RCB vs SRH Prediction Playing XI: ಆರ್​ಸಿಬಿಗೆ ಹೈದರಾಬಾದ್ ಸವಾಲು; ಉಭಯ ತಂಡಗಳ ಸಂಭಾವ್ಯ ಇಲೆವೆನ್ | RCB vs SRH Prediction Playing XI IPL Royal Challengers Bangalore Sunrisers Hyderabad Team Best Pick Players to Watch 23 April in kannada


RCB vs SRH Prediction Playing XI: ಆರ್​ಸಿಬಿಗೆ ಹೈದರಾಬಾದ್ ಸವಾಲು; ಉಭಯ ತಂಡಗಳ ಸಂಭಾವ್ಯ ಇಲೆವೆನ್

RCB vs SRH

IPL 2022 ರಲ್ಲಿ ಇಲ್ಲಿಯವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮತ್ತು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) (RCB vs SRH) ಉತ್ತಮ ಪ್ರದರ್ಶನ ನೀಡಿವೆ. ವಿಶೇಷವಾಗಿ ಹೈದರಾಬಾದ್ ಪ್ರಚಂಡ ಪುನರಾಗಮನ ಮಾಡಿದೆ. ಕೇನ್ ವಿಲಿಯಮ್ಸನ್ ನಾಯಕತ್ವದ ತಂಡವು ಮೊದಲ ಎರಡು ಪಂದ್ಯಗಳಲ್ಲಿ ಸೋತ ನಂತರ ಸತತವಾಗಿ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಇದೀಗ ಈ ಎರಡು ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಉತ್ತಮ ಲಯದಲ್ಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಕಠಿಣ ಪೈಪೋಟಿಗೆ ಸಾಕ್ಷಿಯಾಗಬಹುದು. ಸತತ ಗೆಲುವುಗಳನ್ನು ದಾಖಲಿಸಿದ ನಂತರ, ಈ ತಂಡಗಳ ಆಡುವ XI (RCB vs SRH Playing XI Prediction) ನಲ್ಲಿ ಯಾವುದಾದರೂ ಬದಲಾವಣೆ ಇರುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ?

ಉಭಯ ತಂಡಗಳ ಈವರೆಗಿನ ಪಂದ್ಯಗಳನ್ನು ಅವಲೋಕಿಸಿದರೆ ಮತ್ತು ಮಾಡಿರುವ ಬದಲಾವಣೆಗಳನ್ನು ನೋಡಿದರೆ ಈ ಪಂದ್ಯದಲ್ಲಿ ದೊಡ್ಡ ಬದಲಾವಣೆಗಳ ಭರವಸೆಯಾಗಲೀ, ಸಾಧ್ಯತೆಯಾಗಲೀ ಇಲ್ಲ. ಎರಡೂ ತಂಡಗಳು ತಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಮೈದಾನಕ್ಕೆ ಬರುತ್ತಿದ್ದು, ಮೈದಾನಕ್ಕಿಳಿಯುತ್ತಿರುವ ಬಹುತೇಕ ಆಟಗಾರರು ಒಂದಲ್ಲ ಒಂದು ಹಂತದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದಾಗ್ಯೂ, ಒಂದು ಅಥವಾ ಎರಡು ಸ್ಥಳಗಳಲ್ಲಿ ಬದಲಾವಣೆ ಇರಬಹುದು.

ವಾಷಿಂಗ್ಟನ್ ಸುಂದರ್ ಹಿಂತಿರುಗಲಿದ್ದಾರೆ!
ಸನ್‌ರೈಸರ್ಸ್‌ನಲ್ಲಿ ನಿಸ್ಸಂಶಯವಾಗಿ ದೊಡ್ಡ ಬದಲಾವಣೆಯನ್ನು ಮಾಡಬೇಕಾಗಿದೆ ಮತ್ತು ವಾಷಿಂಗ್ಟನ್ ಸುಂದರ್ ಈ ಪಂದ್ಯಕ್ಕೆ ಫಿಟ್ ಆಗಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಸುಂದರ್ ಗಾಯಗೊಂಡಿದ್ದರು, ಇದರಿಂದಾಗಿ ಕೊನೆಯ ಎರಡು ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಈಗ ಅವರು ಫಿಟ್ ಆಗಿದ್ದರೆ, ಅವರು ತಮ್ಮ ಮಾಜಿ ತಂಡದ ವಿರುದ್ಧ ಆಡಲು ಆಡುವ XI ಗೆ ಮರಳುವುದು ಖಚಿತ. ಹಾಗಾದರೆ ಯಾರನ್ನು ಹೊರಹಾಕಬೇಕು?

ಸುಂದರ್ ಬದಲಿಗೆ ಜಗದೀಶ ಸುಚಿತ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಸ್ಪಿನ್ನರ್ ಆಲ್ ರೌಂಡರ್ ಎರಡೂ ಪಂದ್ಯಗಳಲ್ಲಿ ಉಪಯುಕ್ತ ಬೌಲಿಂಗ್ ಮಾಡಿ ತಲಾ 1 ವಿಕೆಟ್ ಪಡೆದರು. ಆದರೆ, ಅವರಿಗೆ ಬ್ಯಾಟ್‌ನಲ್ಲಿ ಅವಕಾಶ ತೋರಿಸುವ ಅವಕಾಶ ಸಿಗಲಿಲ್ಲ. ಮತ್ತೊಂದೆಡೆ, ಶಶಾಂಕ್ ಸಿಂಗ್ ಬ್ಯಾಟಿಂಗ್ ಆಲ್‌ರೌಂಡರ್, ಆದರೆ ನಾಲ್ಕು ಪಂದ್ಯಗಳಲ್ಲಿ ಒಂದೇ ಒಂದು ಅವಕಾಶವನ್ನು ಪಡೆದಿಲ್ಲ. ಜೊತೆಗೆ ಬೌಲಿಂಗ್​ನಲ್ಲೂ ಅವಕಾಶ ಸಿಕ್ಕಿಲ್ಲ. ದುರದೃಷ್ಟವಶಾತ್, ಶಶಾಂಕ್ ಸ್ಥಾನ ಹೊರಹೋಗಬೇಕಾಗಿದೆ.

ಅನುಜ್ ರಾವತ್​ಗೆ ಕೊನೆಯ ಅವಕಾಶ!
ಇನ್ನೊಂದು ಕಡೆ ಫಾಫ್ ಡು ಪ್ಲೆಸಿಸ್ ನಾಯಕತ್ವದ ಈ ತಂಡವು 7 ಪಂದ್ಯಗಳಲ್ಲಿ 5 ರಲ್ಲಿ ಗೆದ್ದಿದೆ ಮತ್ತು ಪ್ರತಿಯೊಂದು ಗೆಲುವಿನಲ್ಲೂ ಹೊಸ ಸ್ಟಾರ್ ಹೊರಹೊಮ್ಮಿದ್ದಾರೆ. ಕಳೆದ ಪಂದ್ಯದಲ್ಲಿ ನಾಯಕ ಡು ಪ್ಲೆಸಿಸ್ 96 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ಫಾರ್ಮ್‌ಗೆ ಮರಳುವ ಸೂಚನೆ ನೀಡಿದ್ದರು. ಬೌಲಿಂಗ್ ಕೂಡ ಮೊದಲಿಗಿಂತ ಈಗ ಉತ್ತಮವಾಗಿ ಕಾಣುತ್ತಿದೆ. ವಿರಾಟ್ ಕೊಹ್ಲಿ ಮತ್ತು ಅನುಜ್ ರಾವತ್ ಮಾತ್ರ ಮುಕ್ತವಾಗಿ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ. ಕೊಹ್ಲಿ ಉಳಿಯುತ್ತಾರೆ, ಆದರೆ ಅನುಜ್ ರಾವತ್‌ ಏನಾಗಬಹುದು ಎಂಬುದು ಪ್ರಶ್ನೆ? ಈ ಋತುವಿನಲ್ಲಿ ಆರ್‌ಸಿಬಿಯ ಕಾರ್ಯವೈಖರಿಯನ್ನು ಅರ್ಥಮಾಡಿಕೊಂಡರೆ, ತಂಡವು ಅನುಜ್‌ಗೆ ಕನಿಷ್ಠ ಒಂದು ಅವಕಾಶವನ್ನು ನೀಡುತ್ತದೆ. ಅವರು ಕೆಲಸ ಮಾಡದಿದ್ದರೆ, ನಂತರ ಮಹಿಪಾಲ್ ಲೊಮೊರರ್ ಅವರನ್ನು ಪ್ರಯತ್ನಿಸಬಹುದು.

RCB vs SRH ಸಂಭಾವ್ಯ ಪ್ಲೇಯಿಂಗ್ XI

ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್ ಮತ್ತು ಮೊಹಮ್ಮದ್ ಸಿರಾಜ್.

ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ವಾಷಿಂಗ್ಟನ್ ಸುಂದರ್/ಶಶಾಂಕ್ ಸಿಂಗ್, ಜಗದೀಶ ಸುಚಿತ್, ಭುವನೇಶ್ವರ್ ಕುಮಾರ್, ಮಾರ್ಕೊ ಯಾನ್ಸನ್, ಟಿ ನಟರಾಜನ್ ಮತ್ತು ಉಮ್ರಾನ್ ಮಲಿಕ್.

TV9 Kannada


Leave a Reply

Your email address will not be published.