Ranjani Raghavan: ಹಳ್ಳಿ ಮಹಿಳೆಯರ ಜೊತೆ ಸೋಬಾನೆ ಪದ ಹಾಡಿದ ‘ಕನ್ನಡತಿ’ ಸೀರಿಯಲ್​ ಭುವಿ; ಇಲ್ಲಿದೆ ವಿಡಿಯೋ | Kannadathi Serial Bhuvi aka Ranjani Raghavan sings Sobane song with rural women


Ranjani Raghavan: ಹಳ್ಳಿ ಮಹಿಳೆಯರ ಜೊತೆ ಸೋಬಾನೆ ಪದ ಹಾಡಿದ ‘ಕನ್ನಡತಿ’ ಸೀರಿಯಲ್​ ಭುವಿ; ಇಲ್ಲಿದೆ ವಿಡಿಯೋ

ರಂಜನಿ ರಾಘವನ್

‘ಜಾನಪದ ಸಾಹಿತ್ಯದಲ್ಲಿ ಸೋಬಾನೆ ಪದಕ್ಕೆ ವಿಶಿಷ್ಟ ಸ್ಥಾನವಿದೆ. ಈ ಕಲೆಯನ್ನು ಉಳಿಸುವಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ಹಿರಿದು’ ಎಂದು ರಂಜನಿ ರಾಘವನ್​ ಹೇಳಿದ್ದಾರೆ.

ನಟಿ ರಂಜನಿ ರಾಘವನ್​ (Ranjani Raghavan) ಅವರು ಬಹುಮುಖ ಪ್ರತಿಭೆ. ನಟಿಯಾಗಿ, ಲೇಖಕಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ‘ಕನ್ನಡತಿ’ ಸೀರಿಯಲ್​ (Kannadathi Serial) ಭುವಿ ಪಾತ್ರದ ಮೂಲಕ ಅವರು ಅಪಾರ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲೂ ಅವರು ತುಂಬ ಫೇಮಸ್​. ಇನ್​ಸ್ಟಾಗ್ರಾಮ್​ನಲ್ಲಿ ಅವರು ಆಗಾಗ ಏನಾದರೂ ಅಪ್​ಡೇಟ್​ ನೀಡುತ್ತಾ ಇರುತ್ತಾರೆ. ಅಭಿಮಾನಿಗಳಿಗಾಗಿ ತಮ್ಮ ದಿನಚರಿಯ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ. ಈಗ ರಂಜನಿ ರಾಘವನ್​ ಅವರು ಒಂದು ವಿಶೇಷ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ಹಳ್ಳಿ ಮಹಿಳೆಯರ ಜೊತೆ ಸೇರಿ ಸೋಬಾನೆ ಪದ (Sobane Song) ಹಾಡುತ್ತಿರುವುದು ಸೊಗಸಾಗಿದೆ. ಅಭಿಮಾನಿಗಳಿಗೆ ಈ ವಿಡಿಯೋ ತುಂಬ ಇಷ್ಟ ಆಗಿದ್ದು, ಕಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಗ್ರಾಮೀಣ ಸೊಗಡಿನ ಈ ಹಾಡನ್ನು ಹೇಳಿದ್ದಕ್ಕಾಗಿ ಅವರ ಫ್ಯಾನ್ಸ್​ ಖುಷಿಪಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ರಂಜನಿ ಅವರು ವಿಶೇಷವಾಗಿ ಗುರುತಿಸಿಕೊಳ್ಳುತ್ತಾರೆ.

ರಂಜನಿ ರಾಘವನ್​ ಅವರು ಅಪ್ಪಟ ಕನ್ನಡದ ನಟಿ. ಧಾರಾವಾಹಿ ಪಾತ್ರದ ರೀತಿ ನಿಜಜೀವನದಲ್ಲಿಯೂ ಅವರು ಕನ್ನಡ ಭಾಷೆ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಬಾನೆ ಪದ ಕೇಳುವುದು ಕಡಿಮೆ ಆಗಿದೆ. ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಹೊಸ ಪೀಳಿಗೆಯವರಿಗೆ ಪರಿಚಯಿಸಿದ್ದಕ್ಕಾಗಿ ಅನೇಕರು ರಂಜನಿ ರಾಘವನ್​ಗೆ ಕಮೆಂಟ್​ ಮೂಲಕ ಮೆಚ್ಚುಗೆ ಮತ್ತು ಧನ್ಯವಾದ ತಿಳಿಸಿದ್ದಾರೆ.

TV9 Kannada


Leave a Reply

Your email address will not be published.