
RCB vs GT Live Score, IPL 2022
Royal Challengers Bangalore vs Gujarat Titans Live Score in Kannada: ಆರ್ಸಿಬಿ ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು 5ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನಕ್ಕೇರಲಿದೆ.
ಐಪಿಎಲ್ನ 67ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಗುಜರಾತ್ ಟೈಟನ್ಸ್ (RCB vs GT) ಮುಖಾಮುಖಿಯಾಗಲಿದೆ. ಈ ಪಂದ್ಯವು ಗುಜರಾತ್ ಟೈಟನ್ಸ್ ಪಾಲಿಗೆ ಔಪಚಾರಿಕ ಪಂದ್ಯವಾದರೆ, ಆರ್ಸಿಬಿಗೆ ನಿರ್ಣಾಯಕ ಪಂದ್ಯ. ಏಕೆಂದರೆ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ತಂಡವು ಈಗಾಗಲೇ ಪ್ಲೇಆಫ್ ಪ್ರವೇಶಿಸಿದೆ. ಆದರೆ ಆರ್ಸಿಬಿ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಪ್ರವೇಶಿಸುವ ಅವಕಾಶ ಇರಲಿದೆ. ಹೀಗಾಗಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರ್ಸಿಬಿ ಮಾಡು ಇಲ್ಲವೇ ಮಡಿ ಪಂದ್ಯವಾಡಲಿದೆ. ಆರ್ಸಿಬಿ ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು 5ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನಕ್ಕೇರಲಿದೆ. ಆದರೆ ಆರ್ಸಿಬಿ ತಂಡದ ಪ್ಲೇಆಫ್ ಖಚಿತವಾಗುವುದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದ ಫಲಿತಾಂಶದ ಬಳಿಕ ಎಂಬುದು ವಿಶೇಷ. ಹೀಗಾಗಿ ಇಂದಿನ ಪಂದ್ಯದಲ್ಲಿ ಅತ್ಯುತ್ತಮ ನೆಟ್ ರನ್ ರೇಟ್ ಮೂಲಕ ಗೆಲ್ಲುವುದು ಆರ್ಸಿಬಿ ಮುಂದಿರುವ ದೊಡ್ಡ ಟಾರ್ಗೆಟ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್ (ನಾಯಕ) , ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ , ರಜತ್ ಪಾಟಿದಾರ್ , ಗ್ಲೆನ್ ಮ್ಯಾಕ್ಸ್ ವೆಲ್ , ಮಹಿಪಾಲ್ ಲೊಮ್ರೋರ್ , ಶಹಬಾಜ್ ಅಹ್ಮದ್ , ವನಿಂದು ಹಸರಂಗ , ಹರ್ಷಲ್ ಪಟೇಲ್ , ಮೊಹಮ್ಮದ್ ಸಿರಾಜ್ , ಜೋಶ್ ಹ್ಯಾಝಲ್ ವುಡ್ , ಆಕಾಶ್ ದೀಪ್ , ಎಫ್ ಎಫ್ ಸುನ್ ದೀಪ್ , ಎಫ್ . ಪ್ರಭುದೇಸಾಯಿ , ಶೆರ್ಫೇನ್ ರುದರ್ಫೋರ್ಡ್ , ಅನೀಶ್ವರ್ ಗೌತಮ್ , ಚಾಮ ವಿ ಮಿಲಿಂದ್ , ಜೇಸನ್ ಬೆಹ್ರೆಂಡಾರ್ಫ್ , ಡೇವಿಡ್ ವಿಲ್ಲಿ ,ಕರ್ಣ್ ಶರ್ಮಾ , ಸಿದ್ದಾರ್ಥ್ ಕೌಲ್
ಗುಜರಾತ್ ಟೈಟನ್ಸ್ ತಂಡ: ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ (ನಾಯಕ) , ಶುಭಮನ್ ಗಿಲ್ , ಮ್ಯಾಥ್ಯೂ ವೇಡ್ , ಡೇವಿಡ್ ಮಿಲ್ಲರ್ , ರಾಹುಲ್ ತೆವಾಟಿಯಾ , ರಶೀದ್ ಖಾನ್ , ರವಿಶ್ರೀನಿವಾಸನ್ ಸಾಯಿ ಕಿಶೋರ್ , ಅಲ್ಜಾರಿ ಜೋಸೆಫ್ , ಯಶ್ ದಯಾಳ್ , ಮೊಹಮ್ಮದ್ ಶಮಿ , ಲಾಕಿ ಫರ್ಗುಸನ್, ವಿಜಯ್ ಶಂಕರ್ , ಗುರುಕೀರತ್ ಸಿಂಗ್ , ಅಭಿನವ್ ಮನೋಹರ್ , ಸಾಯಿ ಸುದರ್ಶನ್ , ದರ್ಶನ್ ನಲ್ಕಂಡೆ ,ರಹಮಾನುಲ್ಲಾ ಗುರ್ಬಾಜ್ , ಡೊಮಿನಿಕ್ ಡ್ರೇಕ್ಸ್ , ನೂರ್ ಅಹ್ಮದ್