RCB: ಕ್ವಾಲಿಫೈಯರ್​ನಲ್ಲಿ ಹೊರಬಿದ್ದ ಆರ್​ಸಿಬಿಗೆ ಸಿಕ್ಕ ಹಣವೆಷ್ಟು ಗೊತ್ತೇ?: ಕೇಳಿದ್ರೆ ಶಾಕ್ ಆಗ್ತೀರಿ | RCB Royal Challengers Bangalore will be given a prize money of Rs 7 crore for the spectacular IPL season


IPL 2022 Prize Money: ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ದಾಳಿಗೆ ಕಂಗೆಟ್ಟ ಆರ್​ಸಿಬಿ ಫೈನಲ್​ಗೇರಲು ವಿಫಲವಾಯಿತು. ಸದ್ಯ ಕ್ವಾಲಿಫೈಯರ್​ನಲ್ಲಿ ನಿರ್ಗಮನವಾಗಿರುವ ಆರ್​ಸಿಬಿ ತಂಡಕ್ಕೆ ಉತ್ತಮ ಮೊತ್ತವೇ ಸಿಕ್ಕಿದೆ. ಅದು ಎಷ್ಟು? ಎಂಬ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡ ಐಪಿಎಲ್ 2022 ರಲ್ಲೂ ಕಪ್ ಗೆಲ್ಲದೆ ನಿರಾಸೆ ಮೂಡಿಸಿದೆ. ಎಲಿಮಿನೇಟರ್​ನಲ್ಲಿ ಲಖನೌ ಸೂಪರ್ ಜೇಂಟ್ಸ್ ವಿರುದ್ಧ ಗೆದ್ದು ಕ್ವಾಲಿಫೈಯರ್ – 2ಗೆ ಲಗ್ಗೆಯಿಟ್ಟಿತಾದರೂ ಇಲ್ಲಿ ಜಯ ಸಾಧಿಸಲು ಸಾಧ್ಯವಾಗಲಿಲ್ಲ. ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ದಾಳಿಗೆ ಕಂಗೆಟ್ಟ ಆರ್​ಸಿಬಿ (RR vs RCB) ಫೈನಲ್​ಗೇರಲು ವಿಫಲವಾಯಿತು. ಬೆಂಗಳೂರು ಈ ಹಂತದಲ್ಲಿ ಸೋತರೂ ಅಭಿಮಾನಿಗಳಿಗೆ ಸಂತಸ ತಂದಿದೆ. ಕಳೆದ ಕೆಲವು ಸೀಸನ್​ಗಳಿಂದ ಲೀಗ್ ಹಂತದಲ್ಲೇ ಟೂರ್ನಿನಿಂದ ಹೊರಬೀಳುತ್ತಿದ್ದ ಆರ್​​ಸಿಬಿ ಈ ಬಾರಿ ಕನಿಷ್ಠ ಪ್ಲೇ ಆಫ್ ಪ್ರವೇಶಿಸಿದ್ದು ಖುಷಿ ನೀಡಿದೆ. ನಾಯಕ ಡುಪ್ಲೆಸಿಸ್ (Faf Du Plessis) ಕೂಡ ಅಭಿಮಾನಿಗಳ ಅಭಿಮಾನಕ್ಕೆ ಮನಸೋತು ತುಂಬು ಹೃದಯದಿಂದ ಧನ್ಯವಾದ ಹೇಳಿದ್ದಾರೆ. ಸದ್ಯ ಕ್ವಾಲಿಫೈಯರ್​ನಲ್ಲಿ ನಿರ್ಗಮನವಾಗಿರುವ ಆರ್​ಸಿಬಿ ತಂಡಕ್ಕೆ ಉತ್ತಮ ಮೊತ್ತವೇ ಸಿಕ್ಕಿದೆ. ಅದು ಎಷ್ಟು? ಎಂಬ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಾಣುವ ಮೂಲಕ ಆರ್​ಸಿಬಿ ಪಾಯಿಂಟ್ ಟೇಬಲ್​ನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಈ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಡೆಯಿಂದ ಮೂರನೇ ರನ್ನರ್ ಅಪ್ ಆರ್​ಸಿಬಿಗೆ 7 ಕೋಟಿ ರೂಪಾಯಿ ನೀಡಲಾಗುತ್ತದೆ. ಅಂತೆಯೆ ಆರ್​ಸಿಬಿ ವಿರುದ್ಧ ಎಲಿಮಿನೇಟರ್​ ಪಂದ್ಯದಲ್ಲಿ ಸೋತ ಲಖನೌ ಸೂಪರ್ ಜೇಂಟ್ಸ್ ತಂಡಕ್ಕೆ 6.50 ಕೋಟಿ ರೂಪಾಯಿ ನೀಡಲಾಗುತ್ತಿದೆ.

ಬಿಸಿಸಿಐ 2018 ವರ್ಷದಿಂದ, ತಂಡಗಳಿಗೆ ನೀಡಲಾದ ಮೊತ್ತವು ನಿರಂತರವಾಗಿ ಹೆಚ್ಚುತ್ತಲೇ ಇತ್ತು. ಆದರೀಗ ಕೊರೊನಾ ಆಗಮನದ ನಂತರ ಬಹುಮಾನದ ಹಣವನ್ನು ಕಡಿತಗೊಳಿಸಲಾಗಿದೆ. ಐಪಿಎಲ್ 2020 ರ ವಿಜೇತ ಮತ್ತು ರನ್ನರ್ ಅಪ್ ತಂಡದ ಬಹುಮಾನದ ಮೊತ್ತವನ್ನು 50 ಪ್ರತಿಶತದಷ್ಟು ಕಡಿತಗೊಳಿಸಿತ್ತು. ಅಂದು ವಿಜೇತ ಮುಂಬೈ ಇಂಡಿಯನ್ಸ್‌ಗೆ 10 ಕೋಟಿ ರೂ., ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್‌ಗೆ 6.25 ಕೋಡ್ ನೀಡಲಾಗಿತ್ತು. ಪ್ಲೇಆಫ್‌ನಲ್ಲಿ ಆಡುವ ತಂಡಗಳಿಗೆ 4.375 ಕೋಟಿ ಹಂಚಿತ್ತು.

IPL 2022 ವೀಕ್ಷಣೆಯಲ್ಲಿ ಹೊಸ ದಾಖಲೆ: ಆರ್​ಸಿಬಿಯ ಆ ಪಂದ್ಯ ನೋಡಿದ್ದು ಎಷ್ಟು ಮಂದಿ ಗೊತ್ತೇ?

ಕಳೆದ ಋತುವಿನಲ್ಲಿ ಕೊರೊನಾದ ಪರಿಣಾಮ ಬೀರಿದ್ದರೂ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​ಗೆ 20 ಕೋಟಿ ರೂ., ಮತ್ತು ಸೋತ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 12.50 ಕೋಟಿ ರೂ. ಮೊದಲ ಎಲಿಮಿನೇಟರ್‌ನಲ್ಲಿ ಸೋತ ಆರ್‌ಸಿಬಿಗೆ ಮತ್ತು ಎರಡನೇ ಕ್ವಾಲಿಫೈಯರ್‌ನಲ್ಲಿ ಸೋತ ಡಿಸಿಗೆ 4.375 ಕೋಟಿ ನೀಡಲಾಗಿತ್ತು. ಈ ಬಾರಿ ಕೂಡ ಇದೇರೀತಿ ಮುಂದುವರೆಯಲಿದೆ. ಗೆದ್ದ ತಂಡಕ್ಕೆ 20 ಕೋಟಿ ರೂ. ಬಹುಮಾನ ಇದ್ದರೆ ರನ್ನರ್ ಅಪ್ ಆದ ತಂಡಕ್ಕೆ 13 ಕೋಟಿ ರೂ. ಘೋಷಿಸಲಾಗಿದೆ ಎಂದು ಹೇಳಲಾಗಿದೆ.

ಉಳಿದಂತೆ ಇತರ ಪ್ರಶಸ್ತಿಗಳ ಬಹುಮಾನದ ಹಣ ನೋಡುವುದಾದರೆ, ಆರೆಂಜ್ ಕ್ಯಾಪ್ ಹೋಲ್ಡರ್ (ಲೀಗ್‌ನಲ್ಲಿ ಅತ್ಯಧಿಕ ರನ್) – 10 ಲಕ್ಷ ರೂ., ಪರ್ಪಲ್ ಕ್ಯಾಪ್ ಹೋಲ್ಡರ್ (ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್) – 10 ಲಕ್ಷ ರೂ., ಅತ್ಯಂತ ಮೌಲ್ಯಯುತ ಆಟಗಾರ – 10 ಲಕ್ಷ ರೂ., ಋತುವಿನ ಉದಯೋನ್ಮುಖ ಆಟಗಾರ – 10 ಲಕ್ಷ, ಹೆಚ್ಚಿನ ಸಿಕ್ಸರ್‌ಗಳು (ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು) – 10 ಲಕ್ಷ, ಗೇಮ್ ಚೇಂಜರ್ – 10 ಲಕ್ಷ ರೂ. ನೀಡಲಾಗುತ್ತದೆ.

ಗುಜರಾತ್-ರಾಜಸ್ಥಾನ್ ಫೈನಲ್:

ರಾಜಸ್ಥಾನ್ ರಾಯಲ್ಸ್ ತಂಡವು ಶುಕ್ರವಾರ ನಡೆದ ಎರಡನೇ ಕ್ವಾಲಿಫೈಯರ್ನಲ್ಲಿ 7 ವಿಕೆಟ್​ಗಳಿಂದ ಬೆಂಗಳೂರು ತಂಡವನ್ನು ಸೋಲಿಸಿವ ಮೂಲಕ ಭಾನುವಾರ ನಡೆಯಲಿರುವ ಫೈನಲ್​ನಲ್ಲಿ ಗುಜರಾತ್ ಟೈಟನ್ಸ್ ಎದುರು ಕಣಕ್ಕಿಳಿಯಲಿದೆ.  2008ರಲ್ಲಿ ಆರ್​ಆರ್​​ ತಂಡವು ಶೇನ್ ವಾರ್ನ್ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದಿತ್ತು. ತಂಡದ ಮಾಜಿ ನಾಯಕ ಮತ್ತು ಕೋಚ್ ಆಗಿದ್ದ ವಾರ್ನ್ ಈಚೆಗೆ ನಿಧನರಾಗಿದ್ದಾರೆ. ಈ ಬಾರಿ ಟ್ರೋಫಿ ಜಯಿಸಿ ವಾರ್ನ್ ಅವರಿಗೆ ಸಮರ್ಪಿಸುವ ಛಲದಲ್ಲಿ ಸಂಜು ಸ್ಯಾಮ್ಸನ್ ಬಳಗವಿದೆ. ಇತ್ತ ಚೊಚ್ಚಲ ಸೀಸನ್​ನಲ್ಲೇ ಟ್ರೋಫಿ ಪಡೆಯಲು ಜಿಟಿ ಕೂಡ ಶ್ರಮವಹಿಸುತ್ತಿದೆ.

TV9 Kannada


Leave a Reply

Your email address will not be published. Required fields are marked *