ಮಿಸ್ಟರ್ 360 ಡಿಗ್ರಿ ಮತ್ತು ಆರ್ಸಿಬಿ ಆಪತ್ಬಾಂಧವ ಖ್ಯಾತಿಯ, ಕ್ರಿಕೆಟ್ ಜಗತ್ತು ಕಂಡ ಅತ್ಯದ್ಭುತ ಪ್ರತಿಭೆ ಎಬಿ ಡಿವಿಲಿಯರ್ಸ್ ಇಂದು ಎಲ್ಲಾ ಮಾದರಿಯ ಕ್ರಿಕೆಟ್ಗೂ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ ಎಬಿಡಿ ಈಗ ಆರ್ಸಿಬಿಯೊಂದಿಗೆ ಇರುವ ಸಂಬಂಧದ ಬಗ್ಗೆ ಮಾತಾಡಿದ್ದಾರೆ.
ನಾನು ಎಂದಿಗೂ ಆರ್ಸಿಬಿಯನ್. ಯಾವಾಗಲೂ ಕೊಹ್ಲಿಯನ್ನೇ ಸಪೋರ್ಟ್ ಮಾಡುತ್ತೇನೆ. ಆರ್ಸಿಬಿ ಸೇರಿದ ಬಳಿಕ ಅರ್ಧ ಭಾರತೀಯನಾಗಿದ್ದೇನೆ ಎಂದರು ಎಬಿಡಿ.
ನನಗೆ ಆರ್ಸಿಬಿ ಫ್ಯಾನ್ಸ್ ತೋರಿದ ಪ್ರೀತಿಗೆ ಬೆಲೆ ಕಟ್ಟಲಾಗದು. ನಾನ ಎಂದೆಂದಿಗೂ ಆರ್ಸಿಬಿಯಲ್ಲೇ ಉಳಿಯುತ್ತೇನೆ. ಮುಂದೆಯೂ ಆರ್ಸಿಬಿಯನ್ನು ಬೆಂಬಲಿಸುತ್ತೇನೆ. ಕೊಹ್ಲಿ ನಾನು ನಿನ್ನೊಂದಿಗೆ ಇದ್ದೇನೆ ಎಂದು ಹೇಳಿದರು.
ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ್ದರು ಎಬಿ ಡಿವಿಲಿಯರ್ಸ್. ಬಳಿಕ 2017ರಲ್ಲಿ ನಾಯಕ ಸ್ಥಾನದಿಂದ ಎಬಿಡಿ ಕೆಳಗಿಳಿದಿದ್ದರು. 2018ರ ಮೇ ತಿಂಗಳಿನಲ್ಲಿ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದರು. 3 ವರ್ಷಗಳ ಹಿಂದೆಯೇ ನಿವೃತ್ತಿ ಪಡೆದಿದ್ದ ಎಬಿಡಿ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಪರ ಆಡುತ್ತಾ ಎಲ್ಲರನ್ನು ರಂಜಿಸಿದ್ದರು.
ಇದನ್ನೂ ಓದಿ: ‘ನಾನು ಎಂದಿಗೂ ಆರ್ಸಿಬಿಯನ್’- ಕ್ರಿಕೆಟ್ ನಿವೃತ್ತಿ ಘೋಷಣೆ ಬೆನ್ನಲ್ಲೇ ABD ಭಾವುಕ ನುಡಿ