RCB ಸೇರೋ ಮುನ್ನ ಕೊಹ್ಲಿ ಬಗ್ಗೆ ABDಗೆ ಇದ್ದ ಅಭಿಪ್ರಾಯವೇನು ಗೊತ್ತಾ..?


ರಾಯಲ್ ಚಾಲೆಂಜರ್ಸ್ ಬೆಂಗಳೂರು, ಐಪಿಎಲ್​ನ ಈ ತಂಡ ಒಂದೇ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಆದ್ರೂ, ಈ ತಂಡಕ್ಕೆ ಇರೋ ಕ್ರೇಜ್​ ಕಪ್​ ಮುಡಿಗೇರಿಸಿಕೊಂಡ ಯಾವುದೇ ತಂಡಕ್ಕಿಂತ ಕಮ್ಮಿ ಇಲ್ಲ. ಇದಕ್ಕೆ ಮುಖ್ಯ ಕಾರಣ ಅಂದ್ರೆ ಒಂದು ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್, ರನ್​ ಮಷಿನ್ ವಿರಾಟ್ ಕೊಹ್ಲಿಯಾದ್ರೆ, ಮತ್ತೊಬ್ರು ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್​ಮನ್ ಖ್ಯಾತಿಯ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್.

ಈ ಇಬ್ರು ಆನ್​ಫೀಲ್ಡ್​ನಲ್ಲಿ ಹಲವು ಬಾರಿ ಆರ್​ಸಿಬಿಗೆ ಗೆಲುವಿನ ಮಾಲೆ ತೊಡಿಸಿದ್ದಾರೆ. ಇನ್ನು ಆಫ್​ ದಿ ಫೀಲ್ಡ್​ನಲ್ಲೂ ಇವ್ರಿಬ್ರು ಬೆಸ್ಟ್ ಫ್ರೆಂಡ್ಸ್. ಆದ್ರೆ, ಎಬಿಡಿ ಆರ್​ಸಿಬಿ ಕ್ಯಾಂಪ್ ಸೇರುವ ಮುನ್ನ ಕೊಹ್ಲಿ ಬಗ್ಗೆ ಇದ್ದ ಅಭಿಪ್ರಾಯವೇ ಬೇರೆ. ಕೊಹ್ಲಿ ಒರಟ, ಆ್ಯಟಿಟ್ಯೂಡ್ ಇರೋ ಮನುಷ್ಯ ಅಂದುಕೊಂಡಿದ್ದರಂತೆ ಎಬಿಡಿ.

News First Live Kannada


Leave a Reply

Your email address will not be published.