Rape Case: ಕಳ್ಳತನಕ್ಕೆ ಬಂದವರಿಂದ 87ವರ್ಷದ ವೃದ್ಧೆ ಮೇಲೆ ಅತ್ಯಾಚಾರ! | Rape Case 87 year old woman raped in Delhi Tilak Nagar Crime News


Rape Case: ಕಳ್ಳತನಕ್ಕೆ ಬಂದವರಿಂದ 87ವರ್ಷದ ವೃದ್ಧೆ ಮೇಲೆ ಅತ್ಯಾಚಾರ!

ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi Crime) ತಿಲಕ್ ನಗರದಲ್ಲಿ 87 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ (Rape) ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಮನೆಯಲ್ಲಿ ಮೊಬೈಲ್ ಕಳುವಾಗಿದೆ ಎಂದು ತಿಲಕ್ ನಗರದ ಮನೆಯೊಂದರ ಮೊಬೈಲ್ ಫೋನ್ ಕಳ್ಳತನದ ಬಗ್ಗೆ ವೃದ್ಧೆಯ ಮಗಳು ಫೆಬ್ರವರಿ 13ರಂದು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ, ಆ ಕಳ್ಳತನ ನಡೆದ ಮನೆಯಲ್ಲಿದ್ದ ತನ್ನ 87 ವರ್ಷದ ಅಮ್ಮನ ಮೇಲೂ ಅತ್ಯಾಚಾರ ಎಸಗಲಾಗಿದೆ ಎಂದು ಆ ಮಹಿಳೆ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡನೆಯ ಸೆಕ್ಷನ್ (ಐಪಿಸಿ) 380 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ವೃದ್ಧೆಯ ಮೇಲೆ ಅತ್ಯಾಚಾರವೆಸಗಿ, ಮನೆಯಲ್ಲಿ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಲಾಗಿದೆ. ಈ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತನ್ನ ಮೇಲೆ ನಡೆದ ಅತ್ಯಾಚಾರರಿಂದ ಆಘಾತಕ್ಕೊಳಗಾಗಿರುವ ವೃದ್ಧೆಗೆ ಕೌನ್ಸಿಲಿಂಗ್ ನೀಡಲಾಗುತ್ತಿದೆ. IANS ಮಾಹಿತಿಯ ಪ್ರಕಾರ, 2020ರ ಡೇಟಾಗೆ ಹೋಲಿಸಿದರೆ 2021ರ ಅಕ್ಟೋಬರ್​ವರೆಗೆ ದೆಹಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧವು ಹೆಚ್ಚುತ್ತಲೇ ಇದೆ. 4 ತಿಂಗಳ ಹಿಂದೆ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿ-ಅಂಶಗಳ ಪ್ರಕಾರ, ಭಾರತದ ಎಲ್ಲಾ ಮಹಾನಗರಗಳ ಪೈಕಿ ದೆಹಲಿಯಲ್ಲೇ ಮಹಿಳೆಯರ ವಿರುದ್ಧ ಅತಿ ಹೆಚ್ಚು ಅಪರಾಧಗಳು ದಾಖಲಾಗಿದೆ.

ದೆಹಲಿ ಪೊಲೀಸರು ಸಂಗ್ರಹಿಸಿದ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ 2021ರ ಅಕ್ಟೋಬರ್ 31ರವರೆಗೆ 1,725 ​​ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗಿದೆ. 2020ರಲ್ಲಿ ಅದೇ ಅವಧಿಯಲ್ಲಿ 1,429 ಮಹಿಳೆಯ ಮೇಲೆ ಅತ್ಯಾಚಾರವೆಸಗಲಾಗಿದೆ. 2020ರ ಡೇಟಾಗೆ ಹೋಲಿಸಿದರೆ 2021ರಲ್ಲಿ ಅಪರಾಧಗಳ ದರದಲ್ಲಿ ಶೇ. 20ರಷ್ಟು ಹೆಚ್ಚಳವಾಗಿದೆ. 2020ರಲ್ಲಿ ಮಹಿಳೆಯರ ವಿರುದ್ಧದ ಒಟ್ಟು ಅಪರಾಧಗಳ ಸಂಖ್ಯೆ 7,948ರಷ್ಟಿತ್ತು. ಇದು 2021ರಲ್ಲಿ 11,527ಕ್ಕೆ ಏರಿಕೆಯಾಯಿತು. ಒಟ್ಟಾರೆಯಾಗಿ, 2021ರ ಮೊದಲ 10 ತಿಂಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧವು ಶೇ. 45ರಷ್ಟು ಹೆಚ್ಚಾಗಿದೆ.

TV9 Kannada


Leave a Reply

Your email address will not be published.