RCB vs DC Live Score, IPL 2021: ಐಪಿಎಲ್​ ಲೀಗ್ ಹಂತದ ಪಂದ್ಯಗಳಿಗೆ ಇಂದು ತೆರೆ | RCB vs DC Live Score today IPL 2021 match scorecard

RCB vs DC Live Score, IPL 2021: ಐಪಿಎಲ್​ ಲೀಗ್ ಹಂತದ ಪಂದ್ಯಗಳಿಗೆ ಇಂದು ತೆರೆ

RCB vs DC Live Score

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಸೀಸನ್​ ಲೀಗ್ (IPL 2021) ಪಂದ್ಯಗಳಿಗೆ ಇಂದು ತೆರೆಬೀಳಲಿದೆ. ಅದರಲ್ಲೂ ವಿಶೇಷವಾಗಿ ಇದೇ ಮೊದಲ ಬಾರಿಗೆ ಏಕಕಾಲಕ್ಕೆ ಅಂದರೆ ಸಂಜೆ 7:30ಕ್ಕೆ ಎರಡು ಪಂದ್ಯಗಳು ನಡೆಯುತ್ತಿದೆ. ದುಬೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ (RCB vs DC) ಮುಖಾಮುಖಿಯಾಗಿದ್ದರೆ, ಅಬುಧಾಬಿಯಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್ (SRH vs MI) ತಂಡಗಳು ಸೆಣೆಸಾಟ ನಡೆಸುತ್ತಿದೆ. ಆರ್​ಸಿಬಿ-ಡೆಲ್ಲಿ ತಂಡಗಳು ಈಗಾಗಲೇ ಪ್ಲೇಆಫ್ ಪ್ರವೇಶಿಸಿರುವ ಕಾರಣ ಉಭಯ ತಂಡಗಳಿಗೂ ಇದೊಂದು ಔಪಚಾರಿಕ ಪಂದ್ಯವಷ್ಟೇ. ಇದಾಗ್ಯೂ ಕಳೆದ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ದ ಸೋತಿರುವ ಆರ್​ಸಿಬಿಗೆ ಗೆಲುವಿನ ಲಯಕ್ಕೆ ಮರಳಲು ಇದೊಂದು ಉತ್ತಮ ಅವಕಾಶ ಎನ್ನಬಹುದು.

ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ ಒಟ್ಟು 25 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 15 ಬಾರಿ ಗೆಲುವು ದಾಖಲಿಸಿದೆ. ಇನ್ನುಡೆಲ್ಲಿ ಕ್ಯಾಪಿಟಲ್ಸ್ ತಂಡ 10 ಪಂದ್ಯಗಳಲ್ಲಿ ಆರ್​ಸಿಬಿಗೆ ಸೋಲುಣಿಸಿದೆ.

 

TV9 Kannada

Leave a comment

Your email address will not be published. Required fields are marked *