ರೆಡ್ಮಿ ನೋಟ್ 11 ಎಸ್ಇ (Redmi Note 11SE)., ಈ ಹೊಸ ಸ್ಮಾರ್ಟ್ಫೋನ್ ಚೀನಾ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಕೆಲವೇ ತಿಂಗಳಲ್ಲಿ ಇದು ಭಾರತಕ್ಕೂ ಕಾಲಿಡಲಿದೆ.
ಶವೋಮಿ (Xiaomi) ಕಂಪನಿ ತನ್ನ ಎಂಐ (Mi) ಬ್ರ್ಯಾಂಡ್ ಅಡಿಯಲ್ಲಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವುದು ಸ್ಥಗಿತಗೊಳಿಸಿದ ನಂತರ ರೆಡ್ಮಿ ಬ್ರ್ಯಾಂಡ್ನಡಿಯಲ್ಲಿ ಆಕರ್ಷಕ ಫೋನ್ಗನ್ನು ಪರಿಚಯಿಸುತ್ತಿದೆ. ಈ ಸಾಲಿಗೆ ಇದೀಗ ಮತ್ತೊಂದು ಹೊಸ ಮೊಬೈಲ್ ಸೇರ್ಪಡೆಯಾಗಿದೆ. ಅದುವೇ ರೆಡ್ಮಿ ನೋಟ್ 11 ಎಸ್ಇ (Redmi Note 11SE). ಹೌದು, ಈ ಹೊಸ ಸ್ಮಾರ್ಟ್ಫೋನ್ ಚೀನಾ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಕೆಲವೇ ತಿಂಗಳಲ್ಲಿ ಇದು ಭಾರತಕ್ಕೂ ಕಾಲಿಡಲಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಕೂಡ ನೀಡಲಾಗಿದೆ. ಉಳಿದಂತೆ ಇದರ ಬೆಲೆ ಎಷ್ಟು?, ಇತರೆ ಫೀಚರ್ಗಳು ಏನೆಲ್ಲ ಇವೆ ಎಂಬುದನ್ನು ನೋಡೋಣ.