Realme 9 4G: 108MP ಕ್ಯಾಮೆರಾ, ಕೇವಲ 17,999 ರೂ.: ರಿಯಲ್ ಮಿ 9 ​​ಫೋನ್ ಈಗ ಖರೀದಿಗೆ ಲಭ್ಯ | Realme 9 4G A 108MP camera smartphone Sales begin Today Via Flipkart Check Offer price and Specs


Realme 9 4G: 108MP ಕ್ಯಾಮೆರಾ, ಕೇವಲ 17,999 ರೂ.: ರಿಯಲ್ ಮಿ 9 ​​ಫೋನ್ ಈಗ ಖರೀದಿಗೆ ಲಭ್ಯ

Realme 9 4G

ಭಾರತದಲ್ಲೀಗ ಆಕರ್ಷಕ ಕ್ಯಾಮೆರಾ ಇರುವ ಸ್ಮಾರ್ಟ್​​ಫೋನ್​ಗಳಿಗೆ (Smartphone) ಭರ್ಜರಿ ಬೇಡಿಕೆ ಇದೆ ಎಂಬ ಗುಟ್ಟನ್ನು ಮೊಬೈಲ್ ಕಂಪನಿಗಳು ಅರಿತುಕೊಂಡಿವೆ. ಅದಕ್ಕಾಗಿಯೆ 108MP ಕ್ಯಾಮೆರಾದ ಫೋನ್ (108 MP Camera Phone) ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಬಿಡುಗಡೆ ಆಗುತ್ತಿದೆ. ಈ ಪೈಕಿ ಕೆಲ ಸ್ಮಾರ್ಟ್​​ಫೋನ್​ಗಳು ಬಜೆಟ್ ಬೆಲೆಗೆ ರಿಲೀಸ್ ಆಗುತ್ತಿದೆ ಎಂಬುದು ವಿಶೇಷ. ಇದಕ್ಕೆ ಉತ್ತಮ ಉದಾಹರಣೆ ರಿಯಲ್ ಮಿ ಕಂಪನಿ ಕಳೆದ ವಾರ ದೇಶದಲ್ಲಿ ಬಿಡುಗಡೆ ಮಾಡಿರುವ ರಿಯಲ್ ಮಿ 9 4ಜಿ (Realme 9 4G) ಸ್ಮಾರ್ಟ್​ಫೋನ್. ಬರೋಬ್ಬರಿ 108 ಮೆಗಾ ಫಿಕ್ಸೆಲ್ ಕ್ಯಾಮೆರಾ ಹೊಂದಿರುವ ಈ ಫೋನಿನ ಬೆಲೆ ಕೇವಲ 17,999 ರೂಪಾಯಿ. ರಿಯಲ್ ಮಿ 9 4G ಇಂದಿನಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌, ರಿಯಲ್‌ಮಿ.ಕಾಮ್‌ ಮತ್ತು ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟವಾಗಲಿದೆ. ಹಾಗಾದ್ರೆ ಈ ಫೋನಿಗೆ ಏನು ಆಫರ್ ಇದೆ?, ವಿಶೇಷತೆ ಏನು ಎಂಬುದನ್ನು ನೋಡೋಣ.

ಬೆಲೆ-ಆಫರ್ ಏನು?:

ಭಾರತದಲ್ಲಿ ರಿಯಲ್‌ ಮಿ 9 4G ಸ್ಮಾರ್ಟ್‌ಫೋನ್‌ ಒಟ್ಟು ಎರಡು ಸ್ಟೋರೆಜ್ ಆಯ್ಕೆಯಲ್ಲಿ ಮಾರಾಟ ಆಗುತ್ತಿದೆ. ಇದರ ಬೇಸ್ ಮಾಡೆಲ್‌ 8GB + 128GB ಸ್ಟೋರೇಜ್ ಮಾದರಿಗೆ 17,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 12GB + 256GB ಸ್ಟೋರೇಜ್ ಆಯ್ಕೆಗೆ 18,999 ರೂ. ಬೆಲೆ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ವೈಟ್, ಗೋಲ್ಡ್‌ ಮತ್ತು ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಫೋನ್ ಏಪ್ರಿಲ್ 12 ಇಂದಿನಿಂದ ಮಧ್ಯಾಹ್ನ 12 ಗಂಟೆಯಿಂದ ರಿಯಲ್‌ಮಿ.ಕಾಮ್‌, ಫ್ಲಿಪ್‌ಕಾರ್ಟ್‌ ಮತ್ತು ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟವಾಗಲಿದೆ. ಇದರೊಂದಿಗೆ ಬ್ಯಾಂಕ್ ಕೊಡುಗೆಗಳು 2,000 ರೂ. HDFC ಬ್ಯಾಂಕ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳ ಮೇಲೆ ತ್ವರಿತ ರಿಯಾಯಿತಿ ಸಿಗಲಿದೆ.

ಏನು ವಿಶೇಷತೆ?:

ರಿಯಲ್‌ಮಿ 9 4G ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.4 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ಅಡಾಪ್ಟಿವ್ ರಿಫ್ರೆಶ್ ರೇಟ್​ನಿಂದ ಕೂಡಿದೆ.  ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12 ಆಧಾರಿತ ರಿಯಲ್‌ಮಿ UI 3.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 6GBRAM + 128GB , 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದಿಂದ ಕೂಡಿದೆ.

ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ನೀಡಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ NonaPixel Plus ತಂತ್ರಜ್ಞಾನವನ್ನು (3×3 ಬಿನ್ನಿಂಗ್) ಆಧರಿಸಿರುವ 108MP ನಿಂದ ಕೂಡಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಜೊತೆಗೆ 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ವನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ವನ್ನು ಹೊಂದಿದೆ. ಇದು ಇನ್-ಸೆನ್ಸಾರ್ ಅಲ್ಟ್ರಾ-ಜೂಮ್ ಎಂಬ ವೈಶಿಷ್ಟ್ಯವನ್ನು ಹೊಂದಿದ್ದು, ಉತ್ತಮವಾದ ಝೂಮ್-ಇನ್ ಫೋಟೋಗಳನ್ನು ಶೂಟ್ ಮಾಡಲು ಅನುಮತಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ರಿಯಲ್‌ ಮಿ 9 4G ಸ್ಮಾರ್ಟ್‌ಫೋನ್​ನ ಬ್ಯಾಟರಿ ಕೂಡ ಉತ್ತಮವಾಗಿದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು 33W ಸೂಪರ್‌ಡಾರ್ಟ್ ಚಾರ್ಜ್ ವರ್ಧಿತ ವೇಗದ ಚಾರ್ಜಿಂಗ್‌ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 6, ಬ್ಲೂಟೂತ್ v5.2 ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದು ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ.

WhatsApp: ಫೈಲ್ ಶೇರ್ ಮಾಡುವಾಗ ಕಾಣಿಸುತ್ತೆ ಹೊಸ ಆಯ್ಕೆ: ವಾಟ್ಸ್​ಆ್ಯಪ್​ನಿಂದ ನೂತನ ಫೀಚರ್

AC: ಅಮೆಜಾನ್, ಫ್ಲಿಪ್​​ಕಾರ್ಟ್​​ನಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದೆ ಎಸಿ: ಈ ಬೇಸಿಗೆಗೆ ಇದುವೇ ಉತ್ತಮ ಆಯ್ಕೆ

TV9 Kannada


Leave a Reply

Your email address will not be published.