Ravidas Jayanti ರವಿದಾಸ್ ಜಯಂತಿ ಪ್ರಯುಕ್ತ ರವಿದಾಸ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನರೇಂದ್ರ ಮೋದಿ; ವಿಡಿಯೊ ನೋಡಿ | PM Narendra Modi offers prayers at Guru Ravidas Vishram Dham Mandir Posts Video of Very Special Moments


Ravidas Jayanti ರವಿದಾಸ್ ಜಯಂತಿ ಪ್ರಯುಕ್ತ  ರವಿದಾಸ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನರೇಂದ್ರ ಮೋದಿ; ವಿಡಿಯೊ ನೋಡಿ

ನರೇಂದ್ರ ಮೋದಿ

ದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ಅವರು ಬುಧವಾರ ರವಿದಾಸ್ ಜಯಂತಿಯ (Ravidas Jayanti) ಸಂದರ್ಭದಲ್ಲಿ ದೇಶದ ನಾಗರಿಕರಿಗೆ ಶುಭ ಹಾರೈಸಿದರು. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ರಾಷ್ಟ್ರಪತಿ ಕೋವಿಂದ್, ಸಂತರು ತೋರಿಸಿದ ಮಾರ್ಗವನ್ನು ಅನುಸರಿಸುವ ಮೂಲಕ ಸಮಾನತೆ ಮತ್ತು ಸೌಹಾರ್ದತೆಯ ಆಧಾರದ ಮೇಲೆ ಸಮಾಜವನ್ನು ನಿರ್ಮಿಸಲು ದೇಶದ ಜನತೆಗೆ ಕೊಡುಗೆ ನೀಡುವಂತೆ ಕೋರಿದ್ದಾರೆ. ಗುರು ರವಿದಾಸ್ ಜಯಂತಿಯಂದು ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳು. ಯಾವುದೇ ತಾರತಮ್ಯವಿಲ್ಲದೆ ಪರಸ್ಪರ ಪ್ರೀತಿ ಮತ್ತು ಸಮಾನತೆಯನ್ನು ಕಾಣುವ ಸಂದೇಶವನ್ನು ಮಹಾನ್ ಸಂತ ಗುರು ರವಿದಾಸ್ ಜೀ ನೀಡಿದರು. ಗುರು ರವಿದಾಸ್ ಜಿ ತೋರಿಸಿದ ಮಾರ್ಗವನ್ನು ಅನುಸರಿಸುವ ಮೂಲಕ ಸಮಾನತೆ, ಸಾಮರಸ್ಯ ಮತ್ತು ಸಮನ್ವಯದ ಆಧಾರದ ಮೇಲೆ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಕೊಡುಗೆ ನೀಡೋಣ ಎಂದು ರಾಷ್ಟ್ರಪತಿ ಟ್ವೀಟ್ ಮಾಡಿದ್ದಾರೆ. ದೆಹಲಿಯ ಕರೋಲ್ ಬಾಗ್‌ನಲ್ಲಿರುವ ಗುರು ರವಿದಾಸ್ ವಿಶ್ರಾಮ್ ಧಾಮ್ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಾರ್ಥನೆ ಸಲ್ಲಿಸಿದರು. ಭಕ್ತರೊಂದಿಗೆ ಸಂವಾದ ನಡೆಸಿದ ಮೋದಿ ದೇವಸ್ಥಾನದಲ್ಲಿ ‘ಶಾಬಾದ್ ಕೀರ್ತನೆ’ಯಲ್ಲಿ ಭಾಗವಹಿಸಿದರು. ಸಂದರ್ಶಕರ ಪುಸ್ತಕದಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ಗುರು ರವಿದಾಸ್ ಅವರ ಜೀವನವು ಸ್ಫೂರ್ತಿಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *