ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2022 ಇನ್ನೇನು ಶುರುವಾಗಲಿದೆ. ಇತ್ತೀಚೆಗೆ ನಡೆದ ಐಪಿಎಲ್ ಮೆಗಾ ಆಕ್ಷನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೋಬ್ಬರಿ 11 ಕೋಟಿ ನೀಡಿ ವೇಗಿ ಹರ್ಷಲ್ ಪಟೇಲರನ್ನು ಖರೀದಿ ಮಾಡಿದೆ. ಈ ಬೆನ್ನಲ್ಲೇ ಮಾತಾಡಿದ ಹರ್ಷಲ್ ಪಟೇಲ್, ಕಳೆದ ಐಪಿಎಲ್ ವೇಳೆ ಡೆತ್ ಓವರ್ಗಳಲ್ಲಿ ಬೌಲಿಂಗ್ ಮಾಡಿದ್ದು, ನನ್ನ ವೃತ್ತಿ ಜೀವನವನ್ನೇ ಬದಲಿತು ಎಂದಿದ್ದಾರೆ.
ನಾನು ನನ್ನ ಐಪಿಎಲ್ ಕರಿಯರ್ನ ಆರಂಭದ 6 ವರ್ಷಗಳು ಆರ್ಸಿಬಿಯಲ್ಲೇ ಕಳೆದಿದ್ದೆ. ಮತ್ತೆ ದೆಹಲಿ ತಂಡದ ಪರ ಆಡಿದೆ. ಅವರು ನನ್ನನ್ನು ಕಳೆದ ವರ್ಷ ಆರ್ಸಿಬಿಗೆ ಟ್ರೇಡ್ ಮಾಡಿದ್ರು. ಆದರೆ, ಇದು ನನಗೆ ಆಶ್ಚರ್ಯ ತಂದಿತ್ತು ಎಂದರು.
ಆರ್ಸಿಬಿ ನನ್ನನ್ನು ಬಿಡುತ್ತೆ ಎಂದು ಭಾವಿಸಿರಲಿಲ್ಲ, ಆದರೆ ಅವರು ನನ್ನನ್ನು ಬಿಡಲು ನಿರ್ಧರಿಸಿದ್ರು. ನಾನು ಕೇಳಿದಂತೆ ಆರ್ಸಿಬಿ ಕೂಡ ನನ್ನನ್ನು ತಂಡದಲ್ಲಿ ಸೇರಿಸಿಕೊಳ್ಳಲು ಉತ್ಸುಕವಾಗಿತ್ತಂತೆ ಎಂದು ಅವರು ಹೇಳಿಕೊಂಡಿದ್ದಾರೆ.