Redmi 10A: ಭಾರತೀಯ ಮಾರುಕಟ್ಟೆಯಲ್ಲಿ ಇಂದು ಬಿಡುಗಡೆ ಆಗಲಿದೆ ಬಜೆಟ್ ಪ್ರಿಯರ ರೆಡ್ಮಿ 10A: ಏನು ವಿಶೇಷತೆ? | Xiaomi is Toady launching a new smartphone in its budget series Redmi 10A in India


Redmi 10A: ಭಾರತೀಯ ಮಾರುಕಟ್ಟೆಯಲ್ಲಿ ಇಂದು ಬಿಡುಗಡೆ ಆಗಲಿದೆ ಬಜೆಟ್ ಪ್ರಿಯರ ರೆಡ್ಮಿ 10A: ಏನು ವಿಶೇಷತೆ?

Redmi 10A

ಅತ್ಯಂತ ಕಡಿಮೆ ಬೆಲೆಗೆ ಆಕರ್ಷಕ ಫೀಚರ್​​ಗಳಿರುವ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವುದರಲ್ಲಿ ಶವೋಮಿ ಕಂಪನಿ ಎತ್ತಿದ ಕೈ. ಈಗಂತು ಶವೋಮಿ (Xiaomi) ತನ್ನ ಫೋನ್​ಗಳನ್ನು ರೆಡ್ಮಿ ಮತ್ತು ಎಂಐ ಎಂಬ ಎರಡು ಭಾಗ ಮಾಡಿದಂತಿದೆ. ಬಜೆಟ್ ಸ್ಮಾರ್ಟ್​​ಫೋನ್​ಗಳಿಗಾಗಿ ರೆಡ್ಮಿ ಮತ್ತು ಹೈ ರೇಂಜ್ ಮಾದರಿಯ ಫೋನ್​ಗೆ ಎಂಐ ಎಂಬಂತಾಗಿದೆ. ಇದೀಗ ರೆಡ್ಮಿಯ ಹೊಸ ಫೋನ್ ಭಾರತದಲ್ಲಿ ಬಿಡುಗಡೆ ಆಗಲು ಸಿದ್ಧವಾಗಿದೆ. ಅದುವೇ ಹೊಸ ರೆಡ್ಮಿ 10A. ಈ ಸ್ಮಾರ್ಟ್‌ಫೋನ್‌ ಏಪ್ರಿಲ್ 20 ರಂದು ಅಂದರೆ ಇಂದು ಭಾರತದಲ್ಲಿ ಅಧಿಕೃತವಾಗಿ ಅನಾವರಣಗೊಳ್ಳಲಿದೆ ಎಂದು ಅಮೆಜಾನ್ ಇಂಡಿಯಾ (Amazon India) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ರೆಡ್ಮಿ 10ಎ (Redmi 10A) ಈಗಾಗಲೇ ಚೀನಾದಲ್ಲಿ ಬಿಡುಗಡೆ ಆಗಿದ್ದು ಅಲ್ಲಿ ಭರ್ಜರಿ ಸೇಲ್ ಕಾಣುತ್ತಿದೆ. ಹಾಗಾದ್ರೆ ಈ ಫೋನಿನ ವಿಶೇಷತೆ ಏನಿರಬಹುದು?, ಅಂದಾಜಿ ಬೆಲೆ ಎಷ್ಟು ಎಂಬುದನ್ನು ನೋಡೋಣ.

ರೆಡ್ಮಿ 10A ಸ್ಮಾರ್ಟ್‌ಫೋನ್‌ 720×1600 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.53 ಇಂಚಿನ HD+ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತದಿಂದ ಕೂಡಿರುವ ಸಾಧ್ಯತೆ ಇದೆ. ಆಕ್ಟಾ-ಕೋರ್ ಮೀಡಿಯಾಟೆಕ್‌ ಹಿಲಿಯೋ G25 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಶ್‌ ಸೌಲಭ್ಯ ಸಹ ನೀಡಲಾಗಿದೆ. ರೆಡ್ಮಿ 10A 10W ಚಾರ್ಜಿಂಗ್‌ಗೆ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G ಮಾದಿರಯ ಫೋನ್ ಅಲ್ಲ. ಬದಲಾಗಿ 4G LTE, Wi-Fi, ಬ್ಲೂಟೂತ್ v5, ಮೈಕ್ರೋ-USB ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ.

ರೆಡ್ಮಿ 10A ಸ್ಮಾರ್ಟ್‌ಫೋನ್‌ 10,000 ರೂ.ಗಿಂತ ಕಡಿಮೆ ಬೆಲೆಗೆ ಭಾರತದಲ್ಲಿ ಖರೀದಿಗೆ ಸಿಗಲಿದೆ ಎಂಬ ಮಾತಿದೆ. ಇದರ 4GB RAM + 64GB ಸ್ಟೋರೇಜ್‌ ಮತ್ತು 6GB RAM + 128GB ಸ್ಟೋರೇಜ್‌ ಸಾಮರ್ಥ್ಯುದ ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ. ವಿದೇಶದಲ್ಲಿ 4GB + 64GB ಬೆಲೆ RMB 649, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 7,740 ರೂ. ಎನ್ನಬಹುದು. ಅಂತೆಯೆ 4GB + 128GB ಮತ್ತು 6GB + 128GB ರೂಪಾಂತರವು ಕ್ರಮವಾಗಿ RMB 799 (ಅಂದಾಜು ರೂ. 9,500) ಮತ್ತು RMB 899, ಭಾರತದಲ್ಲಿ ಅಂದಾಜು ರೂ. 10,720 ಇರಬಹುದೆಂದು ಹೇಳಲಾಗಿದೆ.

OnePlus 10R: ಒನ್​ಪ್ಲಸ್ 10 ಪ್ರೊ ಆಯ್ತು ಈಗ ಒನ್​ಪ್ಲಸ್ 10R ಸರದಿ: ಇದರಲ್ಲಿನ ಫೀಚರ್ಸ್​ ಕೇಳಿದ್ರೆ ಶಾಕ್ ಆಗ್ತೀರ

WhatsApp: ವಾಟ್ಸ್​ಆ್ಯಪ್ ಲಾಸ್ಟ್​ ಸೀನ್​ನಲ್ಲಿ ಊಹಿಸಲಾಗದ ಫೀಚರ್: ಬಳಕೆದಾರರು ಫುಲ್ ಖುಷ್

TV9 Kannada


Leave a Reply

Your email address will not be published.