RCB ಕ್ಯಾಪ್ಟನ್​​ ಸ್ಥಾನಕ್ಕೆ ಈ ಇಬ್ಬರ ಹೆಸರು ಶಾರ್ಟ್​ ಲಿಸ್ಟ್​; ಸದ್ಯದಲ್ಲೇ ಅನೌನ್ಸ್​; ಯಾರವರು?


ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಕೊಹ್ಲಿ ನಂತರದ ಆರ್​ಸಿಬಿ ನಾಯಕ ಯಾರು ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಮುಂದಿನ ಆರ್​ಸಿಬಿ ನಾಯಕನ ಸ್ಥಾನಕ್ಕೆ ಸಹಜವಾಗಿಯೇ ಎಬಿಡಿ, ಗ್ಲೆನ್ ಮ್ಯಾಕ್ಸ್​​ವೆಲ್ ಸೇರಿದಂತೆ ಹೀಗೆ ಹಲವರ ಹೆಸರು ಕೇಳಿ ಬಂದಿವೆ. ಈ ಪೈಕಿ ಕನ್ನಡಿ ಕೆಎಲ್ ರಾಹುಲ್ ಹೆಸರು ಕೂಡ ಒಂದು. ಹೀಗಿರುವಾಗಲೇ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಲು ಆರ್​ಸಿಬಿ ಫ್ರಾಂಚೈಸಿ ಮುಂದಾಗಿದೆ.

ಹೌದು, ಮೂಲಗಳ ಪ್ರಕಾರ ಆರ್​ಸಿಬಿ ಫ್ರಾಂಚೈಸಿ ಸದ್ಯದಲ್ಲೇ ಹೊಸ ಕ್ಯಾಪ್ಟನ್​​ ಹೆಸರು ಅನೌನ್ಸ್​ ಮಾಡಲಿದೆಯಂತೆ. ಇದಕ್ಕೆ ಇಬ್ಬರು ಯಂಗ್​​ ಅಂಡ್​​ ಎನರ್ಜಿಸ್ಟಿಕ್​​ ಆಟಗಾರರ ಹೆಸರು ಶಾರ್ಟ್​ ಲಿಸ್ಟ್​ ಮಾಡಿಕೊಂಡಿದೆ.

ಕನ್ನಡಿಗ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಹೆಸರು ಶಾರ್ಟ್​ ಲಿಸ್ಟ್​ ಆಗಿದೆಯಂತೆ. ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲಿದ್ದಾರೆ. ಕೆ.ಎಲ್​​ ರಾಹುಲ್ ಕೂಡ ಪಂಜಾಬ್ ತಂಡ ಬಿಡಲಿದ್ದಾರೆ. ಈ ವೇಳೆ ಮೆಗಾ ಆಕ್ಷನ್​​ನಲ್ಲಿ ಇಬ್ಬರಲ್ಲಿ ಒಬ್ಬರಿಗೆ ಮಣೆ ಹಾಕುವ ಸಾಧ್ಯತೆ ಇದೆ.

ಇದನ್ನೂ ಓದಿ: ವಿಶ್ವಕಪ್ ಸೋಲಿಗೆ ಕೊಹ್ಲಿ ಮಾತ್ರ ಕಾರಣರಲ್ಲ, ಯಾರೆಲ್ಲಾ ಹೊಣೆ ಹೊರಬೇಕು ಗೊತ್ತಾ..?

News First Live Kannada


Leave a Reply

Your email address will not be published. Required fields are marked *