Redmi Note 11T: ಶವೋಮಿಯಿಂದ ಬಂಪರ್ ಆಫರ್: ರೆಡ್ಮಿ ನೋಟ್ 11T ಉಚಿತವಾಗಿ ಪಡೆಯಿರಿ: ಹೀಗೆ ಮಾಡಿದ್ರೆ ಸಾಕು | Redmi Note 11T You have a chance to win Xiaomis Redmi Note 11T Smartphone for free in Amazon


Redmi Note 11T: ಶವೋಮಿಯಿಂದ ಬಂಪರ್ ಆಫರ್: ರೆಡ್ಮಿ ನೋಟ್ 11T ಉಚಿತವಾಗಿ ಪಡೆಯಿರಿ: ಹೀಗೆ ಮಾಡಿದ್ರೆ ಸಾಕು

Redmi Note 11T

ಭಾರತೀಯ ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿ ಭರ್ಜರಿ ಸುದ್ದಿಯಲ್ಲಿರುವ ಬಹುನಿರೀಕ್ಷಿತ ರೆಡ್ಮಿ ನೋಟ್ 11ಟಿ 5ಜಿ (Redmi Note 11T 5G) ಸ್ಮಾರ್ಟ್​ಫೋನ್ ಇದೇ ನವೆಂಬರ್ 30 ರಂದು ಬಿಡುಗಡೆಗೊಳ್ಳಲಿದೆ. ಈ ಮೂಲಕ ಶವೋಮಿ (Xiaomi) ಭಾರತದಲ್ಲಿ ಮತ್ತೊಮ್ಮೆ ತನ್ನ ಪಾರುಪತ್ಯ ಮೆರೆಯಲು ಸಜ್ಜಾಗಿದೆ. ಆದರೆ, ರಿಲೀಸ್​ಗೂ ಮುನ್ನ ಶವೋಮಿ ಕಂಪನಿ ಬಂಪರ್ ಆಫರ್​ವೊಂದನ್ನು ನೀಡಿದ್ದು ಈ ಸ್ಮಾರ್ಟ್​ಫೋನ್ ಅನ್ನು ನೀವು ಉಚಿತವಾಗಿ ಖರೀದಿಸಬಹುದಾಗಿದೆ. ಹೌದು, ಶವೋಮಿ ಕಂಪನಿ ಅಮೆಜಾನ್ ಇಂಡಿಯಾ (Amazon India) ಜೊತೆ ಪಾಲುದಾರಿಕೆ ಹೊಂದಿದ್ದು ರೆಡ್ಮಿ ನೋಟ್ 11ಟಿ ಅನ್ನು ಸೇಲ್ ಮಾಡಲಿದೆ.

ಇದಕ್ಕೂ ಮುನ್ನ ಅಮೆಜಾನ್​ ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳಲಿದ್ದು, ಅದಕ್ಕೆ ಸರಿಯಾದ ಉತ್ತರ ನೀಡಿದ್ದಲ್ಲಿ ಹೊಸ ರೆಡ್ಮಿ ನೋಟ್ 11T 5G  ಸ್ಮಾರ್ಟ್​ಫೋನ್ ಅನ್ನು ಉಚಿತವಾಗಿ ಖರೀದಿಸಬಹುದು. ಪ್ರಶ್ನೆಗಳು ಮೊಬೈಲ್​ಗೆ ಸಂಬಂಧಿಸಿದ್ದೇ ಆಗಿರುತ್ತದೆ. ಉದಾಹರಣೆಗೆ, ಭಾರತದಲ್ಲಿ ಮೊದಲು ಬಿಡುಗಡೆ ಆದ ರೆಡ್ಮಿ ನೋಟ್ ಫೋನ್ ಯಾವುದು?, ಶವೋಮಿ ಭಾರತದ ಮೊದಲ ಎಂಪ್ಲಾಯ್ ಯಾರು?. ಈರೀತಿ ಪ್ರಶ್ನೆಗಳಿಗೆ ನೀವು ಉತ್ತರಿಸಬೇಕಿದೆ. ಈಗಾಗಲೇ ಇದು ಪ್ರಾರಂಭವಾಗಿದ್ದು ಡಿಸೆಂಬರ್ 15ರ ವರೆಗೆ ನಡೆಯಲಿದೆ. ಅದೃಷ್ಟಶಾಲಿಗೆ ಫೋನ್ ಫ್ರೀ ಆಗಿ ಡಿಸೆಂಬರ್ 31 ರಂದು ಸಿಗಲಿದೆ.

ಹೊಸ ರೆಡ್ಮಿ ನೋಟ್ 11T 5G  ಫೋನ್ ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಯಾದ ರೆಡ್ಮಿ ನೋಟ್ 11 ನ ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎಂದು ಊಹಿಸಲಾಗಿದ್ದು, ಮೂರು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುತ್ತದೆ. ಅಂದರೆ 128GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ ಎಂದು ತಿಳಿಸಲಾಗಿದೆ. ಅಷ್ಟಕ್ಕೂ ಈ ಸ್ಮಾರ್ಟ್​ಫೋನ್ ಇಷ್ಟು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟುಹಾಕಿರುವುದು ಯಾವ ಕಾರಣಕ್ಕಾಗಿ ಗೊತ್ತೇ?.

ರೆಡ್ಮಿ ನೋಟ್ 11T 5G ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಟೀಸರ್ ಮೂಲಕ ಈ ಸ್ಮಾರ್ಟ್‌ಫೋನ್, ವೇಗದ ಪ್ರೊಸೆಸರ್, ಫಾಸ್ಟ್ ಚಾರ್ಜಿಂಗ್, ಹೈಯರ್ ಸ್ಕ್ರೀನ್ ರೆಫ್ರಿಶ್ ರೇಟ್ ಮತ್ತು ಅತ್ಯುತ್ತಮ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ. ಹಾಗೆಯೇ, ಈ ಸ್ಮಾರ್ಟ್ ಫೋನ್, 6GB RAM ಮತ್ತು 64GB ಸ್ಟೋರೇಜ್, 6GB RAM ಮತ್ತು 128GB ಸ್ಟೋರೇಜ್ ಹಾಗೂ 8GB RAM ಮತ್ತು 128GB ಸ್ಟೋರೇಜ್  ವೆರಿಯೆಂಟ್‌ಗಳಲ್ಲಿ ದೊರೆಯಲಿದೆ ಎನ್ನಲಾಗಿದೆ.

ಈ ಸ್ಮಾರ್ಟ್‌ಫೋನ್ ಒಟ್ಟು ಮೂರು ಬಣ್ಣಗಳ ಆಯ್ಕೆಯಲ್ಲಿ ಮಾರಾಟಕ್ಕೆ ಸಿಗಲಿದೆ. ಅಕ್ವಾಮರಿನ್ ಬ್ಲೂ, ಮ್ಯಾಟ್ ಬ್ಲ್ಯಾಕ್ ಮತ್ತು ಸ್ಟಾರ್‌ಡಸ್ಟ್ ವೈಟ್ ಬಣ್ಣಗಳಲ್ಲಿ ಸಿಗಲಿದೆ. ಸೋರಿಕೆಯಾದ ರೆಡ್ಮಿ ನೋಟ್ 11T 5G ಫೋನಿನ ಕೆಲವು ನಿರ್ದಿಷ್ಟ ವಿವರಗಳನ್ನು ನೋಡುವುದಾದರೆ, 90Hz ರಿಫ್ರೆಶ್ ರೇಟ್ ಮತ್ತು 240Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ ಪೂರ್ಣ-HD+ (1,080×2,400 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದೆ ಎಂದು ಹೇಳಲಾಗಿದೆ.

ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಯಿಂದ ಚಾಲಿತವಾಗಿದೆ, ಅಂದರೆ, ಈ ಪ್ರೊಸೆಸರ್ ವೇಗವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.  ಜೊತೆಗೆ 8GB ವರೆಗಿನ LPDDR4X RAM ಅನ್ನು ಹೊಂದಿರಲಿದೆ ಎಂದು ವರದಿಗಳಲ್ಲಿ ಹೇಳಲಾಗಿದೆ. ವಿಶೇಷ ಎಂದರೆ, ರೆಡ್‌ಮಿ ಈ ಫೋನಿನ ಕ್ಯಾಮೆರಾವನ್ನು ಅಪ್‌ಗ್ರೇಡ್ ಮಾಡಿದೆ ಎನ್ನಲಾಗಿದೆ. ಫೋನ್ ಹಿಂಬದಿಯಲ್ಲಿ 50 ಮೆಗಾ ಪಿಕ್ಸೆಲ್ ಮತ್ತು 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ ಶೂಟರ್‌ರೊಂದಿಗೆ ಎರಡು ಕ್ಯಾಮೆರಾಗಳು ಇರಲಿವೆ ಎನ್ನಲಾಗಿದೆ. ಜೊತೆಗೆ, ಮುಂಬದಿಯಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ ಎನ್ನಲಾಗಿದೆ.

ರೆಡ್ಮಿ ನೋಟ್ 11T 5G 128GB UFS 2.2 ಸಂಗ್ರಹಣೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದ್ದು, ಇದು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಬಹುದು ಎಂದು ಊಹಿಸಲಾಗಿದೆ. ಇದರ ಬೆಲೆ ಎಷ್ಟಿರಬಹುದೆಂದು ಇನ್ನೂ ಬಹಿರಂಗವಾಗಿಲ್ಲ.

Lava Agni 5G: ವಿದೇಶಿ ಕಂಪನಿಗಳ ಹುಟ್ಟಡಗಿಸಿದ ಲಾವಾ ಅಗ್ನಿ 5G ಫೋನ್ ಖರೀದಿಗೆ ಲಭ್ಯ: ಮೊದಲ ದಿನವೇ ಭರ್ಜರಿ ಸೇಲ್

Moto G Power 2022: 5000mAh ಬ್ಯಾಟರಿ, ಪವರ್​ಫುಲ್ ಚಾರ್ಜರ್: ಮೋಟೋ G ಪವರ್‌ 2022 ಸ್ಮಾರ್ಟ್‌ಫೋನ್‌ ಬಿಡುಗಡೆ

(Redmi Note 11T You have a chance to win Xiaomis Redmi Note 11T Smartphone for free in Amazon)

TV9 Kannada


Leave a Reply

Your email address will not be published. Required fields are marked *