RCB: ನಾಯಕತ್ವ ತೊರೆದ ಕೊಹ್ಲಿ, ಕ್ರಿಕೆಟ್​ಗೆ ವಿದಾಯ ಹೇಳಿದ ಎಬಿಡಿ! ಯಾರಾಗ್ತಾರೆ ಆರ್​ಸಿಬಿ ಮುಂದಿನ ಕ್ಯಾಪ್ಟನ್? | Who will be the next captain of royal challengers Bangalore these name can replace virat kohli as rcb captain

1/5

ಐಪಿಎಲ್-2021 ರ ದ್ವಿತೀಯಾರ್ಧದಲ್ಲಿ ವಿರಾಟ್ ಕೊಹ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ನಾಯಕನಾಗಿ ಇದು ಅವರ ಕೊನೆಯ ಸೀಸನ್ ಎಂದು ಹೇಳಿದ್ದರು. ಇದರರ್ಥ ಐಪಿಎಲ್-2022 ರಲ್ಲಿ ವಿರಾಟ್ ಆರ್‌ಸಿಬಿ ನಾಯಕನಾಗುವುದಿಲ್ಲ. ಕೊಹ್ಲಿ ನಂತರ, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರ ಹೆಸರು ಈ ಸ್ಥಾನಕ್ಕೆ ಕೇಳಿಬರುತ್ತಿತ್ತು. ಆದರೆ ಡಿವಿಲಿಯರ್ಸ್ ಶುಕ್ರವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಈಗ ಪ್ರಶ್ನೆಯೆಂದರೆ, ಇಬ್ಬರು ಹಳೆಯ ಸಹ ಆಟಗಾರರು ನಾಯಕತ್ವದ ರೇಸ್‌ನಿಂದ ಹೊರಗುಳಿದಿರುವಾಗ RCB ಮುಂದಿನ IPL ಅನ್ನು ಯಾರ ನಾಯಕತ್ವದಲ್ಲಿ ಆಡುತ್ತದೆ?

2/5

ಈ ರೇಸ್​ನಲ್ಲಿ ಈಗ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್​ವೆಲ್ ಹೆಸರು ಮುಂಚೂಣಿಯಲ್ಲಿದೆ. ಮ್ಯಾಕ್ಸ್‌ವೆಲ್ ಈ ಋತುವಿನಲ್ಲಿ ಆರ್‌ಸಿಬಿಗೆ ಬಂದರು ಮತ್ತು ಬ್ಯಾಟ್‌ನೊಂದಿಗೆ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ವಿರಾಟ್ ಮತ್ತು ಡಿವಿಲಿಯರ್ಸ್ ನಂತರ ಅವರು ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದರು. ಡಿವಿಲಿಯರ್ಸ್ ನಿರ್ಗಮನದ ನಂತರ, ಆರ್‌ಸಿಬಿ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದು ಖಚಿತ. ಹೀಗಾಗಿ ಅವರು ನಾಯಕನಾದರೆ ಆಶ್ಚರ್ಯವೇನಿಲ್ಲ.

3/5

ಐಪಿಎಲ್-2021 ರಲ್ಲಿ ಪಂಜಾಬ್ ಕಿಂಗ್ಸ್ ನಾಯಕರಾಗಿದ್ದ ಕೆಎಲ್ ರಾಹುಲ್ ಅವರು ಪಂಜಾಬ್ ತೊರೆಯುವ ಬಗ್ಗೆ ವರದಿಗಳಿವೆ. ಇದು ಸಂಭವಿಸಿದಲ್ಲಿ, ಮುಂದಿನ ಋತುವಿನ ಮೆಗಾ ಹರಾಜಿನಲ್ಲಿ RCB ಅವರ ಮೇಲೆ ಕಣ್ಣಿಡಬಹುದು ಮತ್ತು ಅವರನ್ನು ನಾಯಕನನ್ನಾಗಿ ಮಾಡಬಹುದು. ಇನ್ನೊಂದು ವಿಚಾರವೆಂದರೆ ಆರ್‌ಸಿಬಿಯಿಂದಲೇ ರಾಹುಲ್ ಪಂಜಾಬ್‌ಗೆ ಹೋಗಿದ್ದಾರೆ.

4/5

2016 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಐಪಿಎಲ್ ಪ್ರಶಸ್ತಿಗೆ ಕೊಂಡೊಯ್ದ ಡೇವಿಡ್ ವಾರ್ನರ್ ಮೇಲೆ ಈಗ RCB ಕಣ್ಣಿಟ್ಟಿದೆ. ಹೈದರಾಬಾದ್ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿತ್ತು ಮತ್ತು ನಂತರ ಅವರಿಗೆ ತಂಡದ ಕೊನೆಯ 11 ರಲ್ಲಿ ಅವಕಾಶವನ್ನು ನೀಡಲಿಲ್ಲ. ವಾರ್ನರ್ ತಮ್ಮ ಹೆಸರನ್ನು ಹರಾಜಿನಲ್ಲಿ ಇಡುವುದಾಗಿ ಸ್ಪಷ್ಟಪಡಿಸಿದ್ದರು. ವಾರ್ನರ್ ಪ್ರಭಾವಿ ನಾಯಕ ಮತ್ತು ಬ್ಯಾಟ್ಸ್‌ಮನ್ ಎಂಬುದನ್ನು ಸಾಬೀತುಪಡಿಸಿದ್ದಾರೆ. RCB ಅವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಬಹುದು.

5/5

ಇತ್ತೀಚೆಗೆ ಆಸ್ಟ್ರೇಲಿಯಾದ ಮೊದಲ T20 ವಿಶ್ವಕಪ್ ಗೆದ್ದ ಕ್ಯಾಪ್ಟನ್ ಆರನ್ ಫಿಂಚ್ ಕೂಡ RCB ನ ರಾಡಾರ್‌ನಲ್ಲಿರಬಹುದು. ಅವರು IPL-2020 ರಲ್ಲಿ RCB ಗಾಗಿ ಆಡಿದ್ದಾರೆ. ಆದರೆ ಅವರ ಫಾರ್ಮ್ ಉತ್ತಮವಾಗಿಲ್ಲದಿದ್ದರಿಂದ. 2021 ರಲ್ಲಿ ಅವರನ್ನು ಖರೀದಿಸಲು ಯಾರು ಮುಂದೆ ಬರಲಿಲ್ಲ. ಈಗ RCB ಗೆ ನಾಯಕನ ಅಗತ್ಯವಿದೆ. ಹೀಗಾಗಿ ಆರ್​ಸಿಬಿ ಫಿಂಚ್ ಮೇಲೂ ಕಣ್ಣೀಡಬಹುದು.

TV9 Kannada

Leave a Reply

Your email address will not be published. Required fields are marked *