Ranji Trophy: 56 ಬೌಂಡರಿ, 341 ರನ್! ಚೊಚ್ಚಲ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ 22ರ ಹರೆಯದ ಬ್ಯಾಟರ್ | Bihar Cricketer Sakibul Gani hit Triple Century on Ranji Trophy Debut against Mizoram


Ranji Trophy: 56 ಬೌಂಡರಿ, 341 ರನ್! ಚೊಚ್ಚಲ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ 22ರ ಹರೆಯದ ಬ್ಯಾಟರ್

ಶಕೀಬುಲ್ ಘನಿ

ರಣಜಿ ಟ್ರೋಫಿ (Ranji Trophy)ಯಲ್ಲಿ, 22 ವರ್ಷದ ಬ್ಯಾಟ್ಸ್‌ಮನ್ ಶಕೀಬುಲ್ ಘನಿ (Sakibul Gani) ಅವರ ಪ್ರಯಾಣ ಉತ್ತಮವಾಗಿ ಪ್ರಾರಂಭವಾಗಿದೆ. ಇಲ್ಲಿಯವರೆಗೆ ಯಾರೂ ಮಾಡದ ಅದ್ಭುತ ದಾಖಲೆಯನ್ನು ಬಿಹಾರದ ಈ ಆಟಗಾರ ಮಾಡಿದ್ದಾನೆ. ಇದರೊಂದಿಗೆ ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವದಾದ್ಯಂತ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಯಾವುದೇ ಆಟಗಾರ ರಣಜಿ ಟ್ರೋಫಿಯಲ್ಲಿ ಮಾಡದ ದಾಖಲೆಯನ್ನು ಈ ಆಟಗಾರ ಮಾಡಿದ್ದಾನೆ. ಪ್ರಥಮ ದರ್ಜೆ ಪಂದ್ಯದಲ್ಲಿ ಹಲವು ಟ್ರಿಪಲ್ ಶತಕಗಳು ಸಿಡಿದಿವೆ. ಆದರೆ ಬಿಹಾರದ ಶಕೀಬುಲ್ ಘನಿ ಚೊಚ್ಚಲ ಪಂದ್ಯದಲ್ಲೇ ತ್ರಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ರಣಜಿ ಟ್ರೋಫಿಯ ಪದಾರ್ಪಣೆ ಪಂದ್ಯದಲ್ಲೇ ಅತಿ ಹೆಚ್ಚು ಸ್ಕೋರ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಸಕಿಬುಲ್ ಘನಿ 387 ಎಸೆತಗಳಲ್ಲಿ 50 ಬೌಂಡರಿಗಳ ನೆರವಿನಿಂದ ತ್ರಿಶತಕ ಪೂರೈಸಿದರು.

ಶಕೀಬುಲ್ ಘನಿಗೂ ಮೊದಲು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ವಿಶ್ವದಾಖಲೆ ಮಧ್ಯಪ್ರದೇಶದ ಬ್ಯಾಟ್ಸ್‌ಮನ್ ಅಜಯ್ ರೊಹೆರಾ ಹೆಸರಿನಲ್ಲಿತ್ತು. ಹೈದರಾಬಾದ್ ವಿರುದ್ಧ 2018-19ರ ರಣಜಿ ಋತುವಿನಲ್ಲಿ ಅವರು ಈ ಸಾಧನೆ ಮಾಡಿದರು. ಆಗ ಅಜಯ್ ರೊಹೆರಾ 267 ರನ್ ಗಳಿಸಿದ್ದರು. ಆದರೆ ಬಿಹಾರದ ಶಕೀಬುಲ್ ಘನಿ ಈಗ ಆ ದಾಖಲೆಯನ್ನು ಮುರಿಯುವ ಮೂಲಕ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಚೊಚ್ಚಲ ಪಂದ್ಯದಲ್ಲೇ ವಿಶ್ವದಾಖಲೆ

ಮಿಜೋರಾಂ ವಿರುದ್ಧದ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಬಿಹಾರ ಆರಂಭ ಉತ್ತಮವಾಗಿರಲಿಲ್ಲ. ತಂಡದ 3 ಬ್ಯಾಟ್ಸ್‌ಮನ್‌ಗಳು ಕೇವಲ 71 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಆ ನಂತರ ಕಂಡದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಶಕೀಬುಲ್ ಘನಿ ಮತ್ತು ಬಾಬುಲ್ ಕುಮಾರ್ ಮಿಜೋರಾಂ ತಂಡದ ಬೌಲಿಂಗ್‌ ಅನ್ನು ಮೆಟ್ಟಿ ನಿಂತರು. ಈ ವೇಳೆ ಪದಾರ್ಪಣೆ ಮಾಡಿದ ಸಕಿಬುಲ್ ಅಮೋಘ ಟ್ರಿಪಲ್ ಶತಕ ಬಾರಿಸಿ ಹೊಸ ವಿಶ್ವ ದಾಖಲೆ ಬರೆದರು.

ಶಕೀಬುಲ್ ಘನಿ ವಿಶ್ವ ದಾಖಲೆಯ ಇನ್ನಿಂಗ್ಸ್‌ನಲ್ಲಿ 341 ರನ್

ಬಿಹಾರದ ಶಕೀಬುಲ್ ಘನಿ ತಮ್ಮ ಇಡೀ ಇನ್ನಿಂಗ್ಸ್‌ನಲ್ಲಿ 341 ರನ್ ಗಳಿಸಿದರು. ಇದಕ್ಕಾಗಿ ಅವರು 405 ಎಸೆತಗಳನ್ನು ಎದುರಿಸಿದರು. ಅದೇ ಸಮಯದಲ್ಲಿ, ಈ ವಿಶ್ವ ದಾಖಲೆಯ ಇನ್ನಿಂಗ್ಸ್‌ನಲ್ಲಿ ಶಕೀಬುಲ್ 56 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು ಬಾಬುಲ್ ಕುಮಾರ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 756 ಎಸೆತಗಳಲ್ಲಿ 538 ರನ್‌ಗಳನ್ನು ಹಂಚಿಕೊಂಡರು.

TV9 Kannada


Leave a Reply

Your email address will not be published. Required fields are marked *