ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ತಂಡಗಳ ನಡುವೆ ನಡೆದ ಪಂದ್ಯ ಆರ್​​ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು, ಚೆನ್ನೈ ತಂಡ 69 ರನ್​​ ಅಂತರದ ಬೃಹತ್​​​ ಗೆಲುವು ಪಡೆದುಕೊಂಡಿದೆ. 192 ರನ್​​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ತಂಡ ನಿಗದಿತ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 122 ರನ್​ಗಳಷ್ಟೇ ಗಳಿಸಿತು.

ಚೆನ್ನೈ ತಂಡದ ಪರ ರವೀಂದ್ರ ಜಡೇಜಾ ಅವರು ತೋರಿದ ಆಲ್​​ರೌಂಡ್​ ಪ್ರದರ್ಶನದ ಎದುರು ಆರ್​​ಸಿಬಿ ಆಟಗಾರರು ಮಂಕಾದರು. 192 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ್ದ ಆರ್​ಸಿಬಿ ಬ್ಯಾಟ್ಸ್​​​ಮನ್​ಗಳು ಇನ್ನಿಂಗ್ಸ್​ನ ಯಾವುದೇ ಹಂತದಲ್ಲಿಯೂ ಪ್ರತಿರೋಧವನ್ನು ತೋರಲೇ ಇಲ್ಲ. ಆರಂಭಿಕ ದೇವದತ್​ ಪಡಿಕ್ಕಲ್ 34 ರನ್​, ಮ್ಯಾಕ್ಸ್​ವೆಲ್​ 22, ಜೆಮೀಸನ್ 16 ರನ್​ ಗಳಿಸಿದ್ದು ಹೊರತುಪಡಿಸಿದರೆ ಯಾವುದೇ ಆಟಗಾರ ಎರಡಂಕಿ ಮೊತ್ತವನ್ನು ಗಳಿಸಲಿಲ್ಲ. ಇತ್ತ ಬ್ಯಾಟಿಂಗ್​​ ಹಾಗೂ ಬೌಲಿಂಗ್​​ ಎರಡಲ್ಲೂ ಮಿಂಚಿದ ಜಡೇಜಾ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.

ಜಡೇಜಾ ದಾಖಲೆ: ಬ್ಯಾಟಿಂಗ್​ನಲ್ಲಿ ಸ್ಫೋಟಕ 62 ರನ್ ಸಿಡಿಸಿದ ಜಡೇಜಾ, ಬೌಲಿಂಗ್​ನಲ್ಲಿ ಆರ್​ಸಿಬಿ ತಂಡದ ಪ್ರಮುಖ 3 ವಿಕೆಟ್​​ಗಳನ್ನು ಪಡೆದು ಮಿಂಚಿದರು. ಅಲ್ಲದೇ ಐಪಿಎಲ್​​ನ ಟೂರ್ನಿಯ ಓವರ್​​ ಒಂದರಲ್ಲಿ ಅತೀ ಹೆಚ್ಚು ರನ್​ ಸಿಡಿಸಿದ ಆಟಗಾರರ ಎಂಬ ಹೆಗ್ಗಳಿಕೆ ಪಡೆದಿದ್ದ ಕ್ರಿಸ್​​ ಗೇಲ್​​ ದಾಖಲೆಯನ್ನು ಸಮಗೊಳಿಸಿದರು. ಈ ಹಿಂದೆ ಗೇಲ್​​ ಕೂಡ ಓವರ್​​ವೊಂದರಲ್ಲಿ 36 ರನ್​​ ಸಿಡಿಸಿದ್ದರು. ಇಂದಿನ ಪಂದ್ಯದಲ್ಲಿ ಐದು ಸಿಕ್ಸರ್​ಗಳೊಂದಿಗೆ ಜಡೇಜಾ 36 ರನ್​ ಸಿಡಿಸಿದ್ದರು. ಇತ್ತ ಇನ್ನಿಂಗ್ಸ್​ನ ಅಂತಿಮ ಓವರ್​ನಲ್ಲಿ 37 ರನ್​ ಬಿಟ್ಟು ಕೊಟ್ಟ ಹರ್ಷಲ್​, ಪ್ರಸಾಂತ್ ಪರಮೇಶ್ವರನ್ ಅವರ ಕೆಟ್ಟ ದಾಖಲೆಯನ್ನು ಸಮಗೊಳಿಸಿದರು. ಓವರ್​​ನಲ್ಲಿ ಜಡೇಜಾ 36 ರನ್​ ಸಿಡಿಸಿದರೆ, ನೋಬಾಲ್ ಮೂಲಕ ಒಂದು ರನ್​ ಬಂದಿತ್ತು.

The post RCB ನಾಗಾಲೋಟಕ್ಕೆ ಚೆನ್ನೈ ಬ್ರೇಕ್​​- ಜಡೇಜಾ ಆಲ್​ರೌಂಡ್​​ ಪ್ರದರ್ಶನಕ್ಕೆ ಮಣಿದ ಕೊಹ್ಲಿ ಬಾಯ್ಸ್​ appeared first on News First Kannada.

Source: News First Kannada
Read More