RBI MPC meet: ಹಣದುಬ್ಬರ ತಡೆಯಲು ವಿಫಲ; ಕರಡು ವರದಿ ಸಿದ್ಧಪಡಿಸಿದ ಆರ್​ಬಿಐ – Rate setting panel Monetary Policy Committee meets to discuss draft report on missing inflation target said RBI business news in Kannada


Retail Inflation; ಚಿಲ್ಲರೆ ಹಣದುಬ್ಬರ ನಿಯಂತ್ರಿಸಲು ವಿಫಲವಾಗಿರುವುದಕ್ಕೆ ಸಂಬಂಧಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿಯ ವಿಶೇಷ ಸಭೆ ಗುರುವಾರ ನಡೆಯಿತು. ಸಭೆಯಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಿರುವ ವರದಿಯ ಕರಡು ಪ್ರತಿಯನ್ನು ಸಿದ್ಧಪಡಿಸಲಾಗಿದೆ.

RBI MPC meet: ಹಣದುಬ್ಬರ ತಡೆಯಲು ವಿಫಲ; ಕರಡು ವರದಿ ಸಿದ್ಧಪಡಿಸಿದ ಆರ್​ಬಿಐ

ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ (ಸಂಗ್ರಹ ಚಿತ್ರ)

ಮುಂಬೈ: ಚಿಲ್ಲರೆ ಹಣದುಬ್ಬರ (Retail Inflation) ನಿಯಂತ್ರಿಸಲು ವಿಫಲವಾಗಿರುವುದಕ್ಕೆ ಸಂಬಂಧಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಹಣಕಾಸು ನೀತಿ ಸಮಿತಿಯ (MPC) ವಿಶೇಷ ಸಭೆ ಗುರುವಾರ ನಡೆಯಿತು. ಸಭೆಯಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಿರುವ ವರದಿಯ ಕರಡು ಪ್ರತಿಯನ್ನು ಸಿದ್ಧಪಡಿಸಲಾಗಿದೆ. ಆರ್​ಬಿಐ ಕಾಯ್ದೆಯ ಸೆಕ್ಷನ್ ‘45 ಝಡ್​ಎನ್’, 1934ರ ಆರ್​ಬಿಐ ಎಂಪಿಸಿ ನಿಯಂತ್ರಣ ಪ್ರಕ್ರಿಯೆಯ ಹಾಗೂ 2016ರ ಹಣಕಾಸು ನೀತಿ ಪ್ರಕ್ರಿಯೆ ನಿಯಂತ್ರಣದ ಅಡಿಯಲ್ಲಿ, ಹಣದುಬ್ಬರ ನಿಯಂತ್ರಣಕ್ಕೆ ವಿಫಲವಾಗಿರುವ ಬಗ್ಗೆ ಚರ್ಚಿಸಲು ಮತ್ತು ಕರಡು ವರದಿ ಸಿದ್ಧಪಡಿಸಲು ವಿಶೇಷ ಸಭೆ ನಡೆಸಲಾಯಿತು ಎಂದು ಆರ್​ಬಿಐ ಪ್ರಕಟಣೆ ತಿಳಿಸಿದೆ.

ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸಭೆಯ ಅಧ್ಯಕ್ಷತೆ ವಹಿಸಿದರು. ಹಣಕಾಸು ಸಮಿತಿಯ ಎಲ್ಲ ಆರು ಮಂದಿ ಸದಸ್ಯರು ಸಭೆಯಲ್ಲಿ ಭಾಗಿಯಾದರು. ಸತತ ಮೂರು ತ್ರೈಮಾಸಿಕ ಅವಧಿಯಿಂದ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 6ಕ್ಕಿಂತ ಕೆಳಮಟ್ಟದಲ್ಲಿ ಕಾಯ್ದುಕೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ಸಂಬಂಧಿಸಿದ ಕರಡು ವರದಿಯನ್ನು ಸಭೆಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಆರ್​ಬಿಐ ತಿಳಿಸಿದೆ. ಆದರೆ, ಕರಡು ವರದಿಯಲ್ಲಿ ಏನೇನು ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬ ವಿಚಾರವನ್ನು ಆರ್​ಬಿಐ ಬಹಿರಂಗಪಡಿಸಿಲ್ಲ.

TV9 Kannada


Leave a Reply

Your email address will not be published.