RCB ಕ್ಯಾಪ್ಟನ್​ ಆಯ್ಕೆ ಬಹುತೇಕ ಫಿಕ್ಸ್.. ಪಂಜಾಬ್​, ಕೆಕೆಆರ್​ ನಾಯಕ ಯಾರು ಗೊತ್ತಾ..?


ಇಂಡಿಯನ್​ ಪ್ರೀಮಿಯರ್​​ ಲೀಗ್​ ಮೆಗಾ ಹರಾಜಿಗೂ ಮುನ್ನ ಕ್ಯಾಪ್ಟನ್​ ಮೆಟಿರಿಯಲ್​ಗಳ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ನಾಯಕನನ್ನ ಕಳೆದುಕೊಂಡಿದ್ದ ಪ್ರಮುಖ ತಂಡಗಳು ಯಾರನ್ನ ಸಾರಥಿಯಾಗಿ ಆಯ್ಕೆ ಮಾಡಿಕೊಳ್ತಾರೆ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡಿತ್ತು. ಇದೀಗ ಹರಾಜಿನ ಅಂತ್ಯದೊಂದಿಗೆ ಈ ಡಿಬೇಟ್​ಗೂ ತೆರೆ ಬಿದ್ದಿದೆ.

ಐಪಿಎಲ್​ ಮೆಗಾ ಹರಾಜಿಗೆ ತೆರೆ ಬಿದ್ದಿದೆ. ಅಳೆದು ತೂಗಿ ಲೆಕ್ಕಾಚಾರ ಹಾಕಿ ತಂಡಕ್ಕೆ ಬೇಕಾದ ಆಟಗಾರರನ್ನ ಸೆಳೆದಿವೆ. ಬ್ಯಾಟ್ಸ್​​ಮನ್​, ಆಲ್​​ರೌಂಡರ್​​​, ಬೌಲರ್​ ಇದೆಲ್ಲದರ ಜೊತೆಗೆ ಕೆಲ ತಂಡಗಳು ನಾಯಕನ ಹುಡಕಾಟವನ್ನ ನಡೆಸಿದ್ವು. ಪಂಜಾಬ್​, ಆರ್​​ಸಿಬಿ, ಕೊಲ್ಕತ್ತಾ ಈ ಲಿಸ್ಟ್​ನಲ್ಲಿದ್ದ ಮೊದಲ ತಂಡಗಳು. ಅಂತಿಮವಾಗಿ ಈ ತಂಡಗಳೂ ಈಗ ಬೆಸ್ಟ್​​ ಕ್ಯಾಪ್ಟ​ನ್​ ಮೆಟಿರಿಯಲ್​ ಅನ್ನ ಪಿಕ್​ ಮಾಡಿವೆ.

ಫಾಫ್​ ಡು ಪ್ಲೆಸಿಸ್​​ RCB ನೂತನ ನಾಯಕ..?
ನಾಯಕತ್ವ ತ್ಯಜಿಸಿದ ವಿರಾಟ್​ ಕೊಹ್ಲಿ ಸ್ಥಾನವನ್ನ ಯಾರು ತುಂಬ್ತಾರೆ ಅನ್ನೋದು ಹರಾಜಿಗೂ ಮುನ್ನ ಆರ್​​ಸಿಬಿ ಕ್ಯಾಂಪ್​ನಲ್ಲಿದ್ದ ದೊಡ್ಡ ಪ್ರಶ್ನೆಯಾಗಿತ್ತು. ಕಳೆದ ಕೆಲ ದಿನಗಳಿಂದ ಹಲವು ಆಟಗಾರರನ್ನ ಆರ್​ಸಿಬಿ ಟಾರ್ಗೆಟ್​ ಮಾಡಿದೆ ಎಂದೂ ಕೂಡ ಹೇಳಲಾಗ್ತಿತ್ತು. ಅಂತಿಮವಾಗಿ ಆರ್​ಸಿಬಿ ಸೌತ್​ ಆಫ್ರಿಕಾ ಮಾಜಿ ನಾಯಕ ಫಾಫ್​ ಡು ಪ್ಲೆಸಿಸ್​​ರನ್ನ ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂಡವನ್ನ ಮುನ್ನಡೆಸಿದ ಅನುಭವವಿರುವ ಡು ಪ್ಲೆಸಿಸ್​ಗೆ ನಾಯಕನ ಹೊಣೆಗಾರಿಕೆಯನ್ನೂ ನೀಡಲು ಸಜ್ಜಾಗಿದೆ.

ಪಂಜಾಬ್​ ಪಡೆಗೆ ಶಿಖರ್​ ಧವನ್​ ಕ್ಯಾಪ್ಟನ್.​.?
ಕೆಎಲ್​ ರಾಹುಲ್​ ತಂಡ ತೊರೆದಿದ್ದರಿಂದ ಪಂಜಾಬ್​ ಕಿಂಗ್ಸ್​ ಪಾಳೆಯ ಕೂಡ ಹರಾಜಿನಲ್ಲಿ ಕ್ಯಾಪ್ಟನ್​ ಮೆಟಿರಿಯಲ್​ ಟಾರ್ಗೆಟ್​ ಮಾಡಿತ್ತು. ತಂಡದಲ್ಲಿ ಮಯಾಂಕ್​ ಇದ್ರೂ ಕೂಡ ಆತ ನಾಯಕನ ಸ್ಥಾನದ ಮೊದಲ ಆಯ್ಕೆಯಲ್ಲ ಎಂದು ತಂಡ ಮೊದಲೇ ಸ್ಪಷ್ಟಪಡಿಸಿದೆ. ಇದೀಗ ಶಿಖರ್​ ಧವನ್​ರನ್ನ ಹರಾಜಿನಲ್ಲಿ ತಂಡ ಖರೀದಿ ಮಾಡಿದ್ದು, ಬಹುತೇಕ ಅವರೇ ತಂಡವನ್ನ ಲೀಡ್​ ಮಾಡಲಿದ್ದಾರೆ ಎನ್ನಲಾಗ್ತಿದೆ.

ಕೊಲ್ಕತ್ತಾ ನೈಟ್​​ ರೈಡರ್ಸ್​​ಗೆ ಶ್ರೇಯಸ್​​​​ ಸಾರಥಿ..?
ಐಪಿಎಲ್​ ಹರಾಜಿಗೂ ಮೊದಲೇ ಶ್ರೇಯಸ್​​ ಅಯ್ಯರ್​​ ಹಾಟ್​ ಕೇಕ್​ಗಾಗಿ ಗುರುತಿಸಿಕೊಂಡಿದ್ದೇ ನಾಯಕತ್ವದ ಗುಣಗಳ ಕಾರಣಕ್ಕೆ. ಯಶಸ್ವಿಯಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನ ಮುನ್ನಡೆಸಿದ ಹೆಗ್ಗಳಿಕೆ ಶ್ರೇಯಸ್​​ ಬೆನ್ನಿಗಿತ್ತು. ಹೀಗಾಗಿ ಹಲವು ಫ್ರಾಂಚೈಸಿಗಳು ಅಯ್ಯರ್​ ಮೇಲೆ ಕಣ್ಣಿಟ್ಟಿದ್ವು. ಹೀಗಾಗಿಯೇ ಖರೀದಿಯಲ್ಲಿ ಬಿರುಸಿನ ಪೈಪೋಟಿ ಕೂಡ ನಡೀತು. ಅಂತಿಮವಾಗಿ ಕೆಕೆಆರ್​ ತಂಡ ಶ್ರೇಯಸ್​​​ರನ್ನ ತೆಕ್ಕೆಗೆ ಹಾಕಿಕೊಂಡಿದ್ದು, ನಾಯಕತ್ವದ ಜವಾಬ್ದಾರಿಯನ್ನ ನೀಡಲೂ ಮುಂದಾಗಿದೆಯಂತೆ.

ಒಟ್ಟಿನಲ್ಲಿ ನಾಯಕನ ಹುಡುಕಾಟ ನಡೆಸಿದ ಮೂರು ತಂಡಗಳಿಗೂ ಸಿಕ್ಕಿರುವ ಆಟಗಾರರು ಸಾಲಿಡ್​ ಕ್ಯಾಪ್ಟನ್​ ಮೆಟಿರಿಯಲ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ, ಫ್ರಾಂಚೈಸಿಗಳು ಇವರಿಗೇ ಮಣೆ ಹಾಕ್ತವಾ ಅಥವಾ ಬೇರೆ ಆಯ್ಕೆಯನ್ನ ನೋಡ್ತವಾ ಅನ್ನೋದನ್ನ ಕಾದು ನೋಡಬೇಕಿದೆ.

News First Live Kannada


Leave a Reply

Your email address will not be published. Required fields are marked *