಡಿದ ಬಳಿಕ ತಲೆ ಚಚ್ಚಿಕೊಳ್ಳುತ್ತಾರೆ. ಪ್ರಚಾರಕ್ಕಾಗಿಯೇ ಮಾಡಿದ ಈ ವಿಡಿಯೋ ಸಖತ್​ ಫನ್ನಿ ಆಗಿದೆ. ಆಲಿಯಾ ಭಟ್​ ಅವರು ಇದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದಾರೆ. ‘ಕಟು ಸತ್ಯಗಳು’ ಎಂದು ಅವರು ಕ್ಯಾಪ್ಷನ್​ ನೀಡಿದ್ದಾರೆ.

ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ ನವೆಂಬರ್​ 4ರಂದು ‘ಬ್ರಹ್ಮಾಸ್ತ್ರ’ ಸಿನಿಮಾ ಸ್ಟ್ರೀಮಿಂಗ್​ ಆರಂಭಿಸಲಿದೆ. ಅಮಿತಾಭ್​ ಬಚ್ಚನ್​, ನಾಗಾರ್ಜುನ, ಶಾರುಖ್​ ಖಾನ್​, ಮೌನಿ ರಾಯ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕಳಪೆ ಗ್ರಾಫಿಕ್ಸ್​ ಕಾರಣಕ್ಕೆ ಈ ಚಿತ್ರದ ಟ್ರೇಲರ್​ ಅನ್ನು ಟ್ರೋಲ್​ ಮಾಡಲಾಗಿತ್ತು. ಆದರೆ ಸಿನಿಮಾ ಸೂಪರ್​ ಹಿಟ್​ ಆಯಿತು.

TV9 Kannada


Leave a Reply

Your email address will not be published.