RCB vs RR, IPL 2022: 7 ವರ್ಷಗಳ ನಂತರ ಕ್ವಾಲಿಫೈಯರ್​ 2ಗೆ ಆರ್​ಸಿಬಿ! 2011ರ ಇತಿಹಾಸ ಮರುಕಳಿಸುತ್ತಾ? | RCB vs RR IPL 2022 Royal Challengers Bangalore in Qualifier two after 7 long years


RCB vs RR, IPL 2022: 7 ವರ್ಷಗಳ ನಂತರ ಕ್ವಾಲಿಫೈಯರ್​ 2ಗೆ ಆರ್​ಸಿಬಿ! 2011ರ ಇತಿಹಾಸ ಮರುಕಳಿಸುತ್ತಾ?

ಆರ್​ಸಿಬಿ ತಂಡ

RCB vs RR, IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದೃಷ್ಟದಿಂದ ಪ್ಲೇಆಫ್ ಆಡಲು ಟಿಕೆಟ್ ಪಡೆದಿರಬಹುದು. ಆದರೆ ಈ ತಂಡವು ಕ್ವಾಲಿಫೈಯರ್ ಎರಡರಲ್ಲಿ, ಪಂದ್ಯಾವಳಿಯ ಗುಂಪು ಹಂತದಲ್ಲಿ RCB ಗಿಂತ ಉತ್ತಮ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡವನ್ನು ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಅಹಮದಾಬಾದ್‌ಗೆ ಟಿಕೆಟ್ ಖಚಿತಪಡಿಸಿಕೊಂಡಿದೆ. ಬೆಂಗಳೂರು ತಂಡ ಈಗ ಕ್ವಾಲಿಫೈಯರ್ 2 (Qualifier 2) ಪಂದ್ಯವನ್ನು ಆಡಬೇಕಾದ ಸ್ಥಳ ಅಹಮದಾಬಾದ್. ಈ ಮೂಲಕ ಆರ್​ಸಿಬಿ ಒಟ್ಟಾರೆ ಮೂರನೇ ಬಾರಿ ಮತ್ತು ಕಳೆದ 7 ವರ್ಷಗಳಲ್ಲಿ ಮೊದಲ ಬಾರಿಗೆ ಕ್ವಾಲಿಫೈಯರ್ 2 ಪಂದ್ಯವನ್ನು ಆಡಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ RCB ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಎರಡು ತಂಡಗಳ ನಡುವಿನ ಈ ಕ್ರಿಕೆಟ್ ಕದನವು ಯಾವ ತಂಡವು ಫೈನಲ್‌ಗೆ ಹೋಗಲಿದೆ ಎಂಬುದನ್ನು ನಿರ್ಧರಿಸುತ್ತದೆ. ಈ ಪಂದ್ಯದಲ್ಲಿ ಗೆದ್ದವರು ಮೇ 29 ರಂದು ಗುಜರಾತ್ ಟೈಟಾನ್ಸ್ (Gujarat Titans) ತಂಡವನ್ನು ಎದುರಿಸಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದೃಷ್ಟದಿಂದ ಪ್ಲೇಆಫ್ ಆಡಲು ಟಿಕೆಟ್ ಪಡೆದಿರಬಹುದು. ಆದರೆ ಈ ತಂಡವು ಕ್ವಾಲಿಫೈಯರ್ ಎರಡರಲ್ಲಿ, ಪಂದ್ಯಾವಳಿಯ ಗುಂಪು ಹಂತದಲ್ಲಿ RCB ಗಿಂತ ಉತ್ತಮ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಹೀಗಿರುವಾಗ ಫೈನಲ್‌ನ ಟಿಕೆಟ್ ಗೆಲ್ಲುವ ಸವಾಲು ಆರ್‌ಸಿಬಿಗೆ ಸುಲಭವಲ್ಲ.

TV9 Kannada


Leave a Reply

Your email address will not be published. Required fields are marked *