RCBಗೆ ‘ಬಾಹುಬಲಿ’ ಶಕ್ತಿ! ‘ಕೆ.ಎಸ್.ಭರತ್​ THE WARRIOR’ ಎಂದು ಬಣ್ಣಿಸಿದ ರಾಯಲ್ ಚಾಲೆಂಜರ್ಸ್..!

ಶ್ರೀಕರ್​ ಭರತ್​​​.. ಸದ್ಯದ ಐಪಿಎಲ್​​ ಆವೃತ್ತಿಯಲ್ಲಿ ಅತೀ ಹೆಚ್ಚು ಕೇಳಿ ಬರುತ್ತಿರುವ ಹೆಸರು. ಇಷ್ಟು ದಿನ ಆರ್​ಸಿಬಿ ಅಭಿಮಾನಿಗಳಿಗೆ ಮಾತ್ರವೇ ತಿಳಿದಿದ್ದ ತೆಲುಗು ಹುಡುಗ, ಒಂದು ಸಿಕ್ಸರ್​​ನಲ್ಲಿ ಕ್ರಿಕೆಟ್​​ ಅಭಿಮಾನಿಗಳ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಪ್ರತಿ ಕ್ರಿಕೆಟ್​ ಅಭಿಮಾನಿ ಕೂಡ ಯಾರು? ಈ ಭರತ್​​ ಅಂತ ಗೂಗಲ್​​ ಸರ್ಚ್​​ ಮಾಡ್ತಿದ್ದಾರೆ. ಈ ನಡುವೆ ನಿನ್ನೆಯ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಭರತ್​ ತೋರಿದ ಪ್ರದರ್ಶನವನ್ನು ಆರ್​ಸಿಬಿ ತಂಡ ಮೆಚ್ಚಿಕೊಂಡು, ಬಾಹುಬಲಿಗೆ ಹೊಲಿಕೆ ಮಾಡಿ ಟ್ವೀಟ್​​ ಮಾಡಿದೆ.

ಭರತ್​​ ಆಟಕ್ಕೆ ಖುಷಿಯಾಗಿರೋ ಆರ್​ಸಿಬಿ ‘ ಭರತ್​​ ದಿ ವಾರಿಯರ್​​​’ ಎಂಬ ಟೈಟಲ್​​ ಫಿಕ್ಸ್​ ಮಾಡಿ, ಬಾಹುಬಲಿ ಸಿನಿಮಾದ ಅಮರೇಂದ್ರ ಬಾಹುಬಲಿ ಪಾತ್ರಕ್ಕೆ ಹೊಲಿಕೆ ಮಾಡಿದೆ. ಅಲ್ಲದೇ ಫೋಟೋಗೆ ಕಠಿಣ ಪರಿಶ್ರಮ, ಅವಿರತ ಪ್ರಯತ್ನ ಮತ್ತು ಯೋಧನ ಸ್ಫೂರ್ತಿ ಎಂಬ ಹಣೆಬರಹ ನೀಡಿದೆ.

ಐಪಿಎಲ್​ ಸೆಕೆಂಡ್​​ ಆಫ್​​ನಲ್ಲಿ ಆರ್​​ಸಿಬಿ ಪರ ಪದಾರ್ಪಣೆ ಮಾಡಿದ ಭರತ್, ಇದುವರೆಗೂ 7 ಪಂದ್ಯಗಳನ್ನು ಆಡಿದ್ದು, 5 ಇನ್ನಿಂಗ್ಸ್​​​ಗಳಲ್ಲಿ 182 ರನ್​​ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧ ಶತಕವೂ ಸೇರಿದೆ. ಭರತ್​ ಸದ್ಯ ತಮ್ಮ ಪ್ರದರ್ಶನವನ್ನು ಮುಂದುವರಿಸಿದರೆ ಟೀಂ ಇಂಡಿಯಾದಲ್ಲೂ ಅವಕಾಶ ಸಿಗುವ ಸಾಧ್ಯತೆ ಇದೆ. ಈಗಾಗಲೇ ಟೀಂ ಇಂಡಿಯಾ ಪರ ಹಲವು ಟೂರ್ನಿಗಳಲ್ಲಿ ಭರತ್ ರಿಸರ್ವ್​​ ಪ್ಲೇಯರ್​ ಆಗಿ ತೆರಳಿದ್ದರು ಆಡೋ ಅವಕಾಶ ಲಭಿಸಿಲ್ಲ. ಅದರಲ್ಲೂ ಟೀಂ ಇಂಡಿಯಾ ಪರ ಟೆಸ್ಟ್​​ ಕ್ರಿಕೆಟ್​ನಲ್ಲಿ ವಿಕೆಟ್​ ಕೀಪರ್​​ ಸ್ಥಾನವನ್ನು ಭರತ್ ತುಂಬಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

The post RCBಗೆ ‘ಬಾಹುಬಲಿ’ ಶಕ್ತಿ! ‘ಕೆ.ಎಸ್.ಭರತ್​ THE WARRIOR’ ಎಂದು ಬಣ್ಣಿಸಿದ ರಾಯಲ್ ಚಾಲೆಂಜರ್ಸ್..! appeared first on News First Kannada.

News First Live Kannada

Leave a comment

Your email address will not be published. Required fields are marked *