Ranji Trophy: ಸಂಕಷ್ಟದಲ್ಲಿದ್ದ ತಂಡಕ್ಕೆ ಕ್ರೀಡಾ ಸಚಿವರ ನೆರವು; ರಣಜಿ ಸೆಮಿಫೈನಲ್​ನಲ್ಲಿ ಮನೋಜ್ ಅಬ್ಬರ | Manoj tiwary hits fifty Bengal vs Madhya Pradesh ranji trophy 2022 semi final


Ranji Trophy: ಸಂಕಷ್ಟದಲ್ಲಿದ್ದ ತಂಡಕ್ಕೆ ಕ್ರೀಡಾ ಸಚಿವರ ನೆರವು; ರಣಜಿ ಸೆಮಿಫೈನಲ್​ನಲ್ಲಿ ಮನೋಜ್ ಅಬ್ಬರ

ಮನೋಜ್ ತಿವಾರಿ

Ranji Trophy: ಇದಕ್ಕೂ ಮುನ್ನ ಮನೋಜ್ ತಿವಾರಿ ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಖಂಡ್ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ 136 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು.

ರಣಜಿ ಟ್ರೋಫಿಯಲ್ಲಿ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ (West Bengal Sports Minister) ಮನೋಜ್ ತಿವಾರಿ (Manoj Tiwary) ಅಬ್ಬರ ಮುಂದುವರಿದಿದೆ. ರಣಜಿ ಟ್ರೋಫಿ (Ranji Trophy)ಯ ಕ್ವಾರ್ಟರ್ ಫೈನಲ್ ಬಳಿಕ ಇದೀಗ ಸೆಮಿಫೈನಲ್​ನಲ್ಲೂ ಶತಕದ ಸನಿಹಕ್ಕೆ ಬಂದಿದ್ದಾರೆ. ಮಧ್ಯಪ್ರದೇಶ ವಿರುದ್ಧದ ಸೆಮಿಫೈನಲ್‌ನಲ್ಲಿ ತಿವಾರಿ ಅದ್ಭುತ 84 ರನ್ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಜೊತೆಗೆ ಎರಡನೇ ದಿನದಾಟದ ಅಂತ್ಯಕ್ಕೆ 84 ರನ್ ಗಳಿಸಿ ಅಜೇಯರಾಗಿ ಉಳಿದರು. ಮೊದಲು ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 341 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬೆಂಗಾಲ್ ತಂಡ ಅತ್ಯಂತ ಕಳಪೆ ಆರಂಭ ಮಾಡಿತ್ತು. ಅಲ್ಲದೆ ಬಂಗಾಳ ಶೂನ್ಯಕ್ಕೆ 2 ವಿಕೆಟ್ ಕಳೆದುಕೊಂಡಿತು.

ಮನೋಜ್ ಮತ್ತು ಶಹಬಾಜ್ ನಡುವೆ ದೊಡ್ಡ ಪಾಲುದಾರಿಕೆ

ಇದಾದ ಬಳಿಕವೂ ವಿಕೆಟ್ ಪತನದ ಪ್ರಕ್ರಿಯೆ ಮುಂದುವರಿದಿದ್ದು, ಬಂಗಾಳ ಕೇವಲ 54 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಕ್ರೀಡಾ ಸಚಿವರ ಬಲವಾದ ಬೆಂಬಲ ಸಿಕ್ಕಿತು. ತಿವಾರಿ, ಶಹಬಾಜ್ ಅಹ್ಮದ್ ಅವರೊಂದಿಗೆ ಎರಡನೇ ದಿನ ಸ್ಟಂಪ್ ತನಕ ಕ್ರೀಸ್‌ನಲ್ಲಿ ಉಳಿದು ಬಂಗಾಳದ ಸ್ಕೋರ್ ಅನ್ನು 197 ರನ್‌ಗಳಿಗೆ ಕೊಂಡೊಯ್ದರು. ಮನೋಜ್ ತಿವಾರಿ 182 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 84 ರನ್ ಗಳಿಸಿದರು. ಅದೇ ಸಮಯದಲ್ಲಿ, ಅಹ್ಮದ್ 149 ಎಸೆತಗಳಲ್ಲಿ 72 ರನ್ ಗಳಿಸಿದ್ದಾರೆ.

ಕ್ವಾರ್ಟರ್ ಫೈನಲ್‌ನಲ್ಲಿ 136 ರನ್

ಇದಕ್ಕೂ ಮುನ್ನ ಮನೋಜ್ ತಿವಾರಿ ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಖಂಡ್ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ 136 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಅವರು 19 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಬೆಂಗಾಲ್ ಮತ್ತು ಜಾರ್ಖಂಡ್ ನಡುವೆ ನಡೆದ ಕ್ವಾರ್ಟರ್-ಫೈನಲ್ ಡ್ರಾದಲ್ಲಿ ಕೊನೆಗೊಂಡಿತು. ಬೆಂಗಾಲ್ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಸೆಮಿಫೈನಲ್ ಪ್ರವೇಶಿಸಿತು. ಅಲ್ಲದೆ ಮನೋಜ್ ಮೊದಲ ಇನ್ನಿಂಗ್ಸ್‌ನಲ್ಲಿ 73 ರನ್ ಗಳಿಸಿದ್ದರು.

TV9 Kannada


Leave a Reply

Your email address will not be published.