ರಿಯಲ್ ಮಿ ಸದ್ದಿಲ್ಲದೆ ನೂತನವಾಗಿ ರಿಯಲ್ ಮಿ 10ಎಸ್ 5ಜಿ (Realme 10S 5G) ಸ್ಮಾರ್ಟ್ಫೋನ್ ಅನ್ನು ರಿಲೀಸ್ ಮಾಡಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಬಲಿಷ್ಠ ಪ್ರೊಸೆಸರ್, 5000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ.

Realme 10S 5G
2022ನೇ ವರ್ಷ ಮುಗಿಯುತ್ತಿದ್ದಂತೆ ಪ್ರಸಿದ್ಧ ರಿಯಲ್ ಮಿ (Realme) ಸಂಸ್ಥೆ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಮೊನ್ನೆಯಷ್ಟೆ ಭಾರತದಲ್ಲಿ 108 ಮೆಗಾಫಿಕ್ಸೆಲ್ ಕ್ಯಾಮೆರಾದ ರಿಯಲ್ ಮಿ 10 ಪ್ರೊ 5G (Realme 10 Pro 5G) ಮತ್ತು ರಿಯಲ್ ಮಿ 10 ಪ್ರೊ + 5G ಫೋನನ್ನು ಅನಾವರಣ ಮಾಡಿತ್ತು. ಇದೀಗ ಸದ್ದಿಲ್ಲದೆ ನೂತನವಾಗಿ ರಿಯಲ್ ಮಿ 10ಎಸ್ 5ಜಿ (Realme 10S 5G) ಸ್ಮಾರ್ಟ್ಫೋನ್ ಅನ್ನು ರಿಲೀಸ್ ಮಾಡಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್, 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನು ಫೀಚರ್ಸ್ ಇದೆ ಎಂಬುದನ್ನು ನೋಡೋಣ.