Ravindra Jadeja: ಜಡೇಜಾಗೆ ಶಸ್ತ್ರಚಿಕಿತ್ಸೆ: ಟಿ20 ವಿಶ್ವಕಪ್​ಗೆ ಡೌಟ್..? | Ravindra Jadeja Undergoes Successful Knee Surgery

Ravindra Jadeja: ಏಷ್ಯಾಕಪ್​ನಲ್ಲಿನ ಹಾಂಗ್ ಕಾಂಗ್ ವಿರುದ್ದದ ಪಂದ್ಯದ ವೇಳೆ ರವೀಂದ್ರ ಜಡೇಜಾ ಗಾಯಗೊಂಡಿದ್ದರು. ಹೀಗಾಗಿ ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಗಾಯವು ಗಂಭೀರವಾಗಿದ್ದ ಕಾರಣ ವೈದ್ಯರ ಸೂಚನೆಯಂತೆ ಇದೀಗ ಸರ್ಜರಿಗೆ ಒಳಗಾಗಿದ್ದಾರೆ.

Sep 06, 2022 | 11:27 PM

TV9kannada Web Team

| Edited By: Zahir PY

Sep 06, 2022 | 11:27 PM
ಏಷ್ಯಾಕಪ್ ಆರಂಭಕ್ಕೂ ಮುನ್ನ ಶುರುವಾದ ಟೀಮ್ ಇಂಡಿಯಾ ಆಟಗಾರರ ಗಾಯದ ಸಮಸ್ಯೆ ಮುಂದುವರೆದಿದೆ. ಈ ಹಿಂದೆ ಜಸ್​ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಏಷ್ಯಾಕಪ್​ನಿಂದ ಹೊರಗುಳಿದಿದ್ದರು. ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ ರವೀಂದ್ರ ಜಡೇಜಾ. ಹಾಂಗ್ ಕಾಂಗ್ ವಿರುದ್ದದ ಪಂದ್ಯದ ವೇಳೆ ಗಾಯಗೊಂಡಿದ್ದ ಜಡೇಜಾ ಏಷ್ಯಾಕಪ್​ನಿಂದ ಹೊರಗುಳಿದಿದ್ದರು.

ಅಲ್ಲದೆ ಯುಎಇಯಿಂದ ಭಾರತಕ್ಕೆ ಮರಳಿದ ನಂತರ ಜಡೇಜಾ ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದೀಗ  ತಮ್ಮ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ  ರವೀಂದ್ರ ಜಡೇಜಾ ಬರೆದುಕೊಂಡಿದ್ದಾರೆ.

ಸದ್ಯ ವಿಶ್ರಾಂತಿಯಲ್ಲಿರುವ ಜಡೇಜಾ ಶೀಘ್ರದಲ್ಲೇ ಕಂಬ್ಯಾಕ್​ಗಾಗಿ ಸಿದ್ಧತೆಗಳನ್ನು ಆರಂಭಿಸುವುದಾಗಿ ಹೇಳಿದ್ದಾರೆ.  ನಾನು ಶೀಘ್ರದಲ್ಲೇ ನನ್ನ ಪುನರ್ಭ್ಯಾಸವನ್ನು ಪ್ರಾರಂಭಿಸುತ್ತೇನೆ ಮತ್ತು ಸಾಧ್ಯವಾದಷ್ಟು ಬೇಗ ಕ್ರಿಕೆಟ್‌ಗೆ ಮರಳುತ್ತೇನೆ.  ಪ್ರಾರ್ಥನೆಗಾಗಿ ಎಲ್ಲರಿಗೂ ಧನ್ಯವಾದಗಳು."  ಎಂದು ಜಡೇಜಾ ತಿಳಿಸಿದ್ದಾರೆ.

ಸದ್ಯ ವಿಶ್ರಾಂತಿಯಲ್ಲಿರುವ ಜಡೇಜಾ ಶೀಘ್ರದಲ್ಲೇ ಕಂಬ್ಯಾಕ್​ಗಾಗಿ ಸಿದ್ಧತೆಗಳನ್ನು ಆರಂಭಿಸುವುದಾಗಿ ಹೇಳಿದ್ದಾರೆ. ನಾನು ಶೀಘ್ರದಲ್ಲೇ ನನ್ನ ಪುನರ್ಭ್ಯಾಸವನ್ನು ಪ್ರಾರಂಭಿಸುತ್ತೇನೆ ಮತ್ತು ಸಾಧ್ಯವಾದಷ್ಟು ಬೇಗ ಕ್ರಿಕೆಟ್‌ಗೆ ಮರಳುತ್ತೇನೆ. ಪ್ರಾರ್ಥನೆಗಾಗಿ ಎಲ್ಲರಿಗೂ ಧನ್ಯವಾದಗಳು.” ಎಂದು ಜಡೇಜಾ ತಿಳಿಸಿದ್ದಾರೆ.

ಈ ಬಾರಿಯ ಏಷ್ಯಾಕಪ್​ನ ಮೊದಲೆರಡು ಪಂದ್ಯಗಳಲ್ಲಿ ಜಡೇಜಾ ಕಾಣಿಸಿಕೊಂಡಿದ್ದರು. ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ 35 ರನ್​ಗಳ ಕಾಣಿಕೆ ನೀಡುವ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಹಾಂಗ್ ಕಾಂಗ್ ವಿರುದ್ದ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಗಮನ ಸೆಳೆದ ಜಡ್ಡು, ಆ ಬಳಿಕ ಗಾಯಗೊಂಡಿದ್ದರು.

ಇದೀಗ ವಿಶ್ರಾಂತಿಯಲ್ಲಿರುವ ಜಡೇಜಾ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ. ಇದೇ ತಿಂಗಳು ಟಿ20 ವಿಶ್ವಕಪ್​ಗಾಗಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗುತ್ತದೆ. ಈ ವೇಳೆ ಜಡೇಜಾ ಅವರ ಗಾಯದ ಚೇತರಿಕೆ ಬಗ್ಗೆ ಅಪ್​ಡೇಟ್​ ಪಡೆಯಲಿದ್ದು, ಗಾಯ ವಾಸಿಯಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿದ್ದರೆ ತಂಡದಿಂದ ಕೈ ಬಿಡಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Most Read Stories

TV9 Kannada

Leave a Reply

Your email address will not be published.