Rashi Brothers: ಶಿವರಾಂ ಸ್ಥಾಪಿಸಿದ್ದ ರಾಶಿ ಬ್ರದರ್ಸ್​ ನಿರ್ಮಾಣ ಸಂಸ್ಥೆ ಹೆಸರಿನ ಅರ್ಥವೇನು ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ | Here is Meaning of Rashi Brothers which is Started by Shivaram And Ramanathan


Rashi Brothers: ಶಿವರಾಂ ಸ್ಥಾಪಿಸಿದ್ದ ರಾಶಿ ಬ್ರದರ್ಸ್​ ನಿರ್ಮಾಣ ಸಂಸ್ಥೆ ಹೆಸರಿನ ಅರ್ಥವೇನು ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಶಿವರಾಂ

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ, ನಿರ್ಮಾಪಕ ‘ಶಿವರಾಂ’ ಅವರು ಇಂದು (ಡಿಸೆಂಬರ್​ 4) ನಿಧನ ಹೊಂದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ನಟನೆ ಜತೆಗೆ ನಿರ್ಮಾಣದಲ್ಲೂ ಆಸಕ್ತಿ ಬೆಳೆಸಿಕೊಂಡವರು ಶಿವರಾಂ. ಅವರು ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ‘ರಾಶಿ ಬ್ರದರ್ಸ್’​ ಸಿನಿಮಾ ನಿರ್ಮಾಣ ಸಂಸ್ಥೆ ಸ್ಥಾಪಿಸಿ, ಅದರ ಅಡಿಯಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.

ಶಿವರಾಂ​ ಅವರು ಸಹೋದರ ರಾಮನಾಥನ್​ ಜತೆಗೂಡಿ ರಾಶಿ ಬ್ರದರ್ಸ್​ ನಿರ್ಮಾಣ ಸಂಸ್ಥೆ ಸ್ಥಾಪನೆ ಮಾಡಿದರು. ರಾಮನಾಥನ್​ ಹೆಸರಿನ ಮೊದಲ ಅಕ್ಷರ ಹಾಗೂ ಶಿವರಾಂ ಹೆಸರಿನ ಮೊದಲ ಅಕ್ಷರ ಬಳಕೆ ಮಾಡಿಕೊಂಡು ರಾಶಿ ಬ್ರದರ್ಸ್​ ಎಂದು ನಾಮಕರಣ ಮಾಡಲಾಯಿತು. ಈ ಸಹೋದರರು ಒಟ್ಟೂ ಆರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.

1970ರಲ್ಲಿ ಬಂದ ‘ಗೆಜ್ಜೆ ಪೂಜೆ’ ಇವರ ನಿರ್ಮಾಣದ ಮೊದಲ ಸಿನಿಮಾ. ಈ ಚಿತ್ರಕ್ಕೆ ಖ್ಯಾತ ನಟಿ ಕಲ್ಪನಾ ನಾಯಕಿ. 1974ರಲ್ಲಿ ‘ಉಪಾಸನೆ’ ಸಿನಿಮಾ ತೆರೆಗೆ ಬಂತು. 1979ರಲ್ಲಿ ‘ನಾನೊಬ್ಬ ಕಳ್ಳ’ ಇವರ ಬ್ಯಾನರ್​ ಅಡಿಯಲ್ಲಿ ಮೂಡಿ ಬಂತು. 1980ರಲ್ಲಿ ಬಂದ ‘ಡ್ರೈವರ್‌ ಹನುಮಂತು’ ಚಿತ್ರವನ್ನು ರಾಶಿ ಬ್ರದರ್ಸ್​ ನಿರ್ಮಾಣ ಮಾಡಿದರು. ಶಿವರಾಂ ಅವರೇ ಮುಖ್ಯ ಪಾತ್ರ ನಿರ್ವಹಿಸಿದರು. ಡಾ.ವಿಷ್ಣುವರ್ಧನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. 1991ರಲ್ಲಿ ತೆರೆಗೆ ಬಂದ ತಮಿಳಿನ ‘ಧರ್ಮದುರೈ’ ಚಿತ್ರಕ್ಕೆ ಬಂಡವಾಳ ಹೂಡಿದರು. ಈ ಚಿತ್ರಕ್ಕೆ ರಜಿನಿಕಾಂತ್‌ ಹೀರೋ. ಶಿವರಾಜ್‌ಕುಮಾರ್ ಅಭಿನಯದ ‘ಬಹಳ ಚೆನ್ನಾಗಿದೆ’ ಚಿತ್ರವನ್ನು ರಾಶಿ ಸಹೋದರರು ನಿರ್ಮಿಸಿದರು. ಇದು ಅವರ ನಿರ್ಮಾಣದ ಕೊನೆಯ ಸಿನಿಮಾ.

1972ರಲ್ಲಿ ತೆರೆಗೆ ಬಂದ ‘ಹೃದಯ ಸಂಗಮ’ ಚಿತ್ರವನ್ನು ರಾಮನಾಥನ್​ ಹಾಗೂ ಶಿವರಾಂ ಒಟ್ಟಾಗಿ ನಿರ್ದೇಶನ ಮಾಡಿದ್ದರು. ಇಬ್ಬರೂ ಸೇರಿ ನಿರ್ದೇಶನ ಮಾಡಿದ ಮೊದಲ ಹಾಗೂ ಕೊನೆಯ ಸಿನಿಮಾ ಇದಾಗಿದೆ. ಇದಾದ ಬಳಿಕ ಅವರು ಯಾವುದೇ ಸಿನಿಮಾವನ್ನೂ ನಿರ್ದೇಶನ ಮಾಡಿಲ್ಲ.

ರಾಮನಾಥನ್​ ಅವರು ಹಿರಿಯ ನಿರ್ದೇಶಕರು. ಅಮಿತಾಭ್​ ಬಚ್ಚನ್​, ರಜನಿಕಾಂತ್​ ಜತೆ ಇವರಿಗೆ ಒಳ್ಳೆಯ ಒಡನಾಟ ಇತ್ತು. ದಕ್ಷಿಣ ಭಾರತದ ಚಿತ್ರರಂಗಕ್ಕೂ ಹಾಗೂ ಬಾಲಿವುಡ್​ಗೂ ಇವರು ಕೊಂಡಿ ಆಗಿದ್ದರು. 2013ರಲ್ಲಿ ಇವರು ನಿಧನ ಹೊಂದಿದ್ದರು.

TV9 Kannada


Leave a Reply

Your email address will not be published. Required fields are marked *