ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2022 ಮೆಗಾ ಆಕ್ಷನ್ ಮುಗಿದಿದೆ. ಇನ್ನೇನು ಏಪ್ರಿಲ್ನಿಂದ ಐಪಿಎಲ್ ಟೂರ್ನಿ ಶುರುವಾಗಲಿದೆ. ಈಗಾಗಲೇ ಮೆಗಾ ಹರಾಜಿನಲ್ಲಿ ಸೌತ್ ಆಫ್ರಿಕಾ ಪ್ಲೇಯರ್ ಫಾಫ್ ಡು ಪ್ಲೆಸಿಸ್ ಅವರನ್ನು 7 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಈಗ ಆರ್ಸಿಬಿ ಸೇರಿದ ಬಳಿಕ ಫಾಫ್ ಡು ಪ್ಲೆಸಿಸ್ ಮಾತಾಡಿದ್ದಾರೆ.
ನಾನು ಆರ್ಸಿಬಿಗೆ ಆಯ್ಕೆಯಾದ ಕೂಡಲೇ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಗ್ರೇಟ್ ಕ್ರಿಕೆಟರ್ ವಿರಾಟ್ ಕೊಹ್ಲಿ ನನಗೆ ಮೆಸೇಜ್ ಮಾಡಿದ್ರು. ವಿರಾಟ್ ನನಗೆ ಹತ್ತಾರು ವರ್ಷಗಳಿಂದ ಪರಿಚಯ. ನಾವು ಒಳ್ಳೆಯ ಸ್ನೇಹಿತರು, ಎಷ್ಟೋ ಪಂದ್ಯಗಳಲ್ಲಿ ನಾವು ಎದುರಾಳಿಗಳಾಗಿದ್ದೇವೆ. ಈಗ ಮೊದಲ ಬಾರಿಗೆ ಒಟ್ಟಿಗೆ ಆಡೋ ಅವಕಾಶ ದೊರೆತಿದೆ. ಇದು ನನಗೆ ತುಂಬಾ ಖುಷಿ ತಂದಿದೆ ಎಂದು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ ಫಾಫ್ ಡು ಪ್ಲೆಸಿಸ್.
ಇನ್ನು, ಫಾಫ್ ಡು ಪ್ಲೆಸಿಸ್ ಆರ್ಸಿಬಿ ಮುಂದಿನ ಕ್ಯಾಪ್ಟನ್ ಆಗೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಆರ್ಸಿಬಿ ಇವರನ್ನೇ ಮುಂದಿನ ಕ್ಯಾಪ್ಟನ್ ಎಂದು ಅನೌನ್ಸ್ ಮಾಡಿದ್ರು ಮಾಡಬಹುದು ಹೇಳಲಾಗುವುದಿಲ್ಲ.