IPLನಲ್ಲಿ ಟ್ರೋಫಿ ಗೆಲ್ಲುವ ಕನಸಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನೂತನ ಹೆಡ್ಕೋಚ್ ಹೆಸರನ್ನ ಘೋಷಿಸಿದೆ. ಸಂಜಯ್ ಬಂಗಾರ್ ಅವರನ್ನು ಈ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಿದೆ.
ಮುಂದಿನ 2 ವರ್ಷಗಳವರೆಗೆ ಸಂಜಯ್ ಬಂಗಾರ್ ಅವರನ್ನ ನೇಮಕ ಮಾಡಿಕೊಳ್ಳಲಾಗಿದೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸೈಮನ್ ಕ್ಯಾಟಿಚ್ ಅವರ ಸ್ಥಾನಕ್ಕೆ ಸಂಜಯ್ ಬಂಗಾರ್ರನ್ನ ನೇಮಕ ಮಾಡಿಕೊಳ್ಳಲಾಗಿದೆ.
ಈಗಾಗಲೇ ನಮ್ಮ ಕೆಲಸ ಆರಂಭವಾಗಿದೆ. ಹರಾಜು ಪ್ರಕ್ರಿಯೆಯತ್ತ ಗಮನ ಹರಿಸುತ್ತಿದ್ದೇವೆ. ನಾವು ಬಲಿಷ್ಠ ತಂಡವನ್ನ ನಿರ್ಮಿಸಲು ಬದ್ಧರಾಗಿದ್ದೇವೆ. ಐಪಿಎಲ್ ಟ್ರೋಫಿ ಗೆಲ್ಲುವ ಬಹುಕಾಲದ ಕನಸು ನನಸು ಮಾಡುತ್ತೇವೆ. RCB ಅಭಿಮಾನಿಗಳಿಗೆ ಕಪ್ ಗೆಲ್ಲುವ ಭರವಸೆ ನೀಡಲು ಬಯಸುತ್ತೇನೆ.
ಸಂಜಯ್ ಬಂಗಾರ್, ಆರ್ಸಿಬಿ ಮುಖ್ಯಕೋಚ್
ರವಿಶಾಸ್ತ್ರಿ ಅವರೊಂದಿಗೆ ಟೀಂ ಇಂಡಿಯಾ ಕೋಚ್ ಆಗಿ ಕೆಲಸ ಮಾಡಿದ್ದ ಸಂಜಯ್ ಬಂಗಾರ್, 2021ರ ಐಪಿಎಲ್ ಸಮಯದಲ್ಲಿ ಆರ್ಸಿಬಿ ತಂಡದ ಬ್ಯಾಟಿಂಗ್ ವಿಭಾಗದ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಮೈಕ್ ಹೆಸ್ಸನ್ ನಿರ್ದೇಶಕರಾಗಿ ಮುಂದುವರಿಯುವುದು ಪಕ್ಕಾ ಆಗಿದೆ. ಈಗಾಗಲೇ ಕ್ಯಾಪ್ಟನ್ಸಿ ಜವಾಬ್ದಾರಿಯನ್ನ ಕಿಂಗ್ ಕೊಹ್ಲಿ ತೊರೆದಿದ್ದಾರೆ. ನೂತನ ನಾಯಕನ ಆಯ್ಕೆಗಾಗಿ ಆರ್ಸಿಬಿ ಹರಾಜು ಪ್ರಕ್ರಿಯೆ ಮೇಲೆ ಕಣ್ಣಿಟ್ಟಿದೆ.