RC15 ಶೋಟಿಂಗ್​ಗಾಗಿ ರಾಜಮಂಡ್ರಿಗೆ ಬಂದಿಳಿದ ರಾಮ್ ಚರಣ್​ಗೆ ಮುತ್ತಿಗೆ ಹಾಕಿದ ಅಭಿಮಾನಿಗಳು


ಟಾಲಿವುಡ್​ನ ಹೆಸರಾಂತ ನಟರಲ್ಲಿ ರಾಮ್​ ಚರಣ್​ ಸಹ ಒಬ್ಬರು.ತಮ್ಮದೇ ಆದ ಪ್ಯಾನ್​ ಫಾಲೋವರ್ಸ್ ಹೊಂದಿದ್ದಾರೆ. ಇನ್ನು, ಅವರ RRR ಮತ್ತು ಆಚಾರ್ಯ ಸಿನಿಮಾಗಳು ಬಿಡುಗಡೆಯಾಗಲು ರೆಡಿಯಾಗಿದೆ.

RC15 ಸಿನಿಮಾ ಶೋಟಿಂಗ್​ಗೆ ಸಲುವಾಗಿ ರಾಮ್​ ಚರಣ್​ ಆಂಧ್ರಪ್ರದೇಶದ ರಾಜಮಂಡ್ರಿಗೆ ಬಂದಿದ್ದರು. ಈ ವೇಳೆಯಲ್ಲಿ ರಾಜಾಜಿನಗರ ಏರ್​ಫೋರ್ಟ್​ಗೆ  ಬಂದಿಳಿದ ತಕ್ಷಣ ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿದ್ದರು ಹಾಗೂ ರಾಮ್​ ಚರಣ್ ಅವರಿಗೆ ಮುತ್ತಿಗೆ ಹಾಕಿದ ಪ್ಯಾನ್ಸ್ ಸೆಲ್ಫಿಗೆ ಮುಗಿಬಿದ್ದರು. ಚೆರ್ರಿ ಹೋಟೆಲ್‌ಗೆ ತೆರಳುವ ಮಾರ್ಗದಲ್ಲಿ ಅಭಿಮಾನಿಗಳು ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತು ಆತ್ಮೀಯ ಸ್ವಾಗತ ಕೋರಿದರು.

RC15 ಚಿತ್ರಕ್ಕೆ ಶಂಕರ್ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಈ ಚಿತ್ರಕ್ಕೆ ಕಾರ್ತಿಕ್ ಸುಬ್ಬರಾಜ್ ಕಥೆ ಬರೆದಿದ್ದಾರೆ. ರಾಮ್ ಚರಣ್ ಹೊರತಾಗಿ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ಅಂಜಲಿ, ಜಯರಾಮ್, ಸುನಿಲ್, ಶ್ರೀಕಾಂತ್ ಮತ್ತು ನವೀನ್ ಚಂದ್ರ ನಟಿಸಿದ್ದಾರೆ. ಛಾಯಾಗ್ರಾಹಕರಾಗಿ ತಿರ್ರು, ಎಡಿಟರ್​ ಆಗಿ ಶಮೀರ್ ಮುಹಮ್ಮದ್ ಮತ್ತು ಸಂಗೀತ ಸಂಯೋಜಕರಾಗಿ ಎಸ್ ಥಮನ್ ತಾಂತ್ರಿಕ ತಂಡದ ಭಾಗವಾಗಿದ್ದಾರೆ.

News First Live Kannada


Leave a Reply

Your email address will not be published.